ಬೆಳ್ತಂಗಡಿ,ಜ.1- ಶ್ರೀ ಕ್ಷೇತ್ರ ಧರ್ಮಸ್ಥಳವು ವಿವಿಧ ಭಗೆಯ ಹೂವು-ಎಲೆಗಳ ಅಲಂಕಾರದಿಂದ ಎಲ್ಲರ ಕಣನ ಸೆಳೆಯುತ್ತಿದೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರಿನ ಭಕ್ತರಾದ ಗೋಪಾಲರಾವ್ ಮತ್ತು ಆನಂದ ರಾವ್ ಬಳಗದವರು ಧರ್ಮಸ್ಥಳದಲ್ಲಿ ದೇವಸ್ಥಾನದ ಒಳಾಂಗಣ, ಹೊರಾಂಗಣ, ಬೀಡು (ಹೆಗ್ಗಡೆಯವರ ನಿವಾಸ) ಹಾಗೂ ಕಟ್ಟಡಗಳನ್ನು ವಿವಿಧ ಜಾತಿಯ ಹೂವು ಮತ್ತು ಎಲೆಗಳನ್ನು ಬಳಸಿ ಆಕರ್ಷಕ ವಿನ್ಯಾಸದಿಂದ ಸಿಂಗರಿಸಿದ್ದಾರೆ.
ಹಳದಿ ಸೇವಂತಿಗೆ, ಬಿಳಿ ಸೇವಂತಿಗೆ, ಕೆಂಪು ಸೇವಂತಿಗೆ, ಗುಲಾಬಿ ಬಟನ್, ರೋಸ್‌ಪೆಟಲ್‌್ಸ, ಸುಗಂಧರಾಜ ಮೊದಲಾದ ಹೂವುಗಳು, ಸೇಬು, ಮುಸುಂಬಿ ಮತ್ತು ಕಿತ್ತಳೆ ಸೇರಿದಂತೆ ವಿವಿಧ ಬಗೆಯ ಹಣ್ಣುಗಳು, ವಿವಿಧ ಜಾತಿಯ ಎಲೆಗಳಿಂದ ಆಕರ್ಷಕ ರೀತಿಯಲ್ಲಿ ಅಲಂಕರಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ 150 ಮಂದಿ ಸ್ವಯಂಸೇವಕರಾಗಿ ಅಲಂಕಾರ ಸೇವೆಯಲ್ಲಿ ತೊಡಗಿದ್ದು, ಶ್ರೀ ಮಂಜುನಾಥ ಸ್ವಾಮಿಗೆ ಭಕ್ತಿ ಮೆರೆದಿದ್ದಾರೆ.
