ನವದೆಹಲಿ,ಅ.19- ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಶ್ವಾನ ತರಬೇತಿ ಕೇಂದ್ರದ ನೌಕರರು ನಾಯಿಯನ್ನು ಕೊಂದಿರುವ ಭೀಕರ ಘಟನೆ ನಡೆದಿದೆ. ಇಬ್ಬರು ಉದ್ಯೋಗಿಗಳು ನಾಯಿಯನ್ನು ಪ್ರವೇಶ ದ್ವಾರದಲ್ಲಿ ನೇಣು ಹಾಕಿದರು ಮತ್ತು ಒಂದು ಬದಿಯಿಂದ ಅದರ ಕುತ್ತಿಗೆಗೆ ಸರಪಳಿಯಿಂದ ಎಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆಪರೇಟರ್ ರವಿ ಕುಶ್ವಾಹ ಮತ್ತು ಇಬ್ಬರು ಉದ್ಯೋಗಿಗಳಾದ ಒಬ್ಬ ಪುರುಷ ಮತ್ತು ಮಹಿಳೆಯನ್ನು ಬಂಧಿಸಲಾಗಿದೆ. ಅವರು ನಾಯಿಯನ್ನು ನೇಣು ಹಾಕಿದ್ದ ದೃಶ್ಯ ದಾಖಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲು ಪ್ರಯತ್ನಿಸಿದರು ಎಂದು ವರದಿಯಾಗಿದೆ.
ಮಧ್ಯಪ್ರದೇಶದ ಶಾಜಾಪುರದ ಉದ್ಯಮಿ ನಿಖಿಲ್ ಜೈಸ್ವಾಲ್ ಸುಮಾರು ಎರಡು ವರ್ಷಗಳ ಹಿಂದೆ ನಾಯಿಯನ್ನು ಖರೀದಿಸಿ ಮೇ ತಿಂಗಳಲ್ಲಿ ಭೋಪಾಲ್‍ನ ಮಿಸ್ರೋಡ್‍ನಲ್ಲಿ ತರಬೇತಿಗೆ ಕಳುಹಿಸಿದ್ದರು. ತರಬೇತಿಯು ಸೆಪ್ಟೆಂಬರ್‍ನಲ್ಲಿ ಮುಕ್ತಾಯಗೊಳ್ಳಲಿದ್ದು, ಕೇಂದ್ರವು ತಿಂಗಳಿಗೆ RS 13,000 ಶುಲ್ಕವನ್ನು ವಿಧಿಸಿತು.
ಇರಾಕ್‍ನಲ್ಲಿನ ಅಮೆರಿಕ ನೆಲೆಗಳ ಮೇಲೆ ಡ್ರೋನ್ ದಾಳಿ
ಆದರೆ, ಅಕ್ಟೋಬರ್ 9 ರಂದು ನಿಖಿಲ್‍ಗೆ ಅನಾರೋಗ್ಯದಿಂದ ನಾಯಿ ಸಾವನ್ನಪ್ಪಿದೆ ಎಂದು ರವಿ ಹೇಳಿದ್ದರು. ಈ ಕುರಿತಂತೆ ನಿಖಿಲ್ ನೀಡಿದ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ನಿರ್ದಯಿಗಳು ನಾಯಿಯನ್ನು ನೇಣು ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆಯ ಸಮಯದಲ್ಲಿ, ಸೈಬರ್ ಸೆಲ್ ಸಹಾಯದಿಂದ ಸಿಸಿಟಿವಿ ದೃಶ್ಯಗಳನ್ನು ಸಹ ಪಡೆಯಲಾಗಿದೆ.