Friday, September 20, 2024
Homeರಾಜಕೀಯ | Politicsಚನ್ನಪಟ್ಟಣ ಚುನಾವಣೆಯನ್ನು ಪ್ರತಿಷ್ಠೆಯಾಗಿಸಿಕೊಂಡ ಡಿಕೆಶಿ, ರಜಾ ದಿನವೂ ಫುಲ್ ಬ್ಯುಸಿ

ಚನ್ನಪಟ್ಟಣ ಚುನಾವಣೆಯನ್ನು ಪ್ರತಿಷ್ಠೆಯಾಗಿಸಿಕೊಂಡ ಡಿಕೆಶಿ, ರಜಾ ದಿನವೂ ಫುಲ್ ಬ್ಯುಸಿ

DK Shivakumar tke Channapatna election as prestige

ಬೆಂಗಳೂರು, ಸೆ.1- ಚನ್ನಪಟ್ಟಣ ವಿಧಾನ ಸಭೆ ಉಪಚುನಾವಣೆಯನ್ನು ಸವಲಾಗಿ ಸ್ವೀಕರಿಸುವ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌ ಇಂದು ರಜಾ ದಿನವೂ ವಿಶ್ರಾಂತಿ ಪಡೆಯದೆ ಜನಸ್ಪಂದನ ಸಭೆ ನಡೆಸಿದ್ದಾರೆ.ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿದ್ದ ಎಚ್‌.ಡಿ. ಕುಮಾರಸ್ವಾಮಿ, ಸಂಡೂರು ಕ್ಷೇತ್ರದ ಇ. ತುಕರಾಂ, ಶಿಗ್ಗಾಂವಿ ಕ್ಷೇತ್ರದ ಬಸವರಾಜ ಬೊಮಾಯಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿರುವುದರಿಂದ ತೆರವಾಗಿರುವ ಈ ಮೂರು ಕ್ಷೇತ್ರಗಳಿಗೆ ವಿಧಾನ ಸಭೆ ಉಪಚುನಾವಣೆ ನಡೆಯಬೇಕಿದೆ.

ಅದರಲ್ಲೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತರದಲ್ಲಿ ಡಿ.ಕೆ. ಸುರೇಶ್‌ ಸೋಲುಕಂಡ ಬಳಿಕ ಡಿ.ಕೆ. ಶಿವಕುಮಾರ್‌ ಚನ್ನಪಟ್ಟಣದ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿದ್ದಾರೆ. ಉಪಚುನಾವಣೆಯಲ್ಲಿ ಜೆಡಿಎಸ್‌‍ ಹಾಗೂ ಬಿಜೆಪಿಯ ಮೈತ್ರಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ತಮ ಸಹೋದರನ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.

ಈಗಾಗಿ ಚನ್ನಪಟ್ಟಣ ಕ್ಷೇತ್ರಕ್ಕೆ ಪದೆ ಪದೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ನಾಲ್ಕು ಜನಸ್ಪಂದನ ಸಭೆಗಳನ್ನು, ಒಂದು ಬೃಹತ ಉದ್ಯೋಗ ಮೇಳವನ್ನು ನಡೆಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಕ್ಷೇತ್ರ ರಾಮನಗರ ಬಿಟ್ಟು, ಕನಕಪುರದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಡಿ.ಕೆ ಶಿವಕುಮಾರ್‌ ಅಚ್ಚರಿ ಮೂಡಿಸಿದರು. ಇದು ವಿಧಾನ ಸಭೆಯ ಉಪಚುನಾವಣೆ ಹಿನ್ನಲೆಯಲ್ಲಿ ತೆಗೆದುಕೊಳ್ಳಲಾಗುತ್ತಿರಯವ ಕ್ರಮಗಳು ಎಂಬ ವ್ಯಾಖಾನಿಗಳಿಗೆ ಕಾರಣವಾಯಿತು.

ಅಭ್ಯರ್ಥಿ ಆಯ್ಕೆ ವಿಚಾರವಾಗಿ ಈವರೆಗೂ ಕಾಂಗ್ರೆಸ್‌‍ ಯಾವುದೇ ನಿಧಾರಗಳನ್ನು ತೆಗೆದುಕೊಂಡಿಲ್ಲ ಒಂದು ಹಂತದಲ್ಲಿ ಡಿ.ಕೆ. ಶಿವಕುಮಾರ್‌ ನಾನೆ ಅಭ್ಯರ್ಥಿ ಯಾರೇ ಸ್ಪರ್ಧೆ ಮಾಡಿದ್ದರೂ ಜನ ನನಗೆ ಮತ ಹಾಕಬೇಕು ಎಂದು ಹೇಳುವ ಮೂಲಕ ಪ್ರತಿಷ್ಟೆಯನ್ನು ಪಣಕ್ಕೆ ಹೊಡ್ಡಿದ್ದಾರೆ.

ಇತ್ತ ಜೆಡಿಎಸ್‌‍ ಮತ್ತು ಬಿಜೆಪಿಯಿಂದ ಮೈತ್ರಿ ಅಭ್ಯರ್ಥಿಯ ಆಯ್ಕೆ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಸಚಿವ ಎಚ್‌.ಡಿ. ಕುಮಾರ ಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಸ್ವಾಮಿ ಕೂಡ ಚನ್ನಪಟ್ಟಣ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸುವ ಸಾದ್ಯತೆ ಇದೆ.

ಈಗಾಗಿ ಡಿ.ಕೆ ಶಿವಕುಮಾರ್‌ಅವರು ಆರಂಭದಿಂದಲೂ ಅಖಾಡಕ್ಕೆ ಇಳಿದಿದ್ದು, ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಹಲವಾರು ಸರ್ಕಾರಿ ಕ್ರಮಗಳನ್ನು ಆಯೋಜಿಸಿದ್ದಾರೆ. ಇಂದು ರಜಾದಿನ ಭಾನುವಾರವು ಜನಸ್ಪಂದನ ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ. ಸರ್ಕಾರಿ ಕಾರ್ಯಕ್ರಮಗಳ ನೆಪದಲ್ಲಿ ಡಿ.ಕೆ. ಶಿವಕುಮಾರ್‌ ರಾಜಕೀಯ ಶಕ್ತಿತಯನ್ನು ಕ್ರೋಢೀಕರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ.

RELATED ARTICLES

Latest News