Friday, December 12, 2025
Homeಜಿಲ್ಲಾ ಸುದ್ದಿಗಳುಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿನಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿನಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ

Helmets mandatory for two-wheeler riders in Chikkaballapur district from today

ಚಿಕ್ಕಬಳ್ಳಾಪುರ,ಡಿ.12- ಜಿಲ್ಲೆಯಾದ್ಯಂತ ಇಂದಿನಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿದ್ದು ಹೆಲೆಟ್‌ ಹಾಕದೆ ವಾಹನ ಚಲಾಯಿಸಿದರೆ ದಂಡ ಖಚಿತ ಎಂದು ಜಿಲ್ಲಾ ಪೊಲೀಸ್‌‍ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಅದರಂತೆ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ ಇಂದು ಬೆಳಗ್ಗೆಯಿಂದಲೇ ಪೊಲೀಸರು ನಾನಾ ಪ್ರಮುಖ ವೃತ್ತಗಳಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದು ಹೆಲೆಟ್‌ ಹಾಕಿಕೊಂಡು ಬಾರದವರ ಬಗ್ಗೆ ತೀವ್ರ ನಿಗಾ ಇಟ್ಟು ದಂಡ ವಿಧಿಸುವ ಕಾರ್ಯಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಿದ್ದಾರೆ.

ಇದಕ್ಕೆ ಪೂರಕವಾಗಿ ಇಂದು ಸಹ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಕುಶಲ್‌ ಚೌಕ್ಸೆ, ಹೆಚ್ಚುವರಿ ಪೊಲೀಸ್‌‍ ವರಿಷ್ಠಾಧಿಕಾರಿ ಪೊಲೀಸ್‌‍ ಉಪ ಅಧಿಕ್ಷಕ, ನಗರ ಹಾಗೂ ಸಂಚಾರಿ ಪೊಲೀಸ್‌‍ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸೇರಿ ಎಲ್ಲಾ ಪೊಲೀಸ್‌‍ ಅಧಿಕಾರಿಗಳ ಮೂಲಕ ನಗರದ ಕೆ ಎಸ್‌‍ ಆರ್‌ ಟಿ ಸಿ ಬಸ್‌‍ ನಿಲ್ದಾಣ ಮುಂಭಾಗದಲ್ಲಿ ಚಿಕ್ಕಬಳ್ಳಾಪುರ ನಗರ ಪೊಲೀಸ್‌‍, ಸಂಚಾರಿ ಪೊಲೀಸ್‌‍ ಠಾಣೆಯ ಹೆಲೆಟ್‌ ಧರಿಸಿ ಬೈಕ್‌ ಸವಾರಿ ನಡೆಸುವ ಮೂಲಕ ಚಾಲನೆ ನೀಡಿದರು.

ಜಿಲ್ಲೆಯ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಗುಡಿಬಂಡೆ, ಗೌರಿಬಿದನೂರು, ಬಾಗೇಪಲ್ಲಿ, ಚೇಳೂರು ಶಿಡ್ಲಘಟ್ಟ ಹಾಗೂ ಮಂಚೇನಹಳ್ಳಿ ಏಳು ತಾಲೂಕುಗಳಲ್ಲಿ ಹೆಲೆಟ್‌ ಕಡ್ಡಾಯವನ್ನು ಜಾರಿಗೊಳಿಸಲಾಗಿದ್ದು ಈ ಕಡ್ಡಾಯದ ಕುರಿತು ಈಗಾಗಲೇ ಕಳೆದ ಒಂದು ತಿಂಗಳಿಂದಲೂ ಜಿಲ್ಲೆಯಾದ್ಯಂತ ಸಾಕಷ್ಟು ಜಾಗೃತಿ ಮೂಡಿಸಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಇದಕ್ಕೆ ಪೊಲೀಸ್‌‍ ಇಲಾಖೆ ಜೊತೆ ಹಲವು ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳು ಕೈ ಜೋಡಿಸಿದ್ದವು.

