Thursday, August 28, 2025
Homeರಾಜ್ಯಡಿಕೆಶಿ ಹೇಳಿಕೆ ಹಿಂದೂ ಭಾವನೆಗೆ ಧಕ್ಕೆ ತರುವ ವಿಚಾರ : ಯದುವೀರ್‌

ಡಿಕೆಶಿ ಹೇಳಿಕೆ ಹಿಂದೂ ಭಾವನೆಗೆ ಧಕ್ಕೆ ತರುವ ವಿಚಾರ : ಯದುವೀರ್‌

DK Shivkumar's statement is a matter of hurting Hindu sentiments: Yaduveer

ಮೈಸೂರು, ಆ.28- ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದ. ಗೌರಿ ಹಬ್ಬ ಆಚರಿಸುವ ವೇಳೆ ಹಿಂದೂ ಭಾವನೆಗೆ ಧಕ್ಕೆ ತರುವ ವಿಚಾರ ಇದು ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು , ಸಾವಿರಾರು ವರ್ಷಗಳ ಹಿಂದೆ ಮರ್ಕಂಡೇಯ ತಪಸ್ಸು ಮಾಡಿದ್ದ ಸ್ಥಳ ಅದು. ಸಾವಿರಾರು ವರ್ಷಗಳಿಂದ ಚಾಮುಂಡಿ ಇರುವುದು ಕೂಡ ಉಲ್ಲೇಖ ಇದೆ . ಚಾಮುಂಡಿಬೆಟ್ಟಕ್ಕೆ ಎಲ್ಲರಿಗೂ ಪ್ರವೇಶವಿದೆ. ಅದು ಧಾರ್ಮಿಕ ಸ್ಥಳವಾಗಿರುವ ಕಾರಣ ಎಲ್ಲರೂ ಹೋಗಬಹುದು.

ಆಧುನಿಕ ಕಾಲಘಟ್ಟದಲ್ಲಿ ಜಾತ್ಯಾತೀತ ದೃಷ್ಟಿಕೋನದಿಂದ ನೋಡಬಹುದು. ಲಕ್ಷಾಂತರ ಜನರ ಭಾವನೆಗೆ ಧಕ್ಕೆ ಉಂಟಾಗಿದೆ.ಧರ್ಮ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತೇವೆ. ಜತೆಗೆ ಕಾನೂನು ಚೌಕಟ್ಟಿನಲ್ಲೂ ಹೋರಾಡುತ್ತೇವೆ. ನಾವು ಎಲ್ಲ ಧರ್ಮ ಒಪ್ಪಿಕೊಳ್ತೀವಿ. ಹಾಗಂತ ಒಂದು ಧರ್ಮದ ಓಲೈಕೆಗೆ ಮುಂದಾಗಬಾರದು. ರಾಜ್ಯದಲ್ಹಲವು ಸಮಸ್ಯೆಗಳಿವೆ. ಅವುಗಳನ್ನ ಮುಚ್ಚಿ ಹಾಕಲು ಇಂತಹ ಹೇಳಿಕೆ ಬೇಡ ಎಂದು ಅವರು ಹೇಳಿದ್ದಾರೆ.

ಚಾಮುಂಡಿಬೆಟ್ಟ ಟಾರ್ಗೆಟ್‌ ಆಗಿದೆಯೇ ಎಂಬ ಪ್ರಶ್ನೆಗೆ, ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದು ಇದೇ ಕಾಂಗ್ರೆಸ್‌‍ ಸರ್ಕಾರ. ಬೆಟ್ಟವನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅವರ ಹುನ್ನಾರ. ಬರೀ ಹಿಂದೂ ದೇವಾಲಯಗಳನ್ನ ತೆಗೆದುಕೊಳ್ತಿದ್ದಾರೆ.

ಬೆಂಗಳೂರಿನ ಆಂಜನೇಯ ದೇವಸ್ಥಾನವನ್ನೂ ಹಾಗೆ ಮಾಡಿದ್ರು. ಯಾವಾಗಲೂ ಹಿಂದುಗಳಿಗೆ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಕೋಟ್ಯಾಂತರ ಜನರ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಕಾಂಗ್ರೆಸ್‌‍ ಹಿಂದೂ ಸ್ಥಳಗಳನ್ನ ಟಾರ್ಗೆಟ್‌ ಮಾಡ್ತಿದೆ. ಕಾಂಗ್ರೆಸ್‌‍ ನಿಂದ ಧಾರ್ಮಿಕ್‌ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇವಾಲಯಗಳನ್ನ ನಿಯಂತ್ರಣಕ್ಕೆ ತರುತ್ತಿದ್ದಾರೆ. ಪ್ರಥಮವಾಗಿ ಇದೊಂದು ಧಾರ್ಮಿಕ ಸ್ಥಳ. ಬೆಟ್ಟ ಹಿಂದುಗಳ ಆಸ್ತಿ. ಅದು ಎಂದೆಂದಿಗೂ ಹಿಂದುಗಳ ಆಸ್ತಿ ಆಗಿರುತ್ತೆ. ಉಪಮುಖ್ಯಮಂತ್ರಿ ಹೇಳಿಕೆಯಿಂದ ಏನೂ ಆಗಲ್ಲ ಎಂದರು.

ಮೈಸೂರು-ಕೊಡಗು ಸಂಸದ ಯದುವೀರ್‌ ಅವರು ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಂಸದ ಪ್ರತಾಪ್‌ ಸಿಂಹ, ಶಿವನ ಕಪಾಲಿ ಬೆಟ್ಟವನ್ನೆ ಏಸು ಬೆಟ್ಟ ಮಾಡಲು ಹೊರಟ ಡಿಕೆ ಶಿವಕುಮಾರ್‌ ರಿಂದ ನಮಗೆ ಧರ್ಮ ದ ಪಾಠ ಬೇಡ. ಅನ್ಯ ಧರ್ಮದವರನ್ನು ಬರೀ ಓಲೈಕೆಗಾಗಿ ಬ್ರದರ್ಸ್‌ ಎಂದು ಕರೆಯುವ ಡಿಕೆ ಶಿವಕುಮಾರ್‌ ನಮಗೆ ಧರ್ಮದ ಬಗ್ಗೆ ತಿಳುವಳಿಕೆ ಹೇಳುವುದು ಬೇಡ ಎಂದಿದ್ದಾರೆ.

RELATED ARTICLES

Latest News