ಭೂಪಾಲ್,ಮೇ 24- ಸ್ನೇಹಿತನ ಗುರುತು ಮತ್ತು ಜಾತಿಪ್ರಮಾಣ ಬಳಸಿಕೊಂಡು ವೈದ್ಯನಾಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸತೇಂದ್ರಕುಮಾರ್ ಬಂಧಿತ ವ್ಯಕ್ತಿ. ಈತ ಮಧ್ಯಪ್ರದೇಶದ ಜಬಲ್ಪುರದಲ್ಲಿ ತನ್ನ ಬುಡಕಟ್ಟು ಸ್ನೇಹಿತ ಬ್ರಿಜ್‌ರಾಜ್ ಸಿಂಗ್ ಉಯಿಕೆ ಹೆಸರಿನಲ್ಲಿ ಎಂಬಿಬಿಎಸ್ ಪದವಿ ಪಡೆದುಕೊಂಡಿದ್ದ.
ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮಹಿಳೆಯೊಬ್ಬರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಗೆ ದಾಖಲಾದ ಒಂದು ದಿನದ ನಂತರ ಆಕೆ ಸಾವನ್ನಪ್ಪಿದ್ದರು. ವೈದ್ಯಕೀಯ ನಿರ್ಲಕ್ಷ್ಯದಿಂದ ನಮ ತಾಯಿ ಸಾವನ್ನಪ್ಪಿದ್ದಾರೆ ಎಂದು ಪುತ್ರ ಮನೋಜ್‌ಕುಮಾರ್ ಮಹಾವರ್ ಎಂಬುವವರು ಎಂದುದೂರು ನೀಡಿದ್ದರು.
ಅಂದು ರಾತ್ರಿ ಬ್ರಿಜ್‌ರಾಜ್ ಸಿಂಗ್ ಉಯಿಕೆ ಹೆಸರಿನ ವೈದ್ಯರಿ ಐಸಿಯುನಲ್ಲಿ ಕರ್ತವ್ಯದ್ದರು ಎಂದು ದೂರಿನಲ್ಲಿ ತಿಳಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ವೈದ್ಯರ ಹಿನ್ನೆಲೆಯನ್ನು ಹುಡುಕಿದಾಗ, ಬ್ರಿಜ್‌ರಾಜ್ ಸಿಂಗ್ ಉಯಿಕೆ ವಾಲ್ ಪೇಂಟರ್ ಎಂಬುದು ತಿಳಿದುಬಂದಿದೆ. ಪೊಲೀಸರು ಅಸಲಿ ಬ್ರಿಜ್‌ರಾಜ್ ಸಿಂಗ್ ಉಯಿಕೆ ಎಂಬ ಹೆಸರಿನ ವಾಲ್ ಪೇಂಟರ್ ಬಳಿಗೆ ಹೋಗಿ ವೈದ್ಯ ಸತೇಂದ್ರಕುಮಾರ್‌ನ ಭಾವಚಿತ್ರ ತೋರಿಸಿ ವಿಚಾರಿಸಿದಾಗ, ಅದಕ್ಕೆ ಅವರು ಇದು ನನ್ನ ಸ್ನೇಹಿತ ಸತೇಂದ್ರ! ಎಂದು ತಿಳಿಸಿದ್ದಾರೆ.
ಹೆಚ್ಚಿನ ತನಿಖೆ ಕೈಗೊಂಡಾಗ ಸತೇಂದ್ರಕುಮಾರ್ ನೇತಾಜಿ ಸುಭಾಷ್ ಚಂದ್ರ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ತನ್ನ ಸ್ನೇಹಿತನ ಗುರುತು ಮತ್ತು ಜಾತಿ ಪ್ರಮಾಣಪತ್ರವನ್ನು ವಂಚನೆಯಿಂದ ಬಳಸಿದ್ದರು. ಅಸಲಿಗೆ ಸತ್ಯಕುಮಾರ್ ಸಾಮಾನ್ಯವರ್ಗಕ್ಕೆ ಸೇರಿದವರಾಗಿದ್ದು, ವೈದ್ಯಕೀಯ ಪ್ರವಶಕ್ಕೆ ಬುಡಕಟ್ಟು ಕೋಟಾವನ್ನು ಪಡೆಯಲು ಈ ರೀತಿ ಮಾಡಿರುವುದು
ಗೊತ್ತಾಗಿದೆ.
2018ರಲ್ಲಿ ಎಂಬಿಬಿಎಸ್ ಮುಗಿಸಿದ ನಂತರ, ಸತೇಂದ್ರ ಸುಳ್ಳು ಗುರುತಿನಡಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಏತನಧ್ಯೆ ನಿಜವಾದ ಬ್ರಿಜ್‌ರಾಜ್ ಸಿಂಗ್ ಉಯಿಕೆ – ಅವರ ಹೆಸರು ಮತ್ತು ಅರ್ಹತೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸತ್ಯಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.