Friday, September 20, 2024
Homeರಾಜಕೀಯ | Politicsಶಾಸಕ ಮುನಿರತ್ನ ಅವರನ್ನು ಕೂಡಲೇ ಅನರ್ಹಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಡಿ.ಕೆ.ಸುರೇಶ್‌ ಒತ್ತಾಯ

ಶಾಸಕ ಮುನಿರತ್ನ ಅವರನ್ನು ಕೂಡಲೇ ಅನರ್ಹಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಡಿ.ಕೆ.ಸುರೇಶ್‌ ಒತ್ತಾಯ

DK Suresh Vs Munirathna

ಬೆಂಗಳೂರು,ಸೆ.14- ಜಾತಿಜಾತಿಗಳ ನಡುವೆ ಸಂಘರ್ಷ ತಂದಿಡುವ, ಹೆಣ್ಣು ಮಕ್ಕಳ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿರುವ ಹಾಗೂ ಜಾತಿನಿಂದನೆ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೂಡಲೇ ಅನರ್ಹಗೊಳಿಸಿ ಕಾನೂನು ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಸದ ಡಿ.ಕೆ.ಸುರೇಶ್‌ ಒತ್ತಾಯಿಸಿದರು.

ತಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಅವರ ಮಾತುಗಳನ್ನು ಕೇಳಿದರೆ ಅತ್ಯಂತ ಕೀಳುದರ್ಜೆಯ ಭಾಷೆಗಳು ಬಳಕೆಯಾಗಿವೆ. ಅನಾಗರೀಕರು, ಅವಿದ್ಯಾವಂತರು ಕೂಡ ಈ ರೀತಿಯ ಪದಗಳನ್ನು ಬಳಸಲು ಸಾಧ್ಯವಿಲ್ಲ. 80ರ ದಶಕದ ಹಿಂದೆ ಇಂತಹ ಮಾತು ಬರುತ್ತವೇನೋ, ಆದರೆ ಈ ಕಾಲದಲ್ಲೂ ಅನಾಗರೀಕವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ ಎಂದರು.

ಒಕ್ಕಲಿಗ ಸಮುದಾಯದ ಗುತ್ತಿಗೆದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ದಲಿತ ಸಮುದಾಯವನ್ನು ಹೀನಾಮಾನ ತೆಗಳಿದ್ದಾರೆ. ಇದರ ಬಗ್ಗೆ ಬಿಜೆಪಿಯ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಬೇಕು. ಎನ್‌ಡಿಎ ನಾಯಕರುಗಳಿಗೆ ಮುನಿರತ್ನ ಅವರ ಮಾತುಗಳು ಕೇಳಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಒಂದೆಡೆ ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡಿದರೆ ಮತ್ತೊಂದೆಡೆ ಮಹಿಳಾ ಕುಲವನ್ನೇ ಹೀಯಾಳಿಸಿದ್ದಾರೆ. ಇದನ್ನು ನೋಡಿಕೊಂಡು, ಕೇಳಿಕೊಂಡು ಎನ್‌ಡಿಎ ನಾಯಕರು ಹೇಗೆ ಸುಮನಿದ್ದಾರೆ. ಮುನಿರತ್ನ ಅವರ ಮಾತುಗಳು ಬಿಜೆಪಿ ಮತ್ತು ಆರ್‌ಎಸ್‌‍ಎಸ್‌‍ನ ಆಚಾರ, ಸಂಸ್ಕೃತಿಗಳಿಗೆ ಸಮತವೇ? ಎಂದು ಪ್ರಶ್ನಿಸಿದರು.

ನನಗನ್ನಿಸಿದ ಪ್ರಕಾರ, ಕೇಂದ್ರ ಸಚಿವ ಕುಮಾರಸ್ವಾಮಿ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ ನಮ ಮೈತ್ರಿಕೂಟದ ಶಾಸಕರೊಬ್ಬರು ಈ ರೀತಿ ಅಸಭ್ಯವಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಕ್ಷಣವೇ ಒತ್ತಡ ಹೇರಬಹುದು. ಕೇಂದ್ರ ಗೃಹಸಚಿವ ಅಮಿತ್‌ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆ ಚರ್ಚೆ ಮಾಡಿ ಮುನಿರತ್ನ ಅವರನ್ನು ಕೂಡಲೇ ಅನರ್ಹಗೊಳಿಸಬಹುದು ಎಂಬ ನಿರೀಕ್ಷೆಯಿದೆ ಎಂದರು.

