ಬೆಂಗಳೂರು,ಅ.13- ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆಗೆ ಕಿರುಕುಳ ನೀಡಿದ ಸಹಪ್ರಯಾಣಿಕನನ್ನು ಹಿಡಿದು ಸಂಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ದೊಡ್ಡಬಳ್ಳಾಪುರದಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವೈದ್ಯೆಯೊಬ್ಬರು ಬೆಂಗಳೂರಿಗೆ ಬರುತ್ತಿದ್ದರು. ಫಿರೋಝ್ ಖಾನ್ ಎಂಬಾತ ಇವರ ಪಕ್ಕ ಕುಳಿತುಕೊಂಡಿದ್ದಾನೆ.
ಕೆಲ ಸಮಯದ ಬಳಿಕ ವೈದ್ಯೆಯನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ. ವೈದ್ಯೆ ಮುಜುಗರ ಪಟ್ಟುಕೊಂಡು ಆತನಿಂದ ಪಕ್ಕಕ್ಕೆ ಸರಿದು ಅಂತರ ಕಾಯ್ದುಕೊಂಡರಾದರೂ ಆತ ಪದೇ ಪದೇ ಕಾಟ ಕೊಟ್ಟಿದ್ದಾನೆ.ವೈದ್ಯೆ ಆತನ ವರ್ತನೆಯಿಂದ ಬೇಸತ್ತು ಬಸ್‌ಚಾಲಕರಿಗೆ ವಿಷಯ ತಿಳಿಸಿದ್ದಾರೆ. ಅಲ್ಲದೇ ತನ್ನ ಸಹೋದರನಿಗೂ ಮೊಬೈಲ್ ಕರೆ ಮಾಡಿ ಹೇಳಿದ್ದಾರೆ.
ತನ್ನ ಬಗ್ಗೆ ವೈದ್ಯೆ ಚಾಲಕನಿಗೆ ಹೇಳಿದ್ದಾರೆಂದು ವಿಷಯ ತಿಳಿದು ಆತ ಬಸ್‌ನಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.ತಕ್ಷಣ ಬಸ್ ಪ್ರಯಾಣಿಕರು ಹಾಗೂ ಬಸ್ ಚಾಲಕ ಸೇರಿಕೊಂಡು ಆತನನ್ನು ಹಿಡಿದು ಸಂಜಯನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಆತನ ವಿರುದ್ಧ ವೈದ್ಯೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಂಡು ಮತ್ತೆ ವಿಚಾರಣೆಗೆ ಬರುವಂತೆ ಹೇಳಿ ನೋಟೀಸ್‌ಕೊಟ್ಟು ಕಳುಹಿಸಿದ್ದಾರೆ.