ಬೆಂಗಳೂರು, ಆ. 14- ಭಾರತ ತಂಡದ ಮಾಜಿ ವೇಗಿ ಹಾಗೂ ಕನ್ನಡಿಗ ದೊಡ್ಡ ಗಣೇಶ್ ಕೀನ್ಯಾ ತಂಡದ ನೂತನ ಹೆಡ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಸಿಕ್ ಯೂನಿಯನ್ ಕ್ಲಬ್‌ನಲ್ಲಿ ಕೀನ್ಯಾ ಕ್ರಿಕೆಟ್ ಮಂಡಳಿಯಿಂದ ಈ ನೂತನ ಜವಾಬ್ದಾರಿ ವಹಿಸಿಕೊಂಡಿರುವ ದೊಡ್ಡ ಗಣೇಶ್, ಅವರ ಸವಾಲು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪಪೂವಾ ಗುನಿಯಾ ವಿರುದ್ಧ ಸರಣಿ ಮೂಲಕ ಆರಂಭಗೊಳ್ಳಲಿದ್ದು ಅಕ್ಟೋಬರ್‌ನಲ್ಲಿ 2026ರ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಟೂರ್ನಿ ನಿರ್ಣಾಯಕವಾಗಲಿದೆ.
ಲಾಮೆರ್ಕ್ ಒನ್ಯಾಗೋ ಅವರಿಂದ ಹೆಡ್ ಕೋಚ್ ಹುದ್ದೆಯನ್ನು ದೊಡ್ಡ ಗಣೇಶ್ ವಹಿಸಿಕೊಂಡಿದೆ. ಅವರಿಗೆ ಒನ್ಯಾಗೋ, ಜೋಸೆಫ್ ಅಂಗಾರಾ, ಜೋಸೆಫ್ ಎಸಿಚಿ ಅವರು ತರಬೇತಿ ವಿಭಾಗದಲ್ಲಿ ನೆರವಾಗಲಿದ್ದಾರೆ. 1996 ರಿಂದ ಸತತ 5 ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾಗಿಯಾಗಿದ್ದ ಕೀನ್ಯಾ, 2003ರ ಆವೃತ್ತಿಯಲ್ಲಿ ಸೆಮಿಫೈನಲ್ ಹಂತ ತಲುಪಿತ್ತು.
ಅಲ್ಲದೆ 2007ರ ಟಿ20 ವಿಶ್ವಕಪ್, 2000 ರಿಂದ 2004ರ ನಡುವೆ ನಡೆದಿದ್ದ ಚಾಂಪಿಯನ್‌್ಸ ಟ್ರೋಫಿಯಲ್ಲಿ ಭಾಗವಹಿಸಿತ್ತು.ಭಾರತ ತಂಡದ ಮಾಜಿ ವೇಗಿ ದೊಡ್ಡ ಗಣೇಶ್ ನಾಲ್ಕು ಟೆಸ್ಟ್ ಹಾಗೂ ಏಕೈಕ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದು 29 ರನ್ ಹಾಗೂ 6 ವಿಕೆಟ್ ಪಡೆದಿದ್ದರೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರ 193 ಪಂದ್ಯಗಳಿಂದ 2548 ರನ್ ಹಾಗೂ 493 ವಿಕೆಟ್ ಪಡೆದಿದ್ದಾರೆ.