Friday, May 9, 2025
Homeಮನರಂಜನೆಮಾವು, ಪುಸ್ತಕ ಮೇಳಕ್ಕೆ ಡಾಲಿ ಧನಂಜಯ್‌ ಚಾಲನೆ

ಮಾವು, ಪುಸ್ತಕ ಮೇಳಕ್ಕೆ ಡಾಲಿ ಧನಂಜಯ್‌ ಚಾಲನೆ

Ddaali Dhananjay inaugurates mango, book fair

ಬೆಂಗಳೂರು, ಮೇ 9-ಗರುಡಾ ಮಾಲ್‌ನಲ್ಲಿ ಬಹು ನಿರೀಕ್ಷಿತ ಬೇಸಿಗೆ ಮಾವು ಮೇಳ ಮತ್ತು ಪುಸ್ತಕೋತ್ಸವವನ್ನು ಮೇ 11ರವರೆಗೆ ಆಯೋಜಿಸಲಾಗಿದೆ. ಬಾಯಲ್ಲಿ ನೀರೂರಿಸುವ ಹಣ್ಣುಗಳ ರಾಜ, ಸಿಹಿ, ಸಹಿಯಾದ ಮಾವು ಸವಿಯಲು ಮತ್ತು ಅಮರ ಸಾಹಿತ್ಯ ರತ್ನಗಳನ್ನು ಒಟ್ಟಿಗೆ ಮನೆಗೆ ಕೊಂಡೊಯ್ಯಲು ಸದವಕಾಶವಾಗಿದೆ. ರೈತರಿಂದ ನೇರವಾಗಿ ಗುಣಮಟ್ಟದ ಮಾವುಗಳನ್ನು ಖರೀದಿಸಲು ಉಜ್ವಲ ಅವಕಾಶ ಕಲ್ಪಿಸಲಾಗಿದೆ.

ಈ ಮೇಳದ ಉದ್ಘಾಟನೆಯನ್ನು ಕನ್ನಡ ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ್‌, ಶಾಸಕ ಉದಯ್‌ ಗರುಡಾಚಾರ್‌ ಅವರು ನೆರವೇರಿಸಿದರು.ಇದೇ ಸಂದರ್ಭದಲ್ಲಿ ಡಾಲಿ ಧನಂಜಯ್‌ ಮಾತನಾಡಿ ಮಕ್ಕಳಿಂದ ಮತ್ತು ಹಿರಿಯರವರೆಗೆ ಅಕ್ಷರ ಜ್ಞಾನ ಸಂಪಾದನೆಗೆ 1ಲಕ್ಷ ಪುಸ್ತಕಗಳು ಇಲ್ಲಿ ಲಭ್ಯವಿವೆ. ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ನೇರವಾಗಿ ಮಾವಿನ ಹಣ್ಣು ಮಾರಾಟ ಮಾಡುವ ಮತ್ತು ಪ್ರದರ್ಶನದ ಉತ್ತಮ ವೇದಿಕೆ ಕಲ್ಪಿಸಲಾಗಿದೆ ಎಂದರು.

ಕನ್ನಡ ನಾಡು, ದೇಶಕ್ಕಾಗಿ ಪ್ರತಿಯೊಬ್ಬರೂ ಗಟ್ಟಿಯಾಗಿ ನಿಲ್ಲಬೇಕು. ಹಲಸಿನ ಹಣ್ಣು, ಮಾವಿನಹಣ್ಣುಗಳನ್ನು ನಾನು ಬಹಳ ಇಷ್ಟಪಡುತ್ತೇನೆ. ಪ್ರತಿಯೊಬ್ಬ ಹಣ್ಣುಗಳನ್ನು ತಿಂದು ಆರೋಗ್ಯವಂತರಾಗಿ ಎಂದು ಹೇಳಿದರು.

ಉದಯ್‌ ಗರುಡಾಚಾರ್‌ ಮಾತನಾಡಿ, ದೇಶದಲ್ಲಿ ರೈತ ಮತ್ತು ಸೈನಿಕ ಎರಡು ಕಣ್ಣುಗಳು ಇದ್ದಂತೆ. ನಮ ಮಾವಿನ ಮೇಳದಿಂದ ರೈತರಿಗೆ ಉತ್ತಮ ಬೆಂಬಲ ಬೆಲೆ ಸಿಗಲಿದೆ, ಸಾರ್ವಜನಿಕರಿಗೆ ಉತ್ತಮ ಮಾವಿನ ಹಣ್ಣು ಸವಿಯುವ ಅವಕಾಶ ಸಿಗುತ್ತದೆ. ಅಕ್ಷರ ಜ್ಞಾನ ಎಂದೂ ಕಡಿಮೆಯಾಗಬಾರದು, ಪ್ರತಿದಿನ ಪುಸ್ತಕ ಓದುವುದರಿಂದ ಜ್ಞಾನ ಸಂಪಾದನೆ ಇನ್ನು ಹೆಚ್ಚಾಗುತ್ತದೆ ಎಂದು ನುಡಿದರು.

RELATED ARTICLES

Latest News