Tuesday, January 27, 2026
Homeಜಿಲ್ಲಾ ಸುದ್ದಿಗಳುಉಡುಪಿ : ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಪ್ರವಾಸಿಗರ ದೋಣಿ ಮಗುಚಿ ಇಬ್ಬರ ಸಾವು

ಉಡುಪಿ : ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಪ್ರವಾಸಿಗರ ದೋಣಿ ಮಗುಚಿ ಇಬ್ಬರ ಸಾವು

'Two killed as tourist boat capsizes off Malpe coast in K'taka: Police

ಉಡುಪಿ,ಜ.27- ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಪ್ರವಾಸಿಗರ ದೋಣಿ ಮಗುಚಿ ಸಂಭವಿಸಿದ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉಡುಪಿಯ ಡೆಲ್ಟಾ ಬೀಚ್‌ ಕೋಡಿಬೆಂಗ್ರೆಯಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಮೈಸೂರಿನ ಶಂಕರಪ್ಪ( 22) ಹಾಗೂ ಸಿಂಧು (23) ಎಂದು ಗುರುತಿಸಲಾಗಿದೆ.ಉಡುಪಿಯ ಸಮುದ್ರ ವಿಹಾರಕ್ಕೆ ಬಂದಿದ್ದ 28 ಜನರ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.

ಮೈಸೂರಿನ ಬಿಪಿಒ ಕಾಲ್‌ ಸೆಂಟರ್‌ವೊಂದರ 28 ಮಂದಿ ಪ್ರವಾಸಿಗರ ತಂಡ ಇಲ್ಲಿಗೆ ಬಂದಿತ್ತು.ಎರಡು ಪ್ರವಾಸಿ ಬೋಟುಗಳಲ್ಲಿ 28 ಮಂದಿ ಕಡಲಿಗೆ ಇಳಿದಿದ್ದರು. ಎಲ್ಲ ಪ್ರವಾಸಿಗರಿಗೂ ಭದ್ರತೆಯ ದೃಷ್ಟಿಯಿಂದ ಲೈಫ್‌ ಜಾಕೆಟ್‌ ನೀಡಲಾಗಿತ್ತು. ಈ ಪೈಕಿ ಹಲವರು ಜಾಕೆಟ್‌ ಧರಿಸಿದರೆ ಇನ್ನು ಕೆಲವರು, ಹಾಗೇನೇ ಬೋಟ್‌ ಹತ್ತಿದ್ದರು.

ಕಡಲಿನಲ್ಲಿ ಬೋಟ್‌ ಸಾಗುತ್ತಿದ್ದಂತೆ ಕೆಲ ಪ್ರವಾಸಿಗರು ಬೋಟ್‌ನಲ್ಲಿ ಕುಣಿಯಲು ಆರಂಭಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಬೋಟು ಮಗಚಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.ಇದನ್ನು ಕಂಡ ಸ್ಥಳೀಯರು ಇನ್ನೊಂದು ಬೋಟಿನ ಮೂಲಕ ನೆರವಿಗೆ ದಾವಿಸಿ ನೀರಿನಲ್ಲಿ ಮುಳುಗಿದವರನ್ನು ಮೇಲಕ್ಕೆತ್ತಿದ್ದರು. ಹಲವು ಮಂದಿ ಲೈಫ್‌ ಜಾಕೆಟ್‌ ಧರಿಸಿದ್ದರಿಂದ ಸುಲಭವಾಗಿ ಮತ್ತೊಂದು ಬೋಟ್‌ಗೆ ಶಿಫ್‌್ಟ ಮಾಡಲಾಯಿತು.

ಗಂಭೀರವಾಗಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.ಈ ಪ್ರಕರಣದಲ್ಲಿ ಪ್ರವಾಸಿಗರ ನಿರ್ಲಕ್ಷದಿಂದಲೇ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಸ್ವಸ್ಥಗೊಂಡವರಿಗೆ ಮಲ್ಪೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

RELATED ARTICLES

Latest News