Chikkamagaluru,ಡಿ.22- ಮನೆಗಳ್ಳನ ಮಾಡಿದ ಆರೋಪಿಗಳನ್ನು ತರೀಕೆರೆ ಠಾಣೆ ಪೊಲೀಸರು 24 ಘಂಟೆಯೊಳಗೆ ಬಂಧಿಸಿ 8.76 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 8.90 ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತರೀಕೆರೆಯ ಕೋಡಿಕ್ಯಾಂಪ್ 9ನೇ ತಿರುವಿನ ಚಿಕ್ಕೇರೆಯ ತವಕ್ಕಲ್‌ಮುಸ್ತಾನ್ ಅವರ ಮನೆಯ ಶೀಟ್ ತೆಗೆದು ಡಿ 20ರಂದು ಒಳನುಗ್ಗಿರುವ ಕಳ್ಳರು 73.5 ಗ್ರಾಂ ಚಿನ್ನಾಭರಣಗಳನ್ನು ಹಾಗೂ 8.90 ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದರು. ಈ ಸಂಬಂಧ ಮನೆಯ ಮಾಲೀಕ ನೀಡಿದ ದೂರನ್ನು ನೀಡಿದ್ದರು.
ಈ ಪ್ರಕರಣದ ಆರೋಪಿಯನ್ನು ಕೂಡಲೇ ಪತ್ತೆ ಹಚ್ಚುವಂತೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಅವರು ತರೀಕೆರೆ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿದ್ದರು. ಕೂಡಲೇ ಕಾರ್ಯಪ್ರವೃತ್ತವಾದ ತಂಡ ಕೋಡಿಕ್ಯಾಂಪ್ ಚಿಕ್ಕೆರೆಯ ಸಯ್ಯದ್‌ಸಾಧಿಕ್ ಎಂಬಾತನನ್ನು ಬಂಧಿಸಿ ಆರೋಪಿಯಿಂದ ಕಳ್ಳತನ ಮಾಡಿದ್ದ ಸುಮಾರು 8.76 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 8.90 ಲಕ್ಷ ರೂ. ನಗದನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ವಿಶೇಷ ಕಾರ್ಯಾಚರಣೆಯಲ್ಲಿ ಎಸ್ಪಿ ಡಾ.ವಿಕ್ರಮ್‌ಅಮಟೆ, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಸಿ.ಟಿ. ಜಯಕುಮಾರ್, ತರೀಕೆರೆ ಡಿವೈಎಸ್‌ಪಿ ಪರಶುರಾಮಪ್ಪ, ಅವರ ಮಾರ್ಗದರ್ಶನದಲ್ಲಿ ತರೀಕೆರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರನಾಯಕ, ಠಾಣಾಧಿಕಾರಿಗಳಾದ ನಾಗೇಂದ್ರನಾಯ್ಕ್ ,ಮಂಜುನಾಥ್ ಮನ್ನಂಗಿ , ದೇವೇಂದ್ರ ರಾಥೋಡ್, ಎ.ಎಸ್.ಐ ರವಿ ಪಾಲ್ಗೊಂಡಿದ್ದರು.
Read also : 16 ವರ್ಷ ಹಿಂದಿನ ಕೊಲೆ ಪ್ರಕರಣದಲ್ಲಿ ದಂಪತಿ ಅರೆಸ್ಟ್