ನಿನ್ನೆ ಮಧ್ಯಾಹ್ನದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಈವರೆಗೂ ಬಿಜೆಪಿ-ಜೆಡಿಎಸ್‌‍ನ ಯಾರೂ ಪ್ರತಿಕ್ರಿಯೆ ನೀಡಿಲ್ಲ. ದೇಶವೇ ಬೆಚ್ಚಿಬೀಳುವಂತಹ ಭಾಷೆಯನ್ನು ಕೇಳಿದ ಬಳಿಕವೂ ಮೌನಕ್ಕೆ ಶರಣಾಗಿದ್ದಾರೆ ಎಂದರೆ ಇದು ಆಘಾತಕಾರಿ ವಿಚಾರ. ಬಿಜೆಪಿಯವರಿಗೆ ಬಹುಷಃ ಮುನಿರತ್ನ ಅವರ ಹೇಳಿಕೆ ಸಹನೀಯವಾಗಬಹುದು. ಈ ಹಿಂದೆ ಪ್ರಧಾನಮಂತ್ರಿ ನರೇಂದ್ರಮೋದಿಯವರ ವಿಚಾರವಾಗಿಯೂ ಮುನಿರತ್ನ ಇದೇ ರೀತಿ ಕೆಟ್ಟದಾಗಿ ಮಾತನಾಡಿದ್ದರು. ಆದರೂ ಅದನ್ನು ಸಹಿಸಿಕೊಂಡು ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಆದರೆ ಜೆಡಿಎಸ್‌‍ನವರು ಹೇಗೆ ಸಹಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ಮುನಿರತ್ನ ಅವರ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ. ಜನರಲ್ಲಿ ಸರ್ಕಾರದ ಬಗ್ಗೆ ವಿಶ್ವಾಸ ಹೆಚ್ಚಾಗಬೇಕು ಎಂದರೆ ಕೂಡಲೇ ಮುನಿರತ್ನ ಅವರನ್ನು ಬಂಧಿಸಬೇಕು. ವ್ಯಾಪಕ ಭ್ರಷ್ಟಾಚಾರ, ಬಹಿರಂಗ ಹಣ ವಸೂಲಿ ಕಾರಣಗಳಿಗೆ ಕ್ರಮ ಕೈಗೊಳ್ಳುವ ಜೊತೆಗೆ ಮಹಿಳೆಯರಿಗೆ ಅಪಮಾನ ಮಾಡಿರುವುದು, ಜಾತಿ ನಿಂದನೆ, ಜಾತಿ ಸಂಘರ್ಷದ ಕಾರಣಕ್ಕೆ ಸ್ವಯಂಪ್ರೇರಿತವಾದ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್‌, ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯಪಾಲರು ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬೇಕು, ಸಂವಿಧಾನ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿರುವುದು ನಮದೇ ತಂಡ ಎಂದು ಮುನಿರತ್ನ ಅವರ ಆಪ್ತ ದೀಪಕ್‌ ಹೇಳಿರುವ ಕುರಿತು ಪ್ರಸ್ತಾಪವಾಗಿದೆ.ರೌಡಿ ಸುನಿಲ್‌ನ ಹೆಸರು ಗುತ್ತಿಗೆ ವಿಚಾರದಲ್ಲಿ ಚರ್ಚೆಯಾಗಿದೆ. ಇದರ ಬಗ್ಗೆ ತನಿಖೆಯಾಗಬೇಕು ಎಂದರು.

ನಾಗಮಂಗಲದಲ್ಲಿನ ಗಣೇಶ ವಿಸರ್ಜನೆ ವೇಳೆ ಗಲಭೆಗೆ ಕುಮಾರಸ್ವಾಮಿಯವರೇ ಪ್ರಚೋದನೆ ನೀಡಿದ್ದಾರೆ ಎಂದು ನಾನು ಆರೋಪ ಮಾಡಬಹುದು. ಅವರು ಕಾಂಗ್ರೆಸ್‌‍ ಕಾರಣ ಎಂದು ಹೇಳಿದ್ದಾರೆ. ಅದೇ ರೀತಿ ನಾನು ಕುಮಾರಸ್ವಾಮಿಯವರ ಮೇಲೆ ಆರೋಪ ಮಾಡಬಹುದಲ್ಲವೇ?

RELATED ARTICLES

Latest News