Wednesday, April 30, 2025
Homeರಾಜಕೀಯ | Politics"ಇಂದಿರಾ ಗಾಂಧಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯರನ್ನ ಪಕ್ಷದಿಂದ ಉಚ್ಛಾಟಿಸೋ ಧಮ್‌ ಇದೆಯಾ ಡಿಕೆಶಿಯವರೇ..?"

“ಇಂದಿರಾ ಗಾಂಧಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯರನ್ನ ಪಕ್ಷದಿಂದ ಉಚ್ಛಾಟಿಸೋ ಧಮ್‌ ಇದೆಯಾ ಡಿಕೆಶಿಯವರೇ..?”

"Do you have the guts to expel Siddaramaiah from the party, who showed a black flag to Indira Gandhi,

ಬೆಂಗಳೂರು,ಏ.30- ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯನವರನ್ನ ಪಕ್ಷದಿಂದ ಉಚ್ಛಾಟನೆ ಮಾಡೋ ಧಮ್‌ ಇದೆಯಾ ಡಿಕೆ ಶಿವಕುಮಾರ್‌ ಅವರೇ? ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಆಶೋಕ್‌ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಸಿದ್ದರಾಮಯ್ಯನವರು, ಇಂದಿರಾಗಾಂಧಿ ಅವರ ವಿರುದ್ದ ಕಪ್ಪು ಬಾವುಟ ಹಾರಿಸಿದ್ದೇ ಎಂಬ ಹೇಳಿಕೆಯ ಹಳೆಯ ವಿಡಿಯೋವನ್ನು ತಮ ಸಾಮಾಜಿಕ ಜಾಲ ತಾಣ ಎ್ಸ್‌‍ ನಲ್ಲಿ ಹಂಚಿಕೊಂಡಿರುವ ಆಶೋಕ್‌ ಅವರು, ಉತ್ತರನ ಪೌರುಷ ಒಲೆಯ ಮುಂದೆ ಎನ್ನುವ ಹಾಗೆ ನಿಮ ಪ್ರತಾಪ ಬರೀ ಮಾಧ್ಯಮಗಳ ಮುಂದೆ ಡೈಲಾಗ್‌ ಹೊಡೆಯೋದಕ್ಕೆ ಮಾತ್ರ ಸೀಮಿತನಾ ಡಿಸಿಎಂ ಶಿವಕುಮಾರ್‌ ಅವರೇ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿಗೆ ಒಂದೇ ಒಂದು ಸಭೆ ಮಾಡಲೂ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದೀರಲ್ಲ, ನಿಮಗೆ ನಿಜವಾಗಿಯೂ ತಾಕತ್ತಿದ್ದರೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಪಕ್ಷದಿಂದ ಉಚ್ಛಾಟನೆ ಮಾಡಿ ನೋಡೋಣ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ನಿಮ ಪಕ್ಷದ ಸರ್ವೋಚ್ಛ ನಾಯಕಿ ಪ್ರಧಾನಿ ಆಗಿದ್ದಾಗ ಕಪ್ಪು ಬಾವುಟ ತೋರಿಸಿದ್ದ ವ್ಯಕ್ತಿಯನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಎರಡೆರಡು ಬಾರಿ ಮುಖ್ಯಮಂತ್ರಿ ಮಾಡಿ, ಅವರ ಋಣದಲ್ಲಿ ಅಧಿಕಾರ ಅನುಭವಿಸುತ್ತಿದ್ದೀರಲ್ಲ, ಸಿದ್ದರಾಮಯ್ಯ, ಬಿಜೆಪಿ ಪ್ರಶ್ನೆ ಮಾಡುವ ಪ್ರತಿಭಟನೆಗೆ ಧಮ್ಕಿ ಹಾಕುವ ಯಾವ ನೈತಿಕತೆ ಇದೆ ತಮಗೆ ಎಂದು ಆಶೋಕ್‌ ಕಿಡಿಕಾರಿದ್ದಾರೆ.

RELATED ARTICLES

Latest News