ಶಿವಮೊಗ್ಗ,ಡಿ.6- ವೈದರ ನಿವಾಸದಲ್ಲಿ ಸಾಲು ಸಾಲು ಸಾವು ಜನರನ್ನು ಬೆಚ್ಚಿ ಬೀಳಿಸಿದೆ. ಅಶ್ವಥನಗರದಲ್ಲಿರುವ ಸಾ ನಿಧ್ಯನಿವಾಸದಲ್ಲಿ ಈ ಘಟನೆ ಸಾಕ್ಷಿಯಾಗಿದ್ದು ಆದ್ರೆ ಎಲ್ಲವೂ ಆತ್ಮಹತ್ಯೆ ಅನ್ನೋದೆ ಅಚ್ಚರಿಯ ಸಂಗತಿಯಾಗಿದೆ.
ಡಾಕ್ಟರ್ ಕುಟುಂಬದ ಸಾವು ಹಾಗೂ ಸಾನಿಧ್ಯ ಮನೆಯ ನಿಗೂಢತೆ ಜನರಲ್ಲಿ ಭಯ ಮೂಡಿಸಿದೆ. ಅಮ್ಮ-ಮಗ ನೇಣಿಗೆ ಶರಣುಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆಯಾಗಿ ಹೆಸರು ಮಾಡಿದ್ದ ಡಾ. ಜಯಶ್ರೀ ಹಾಗೂ ಮಗ ಆಕಾಶ್ ಮೃತ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಇದೇ ಮನೆಯಲ್ಲಿ ಕಳೆದ 6 ತಿಂಗಳ ಹಿಂದೆ ಜಯಶ್ರೀ ಸೊಸೆ ಕೂಡ ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ ಜಯಶ್ರೀ ಗಂಡ ಡಾ. ನಾಗರಾಜ್ ಹೊಮರಡಿ ಕೂಡ ತಹತ್ಯಗೆ ಶರಣಾಗಿದ್ದರು. ಡೆತ್ ನೋಟ್ ಬರೆದಿಟ್ಟ ಡಾ ಜಯಶ್ರೀ ಹಾಗೂ ಆಕಾಶ್ ಪ್ರತ್ಯೇಕ ಕೊಠಡಿಗಳಲ್ಲಿ ಅತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಎನ್ನಲಾಗ್ತಿದೆ. ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. 13 ವರ್ಷದ ಹಿಂದೆ ರಾಜಶೇಖರ್ ಎಂಬುವವರರಿಂದ ಈ ಮನೆ ಖರೀದಿಸಲಾಗಿತ್ತು .
