ಬೆಂಗಳೂರು, ಡಿ.21- ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿ ಮಿನಿ ಹರಾಜಿಗೆ ಘಟಾನುಘಟಿ ಬೌಲರ್‍ಗಳನ್ನು ಬಿಟ್ಟುಕೊಟ್ಟು ಹರಾಜಿನಲ್ಲಿ ಸಾಧಾರಣ ಬೌಲರ್‍ಗಳನ್ನು ಖರೀದಿ ಮಾಡಿರುವ ಆರ್‍ಸಿಬಿ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಮಾಜಿ ವೇಗಿ ದೊಡ್ಡ ಗಣೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಿನಿ ಹರಾಜಿಗೂ ಮುನ್ನ ಆರ್‍ಸಿಬಿ ಮ್ಯಾನೇಜ್ಮೆಂಟ್ ಹರ್ಷಲ್‍ಪಟೇಲ್, ವಾನಿಂದು ಹಸರಂಗ, ಜಾಶ್ ಹೇಝಲ್‍ವುಡ್ ರಂತಹ ಬೌಲರ್‍ಗಳನ್ನು ಬಿಡುಗಡೆಗೊಳಿಸಿ ಮಿನಿ ಹರಾಜಿನಲ್ಲಿ ಇವರಿಗಿಂತ ಕಡಿಮೆ ಬೌಲಿಂಗ್ ಪ್ರದರ್ಶನ ತೋರಿರುವ ಬೌಲರ್‍ಗಳಾದ ಅಲ್ಜಾರಿ ಜೋಸೆಫ್, ಲಾಕಿ ಫಗ್ರ್ಯೂಸನ್, ಟಾಮ್ ಕರನ್ ಹಾಗೂ ಯಶ್ ದಯಾಳ್‍ರನ್ನು ಖರೀದಿಸಿರುವ ಕ್ರಮವನ್ನು ದೊಡ್ಡ ಗಣೇಶ್ ಖಂಡಿಸಿದ್ದಾರೆ.
ಪರ್ಸ್ ನಲ್ಲಿರುವ ಅರ್ಧದಷ್ಟು ಹಣವನ್ನು ನಮ್ಮ ಆರ್‍ಸಿಬಿ ಅಭಿಮಾನಿಗಳಿಗೆ ಕೊಟ್ಟು ಅವರನ್ನು ಆಕ್ಷನ್ ಟೇಬಲ್ ಮೇಲೆ ಕೂರಿಸಿ ಅವರು ನಿಮಗಿಂತ ಉತ್ತಮ ಸಮಯೋಚಿತ ತಂಡ ಕಟ್ಟುವುದಲ್ಲದೆ ಸ್ವಲ್ಪ ಹಣವನ್ನು ಉಳಿಸುತ್ತಾರೆ ಎಂದು ಸವಾಲು ಹಾಕುತ್ತೇನೆ. ಪೆÇ್ರ ಕ್ರಿಕೆಟ್ ತಂಡ ಇಂತಹ ತಪ್ಪುಗಳನ್ನು ಮಾಡುತ್ತದೆ ಎಂದು ನಂಬಲು ನನ್ನಿಂದ ಸಾಧ್ಯವಿಲ್ಲ' ಎಂದು ಕರ್ನಾಟಕದ ಮಾಜಿ ವೇಗಿ ಹೇಳಿದ್ದಾರೆ.
ಯಾವುದೇ ಬೌಲರ್‍ಗೂ ಒಂದು ಕೆಟ್ಟ ದಿನ ಎಂಬುದು ಇರುತ್ತದೆ. ಯಶ್ ದಯಾಳ್ ಕೂಡ ಅವರ ಪಾಲಿಗೆ ಒಂದು ಕೆಟ್ಟ ಓವರ್ ಆಗಿದೆ. ಆದರೆ ಅವರು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ಆದರೆ ಅವರಿಗೆ ಮಿನಿ ಹರಾಜಿನಲ್ಲಿ 5 ಕೋಟಿ ವ್ಯಯಿಸಿರುವುದು ತುಂಬಾ ಹಾಸ್ಯಸ್ಪದವಾಗಿದ್ದು, ನನ್ನ ಮನಸ್ಸು ಚಂಚಲವಾಗಿದೆ’ ಎಂದು ಖ್ಯಾತ ಕ್ರಿಕೆಟ್ ವಿಶ್ಲೇಷಖ ತಿಳಿಸಿದ್ದಾರೆ.
ಸಂಸತ್ ಭದ್ರತಾ ಲೋಪ : ಬಾಗಲಕೋಟೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ ವಶಕ್ಕೆ
ಮಿನಿ ಹರಾಜಿನಲ್ಲಿ ವೆಸ್ಟ್‍ಇಂಡೀಸ್‍ನ ಅನನುಭವಿ ವೇಗದ ಬೌಲರ್ ಅಲ್ಜಾರಿ ಜೋಸೆಫ್‍ಗೆ 11.50 ಕೋಟಿ ನೀಡಿರುವುದು ಕೂಡ ದುಬಾರಿಯಾಗಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ಫ್ರಾಂಚೈಸಿ ಯಾವ 4 ಆಟಗಾರರನ್ನು ಅಖಾಡಕ್ಕಿಳಿಸುತ್ತಾರೆ ಎಂಬುದು ಕುತೂಹಲವಾಗಿದೆ ಎಂದು ದೊಡ್ಡ ಗಣೇಶ್ ಹೇಳಿದ್ದಾರೆ.