ಪೊಲೀಸರ ಹೆಲೆಟ್‌ ಕಡ್ಡಾಯಗೊಳಿಸಿ ಜಾಗೃತಿ ಮೂಡಿಸುತ್ತಿದ್ದಂತೆ ಸಮಾಜ ಸೇವಕ ಹೋಟೆಲ್‌ ಮಾಲೀಕ ಹೆಲೆಟ್‌ ರಾಮಣ್ಣ ಎಂಬವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ನೂರಕ್ಕೂ ಅಧಿಕ ಹೆಲೆಟ್‌ಗಳನ್ನು ಉಚಿತವಾಗಿ ನೀಡಿ ಉದಾರ ತೋರಿದರು. ಅಲ್ಲದೆ ಪ್ರತಿಯೊಬ್ಬರು ಹೆಲೆಟ್‌ ಹಾಕಿಕೊಂಡು ವಾಹನ ಚಲಾಯಿಸಬೇಕು ಹಾಗೂ ಇತರರಿಗೂ ಹೆಲೆಟ್‌ ಬಳಕೆಯಿಂದ ಆಗುವ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೆಲೆಟ್‌ ರಾಮಣ್ಣ ಅವರು ಸಲಹೆ ನೀಡಿದರು. ಅಲ್ಲದೆ ನಮ ಮೊಬೈಲ್‌ಗಳಿಗೆ ಸಾವಿರಾರು ರೂ. ಕೊಟ್ಟು ಸ್ಕ್ರೀನ್‌ ಗಾರ್ಡ್‌ ಹಾಕಿಸುತ್ತೇವೆ, ಅಪಘಾತ ಆದ ಸಂದರ್ಭದಲ್ಲಿ ನಮ ಸಾವು ನೋವಿನಿಂದ ನಮ ಕುಟುಂಬವೇ ಅನಾಥವಾಗುತ್ತದೆ ಎನ್ನುವ ಅರಿವಿಲ್ಲದೆ ನಾವು ನಡೆದುಕೊಳ್ಳುವುದು ದುರದೃಷ್ಟಕರ. ಹಾಗಾಗಿ ಪೊಲೀಸರು ನೀಡುವ ಎಚ್ಚರಿಕೆಗಳನ್ನು ಪ್ರತಿಯೊಬ್ಬರು ಪರಿ ಪಾಲಿಸಬೇಕು ಎಂದು ಸೂಚ್ಯವಾಗಿ ಯುವಕರಿಗೆ ಸಲಹೆ ನೀಡಿದರು.

ಹೆಲೆಟ್‌ ಕಡ್ಡಾಯಕ್ಕೆ ಸಹಕಾರ ಇರಲಿ ಕಳಕಳಿ :
ಇಡೀ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿಂದಲೂ ಪೊಲೀಸ್‌‍ ಇಲಾಖೆ ಇಂದಿನಿಂದ ಕಡ್ಡಾಯವಾಗಿ ಹೆಲೆಟ್‌ ಹಾಕುವ ಕುರಿತಾಗಿ ನಾನಾ ರೀತಿಯ ಜಾಗೃತಿ ಮೂಡಿಸಿದ್ದು, ಇದು ಕೆಲವೇ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗದಿರಲಿ. ನಮ ಪ್ರಾಣ ನಮ ಹಕ್ಕು ಎಂಬಂತ ನಿಲುವು ನಮದಾಗಿರಲಿ. ರಸ್ತೆ ಸುರಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ ನಮ ಪ್ರಾಣದೊಂದಿಗೆ ನಾವೇ ಚೆಲ್ಲಾಟ ಆಡುವುದು ಸರಿಯಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಪ್ಲಾಸ್ಟಿಕ್‌ ಅಭಿಯಾನ ದೊಡ್ಡ ಮಟ್ಟದಲ್ಲಿ ಮಾಡಲಾಗಿದ್ದು, ಅದು ಕೆಲವೇ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿ ಪ್ಲಾಸ್ಟಿಕ್‌ ನಿಷೇಧ ಎಂಬುದು ಕೇವಲ ಘೋಷಣೆ ಮತ್ತು ಆಂದೋಲನಕ್ಕೆ ಮಾತ್ರ ಸೀಮಿತವಾಯಿತು. ಅಂತಹ ಘೋಷಣೆ ಮತ್ತು ಅಭಿಯಾನಕ್ಕೆ ಮಾತ್ರ ಹೆಲೆಟ್‌ ಕಡ್ಡಾಯ ಆಗಬಾರದು. ನಮ್ಮ ಸುರಕ್ಷತೆಗಾಗಿ ಹೆಲೆಟ್‌ ಕಡ್ಡಾಯವಾಗಿ ಅಳವಡಿಸಿಕೊಳ್ಳೋಣ. ಇತರರಿಗೂ ಈ ಬಗ್ಗೆ ಜಾಗೃತಿ ಮೂಡಿಸೋಣ ಇದು ಈ ಸಂಜೆ ದಿನಪತ್ರಿಕೆಯ ಕಳಕಳಿ ಕೂಡ.

RELATED ARTICLES

Latest News