Friday, January 23, 2026
Homeಜಿಲ್ಲಾ ಸುದ್ದಿಗಳುಹಳ್ಳಿ ಜೀವನಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ

ಹಳ್ಳಿ ಜೀವನಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ

Newlywed commits suicide after getting fed up with village life

ಕಲಬುರಗಿ,ಜ.23-ಹಳ್ಳಿ ಜೀವನಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತಾಲ್ಲೂಕಿನ ಸಿದ್ದೇಶ್ವರ ಕಾಲೋನಿ ನಿವಾಸಿ ಅನುಸೂಯ (26) ಆತಹತ್ಯೆಗೆ ಶರಣಾದ ನವವಿವಾಹಿತೆ.

ಅತ್ತೆ ಮಗನನ್ನು ಪ್ರೀತಿಸುತ್ತಿದ್ದ ಅನುಸೂಯ ಅವರು ಎರಡು ತಿಂಗಳ ಹಿಂದೆಯಷ್ಟೇ ಆತನನ್ನು ಮದುವೆಯಾಗಿದ್ದರು. ತದ ನಂತರದ ದಿನಗಳಲ್ಲಿ ಹಳ್ಳಿಯ ಜೀವನ ಆಕೆಗೆ ಬೇಸರ ತಂದಿದೆ. ತನ್ನ ಅಕ್ಕಂದಿರು ಮುಂಬೈ ಹಾಗೂ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಆದರೆ ನಾನು ಹಳ್ಳಿಯಲ್ಲಿದ್ದೇನೆ ಎಂದು ಅನಸೂಯ ಆಗಾಗ್ಗೆ ಬೇಸರಪಟ್ಟುಕೊಂಡಿದ್ದರು.

ಹಳ್ಳಿಯ ಜೀವನದಿಂದ ನೆಮದಿಯ ಬದುಕು ಎಂದು ಆಕೆ ಯೋಚಿಸಲೇ ಇಲ್ಲ. ತನ್ನನ್ನು ಪ್ರೀತಿಸುವ ಪತಿ ಹಾಗೂ ಕುಟುಂಬದವರು ತನ್ನ ಬಗ್ಗೆ ಹಲವಾರು ಕನಸು ಕಟ್ಟಿಕೊಂಡಿದ್ದಾರೆಂದು ಅರಿಯದೇ ಅನುಸೂಯ ಅವರು ದುಡುಕಿನ ನಿರ್ಧಾರ ಕೈಗೊಂಡು ಆತಹತ್ಯೆಗೆ ಶರಣಾಗಿದ್ದಾರೆ.
ನವವಿವಾಹಿತೆಯ ಆತಹತ್ಯೆಯಿಂದ ಕುಟುಂಬ ಕಂಗಾಲಾಗಿದೆ.

RELATED ARTICLES

Latest News