ಹನೂರು,ಅ.21- ತಾಲೂಕಿನ ಪ್ರಸಿದ್ದ ಧಾರ್ಮಿಕ ಪುಣ್ಯ ಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ದೀಪಾವಳಿ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡು ಶ್ರೀ ಸ್ವಾಮಿ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಸಲ್ಲಿಸಿದರು.
ವರ್ಷಕ್ಕೊಮೆ ನಡೆಯುವ ದೀಪಾವಳಿ ಜಾತ್ರೆ ಅಮಾವಾಸ್ಯೆ ಮಹೋತ್ಸವದ ಪ್ರಯುಕ್ತ ಮುಂಜಾನೆ ಎಣ್ಣೆ ಮಜ್ಜನ ಸೇವೆ, ಬಿಲ್ವಾರ್ಚನೆ ಮಹಾ ಮಂಗಳಾರತಿ, ನೀರಭಿಷೇಕ, ಪನ್ನೀರು, ಎಳೆನೀರು, ರುದ್ರಾಭಿಷೇಕ, ಪುಷ್ಪಾರ್ಚನೆ, ಗಂಧಾಭಿಷೇಕ ವಿವಿಧ ಪೂಜೆಗಳನ್ನು ನೆರವೇರಿಸಿದವು.
ದೀಪಾವಳಿ ಜಾತ್ರೆಗೆ ಆಗಮಿಸಿದಂತ ಲಕ್ಷಾಂತರ ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಧರ್ಮ ದರ್ಶನ ಪಡೆಯಲು ಪ್ರಾಧಿಕಾರದಿಂದ ಅನುವು ಮಾಡಿ ಕೊಡಲಾಯಿತು. ಇನ್ನು ಕೆಲವು ಭಕ್ತರು 500 ಹಾಗೂ 250 ರೂಗಳ ಟಿಕೆಟ್ ಪಡೆದು ಸ್ವಾಮಿಯ ನೇರ ದರ್ಶನಕ್ಕೆ ಹೆಜ್ಜೆ ಹಾಕುತ್ತಿದ್ದರು.
ದೀಪಾವಳಿ ಜಾತ್ರೆಗೆ ಆಗಮಿಸಿದ ಭಕ್ತರು ಬೆಳ್ಳಿ, ಚಿನ್ನ ರಥೋತ್ಸವ ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟಪಗಳನ್ನು ಮೆರೆವಣಿ ವೀಕ್ಷಿಸಿದರು.ಇನ್ನೂ ಅಲವು ಭಕ್ತರು ಅಂತರಗಂಗೆಯಲ್ಲಿ ಮಿಂದೆದ್ದು ದೇಗುಲ ಸುತ್ತಲು ಉರುಳು ಸೇವೆ ನೆರವೇರಿಸಿದರೆ ಮತ್ತಷ್ಟು ಮಂದಿ ಭಕ್ತರು ಪಂಜಿನ ಸೇವೆ ಇನ್ನಿತರ ಉತ್ಸವಗಳಲ್ಲಿ ಭಾಗಿಯಾಗಿ ತಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ತೀರಿಸಿದರು.
ಅಲ್ಲದೆ ಹುಂಡಿಯಲ್ಲಿ ಒಡವೆ ಹಣದ ಕಾಣಿಕೆಗಳನ್ನು ಹಾಕಿದರು. ವಿವಿಧ ಉತ್ಸವ ಮೂರ್ತಿ ಮೆರವಣಿಗೆಗಳಲ್ಲಿ ಧವಸಧಾನ್ಯ ಚಿಲ್ಲರೆ ಕಾಸುಗಳನ್ನು ತೀರಿನ ಮೇಲೆ ಎಸೆದು ಉಘೇ ಮಾದಪ್ಪ ನಾಮ ಸರಣೆಯ ಹಷೋರ್ಘಾದ್ಗಾರ ಮುಳುಗಿಸಿದರು.
ಎಣ್ಣೆ ಮಜ್ಜನ ಮಾದಪ್ಪನ ನರಕ ಚತುರ್ಧಶಿ ವಿಷೇಶ ಪೂಜೆ ಪುನಸ್ಕಾರಗಳ ಇಂದು ಅಮಾವಾಸ್ಯೆ ಪೂಜೆಗಳು ಹಾಲರುವೆ ಉತ್ಸವಗಳು ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳು ನೂರೊಂದು ಕಳಸ ಹೊತ್ತು ಸುಮಾರು 7ಕಿಮಿ. ದೂರದಿಂದ ಉಪವಾಸ ಇದ್ದು ಕಾಲ್ನಾಡಿಗೆಯಲ್ಲಿ ಸತ್ತಿಗೆ ಸೋರಿ ಪಾಣಿ ವಾದ್ಯ ಮೇಳಗಳ ಮೂಲಕ ಶ್ರದ್ಧಾ ಭಕ್ತಿಯಿಂದ ಹಾಲರವಿ ಹೊತ್ತು ದೇಗುಲಕ್ಕೆ ಆಗಮಿಸಿ ದೇಗುಲವನ್ನು ಪ್ರದರ್ಶನ ಹಾಕಿ ಮಹಾದೇವನಿಗೆ ಸಮರ್ಪಣೆ ನೆರವೇರಿಸಿದರು. ನಾಳೆ ಮಹಾರಾತ್ಯೋತ್ಸವ ಮೂಲಕ ದೀಪಾವಳಿ ಜಾತ್ರೆ ಮುಕ್ತಾಯಗೊಳ್ಳಲಿದೆ.