Monday, January 20, 2025
Homeಅಂತಾರಾಷ್ಟ್ರೀಯ | Internationalಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್‌ ಇಂದು ಪ್ರಮಾಣವಚನ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್‌ ಇಂದು ಪ್ರಮಾಣವಚನ

Donald Trump to take oath as 47th US President today,

ವಾಷಿಂಗ್ಟನ್‌,ಜ.20- ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್‌ ಅವರು ಇಂದು ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಾಷಿಂಗ್ಟನ್‌ ಡಿಸಿಯ ಕ್ಯಾಪಿಟಲ್‌ನಲ್ಲಿ ನಡೆಯುವ ಐತಿಹಾಸಿಕ ಸಮಾರಂಭದಲ್ಲಿ ಅಮೆರಿಕ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ ಜಾನ್‌ ರಾಬರ್ಟ್‌್ಸ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು, ವಿದೇಶಿ ಗಣ್ಯರು ಮತ್ತು ಕಂಪನಿಗಳ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಜಗತ್ತಿನ ಅತಿ ಶ್ರೀಮಂತನೂ ಆಗಿರುವ ಟ್ರಂಪ್‌ ಆಪ್ತ ಎಲಾನ್‌ ಮಸ್ಕ್‌, ಖ್ಯಾತ ಉದ್ಯಮಿ ಜೆಫ್‌ ಬೆಜೋಸ್‌‍ ಮತ್ತು ಫೇಸ್ಬುಕ್‌ ಮುಖ್ಯಸ್ಥ ಮಾರ್ಕ್‌ ಜುಕರ್ಬರ್ಗ್‌, ಚೀನಾ ಸಾಮಾಜಿಕ ಮಾಧ್ಯಮ ದೈತ್ಯ ಟಿಕ್ಟಾಕ್‌ ಮುಖ್ಯಸ್ಥ ಶೌ ಚೆವ್‌, ಮಾಜಿ ಅಧ್ಯಕ್ಷರಾದ ಬಿಲ್‌ ಕ್ಲಿಂಟನ್‌, ಜಾರ್ಜ್‌ ಡಬ್ಲ್ಯೂ ಬುಷ್‌ ಮತ್ತು ಬರಾಕ್‌ ಒಬಾಮಾ, ಬಿಲ್‌ ಕ್ಲಿಂಟನ್‌ ಪತ್ನಿ ಹಿಲರಿ ಕ್ಲಿಂಟನ್‌, ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್‌, ನಿರ್ಗಮಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌‍ ಭಾಗವಹಿಸಲಿದ್ದಾರೆ.

ವಿದೇಶಿ ಗಣ್ಯರಿಗೂ ಆಹ್ವಾನಿಸಲಾಗಿದ್ದು, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್‌, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅರ್ಜೆಂಟೀನಾ ಅಧ್ಯಕ್ಷ -ಜೇವಿಯರ್‌ ಮಿಲಿ, ಹಂಗೇರಿಯನ್‌ ಪ್ರಧಾನಿ ವಿಕ್ಟರ್‌ ಓರ್ಬನ್‌, ಜಪಾನಿನ ವಿದೇಶಾಂಗ ಸಚಿವ ಟಕೇಶಿ ಇವಾಯಾ ಅವರು ಭಾಗವಹಿಸಲಿದ್ದಾರೆ. ಬಲ ಪಂಥೀಯ ನಾಯಕರಾದ ನಿಗೆಲ್‌ ಫರಾಜ್‌ (ಯುಕೆ), ಎರಿಕ್‌ ಜೆಮೌರ್‌ (ಫ್ರಾನ್ಸ್ ) ಮತ್ತು ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್‌ ಬೋಲ್ಸನಾರೊ ಭಾಗಿಯಾಗಿವ ಸಾಧ್ಯತೆಯಿದೆ.

ಏನೆಲ್ಲಾ ಸವಲತ್ತುಗಳು? :
ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರಾಗುವವರಿಗೆ ವರ್ಷಕ್ಕೆ 4 ಲಕ್ಷ ಡಾಲರ್‌ (2 ಕೋಟಿ 70 ಲಕ್ಷ ರೂ.) ಸಂಬಳ ಸಿಗುತ್ತದೆ. ಸಿಗುವ ವೇತನದ ಜೊತೆಗೆ ಭತ್ಯೆ, ಸೌಲಭ್ಯಗಳು ಕೂಡ ಅಷ್ಟೇ ಪವರ್ಫುಲ್‌ ಆಗಿವೆ. ಅಲ್ಲದೇ ಪ್ರತ್ಯೇಕ ಬಂಗಲೆ, ಖಾಸಗಿ ವಿಮಾನ, ಹೆಲಿಕಾಪ್ಟರ್ನಂತಹ ಹಲವು ಸೌಲಭ್ಯಗಳು ಸಿಗುತ್ತದೆ.

ಅಮೆರಿಕದ ಅಧ್ಯಕ್ಷರಿಗೆ ಬೃಹತ್‌ ಬಂಗಲೆ ಶ್ವೇತಭವನ, ಬೇರ್ಹೌಸ್‌‍ ಅತಿಥಿಗೃಹ, ಅತ್ಯಾಧುನಿಕ ವಿಮಾನ ಏರ್ಫೋರ್ಸ್‌ ಒನ್‌, ಅಧಿಕೃತ ಹೆಲಿಕಾಪ್ಟರ್‌ ಮರೈನ್‌ ಒನ್‌, ಯಾವುದೇ ದಾಳಿಯನ್ನು ತಡೆಯುವ ಶಕ್ತಿಯುಳ್ಳ ಲಿಮೋಸಿನ್‌ ಕಾರು ಸಿಗುತ್ತದೆ. ಜೊತೆಗೆ 19 ಸಾವಿರ ಡಾಲರ್‌ ಮನರಂಜನಾ ಭತ್ಯೆ, 50 ಸಾವಿರ ಡಾಲರ್‌ ವೆಚ್ಚ ಭತ್ಯೆ ಹಾಗೂ 1 ಲಕ್ಷ ಡಾಲರ್‌ ಸಾರಿಗೆ ಭತ್ಯೆ ದೊರೆಯುತ್ತದೆ. ನಿವೃತ್ತರಾದ ಬಳಿಕ ವಾರ್ಷಿಕ 2 ಲಕ್ಷ ಅಮೆರಿಕನ್‌ ಡಾಲರ್‌ ಪಿಂಚಣಿ ಸಿಗಲಿದೆ.

ಅಧ್ಯಕ್ಷರ ನಿಧನದ ಬಳಿಕ ಅವರ ಪತ್ನಿಗೆ 1 ಲಕ್ಷ ಡಾಲರ್‌ ಪಿಂಚಣಿ ದೊರೆಯಲಿದೆ.ಅಮೆರಿಕದ ಅಧ್ಯಕ್ಷರು ಯಾವುದೇ ವಿದೇಶ ಪ್ರವಾಸ ಹೋದಾಗ ಲಿಮೋಸಿನ್‌ ಕಾರು ಸಹ ವಿಶೇಷ ವಿಮಾನದಲ್ಲಿ ಹೋಗುತ್ತದೆ. ಈ ಕಾರಿನಲ್ಲೇ ಅವರು ವಿದೇಶದಲ್ಲಿ ಪ್ರಯಾಣ ಮಾಡುತ್ತಾರೆ.

ಕದನ ವಿರಾಮ ಘೋಷಣೆ
ನಾನು ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸುತ್ತೇನೆ. ನಾನು ಮಧ್ಯಪ್ರಾಚ್ಯದಲ್ಲಿ ಅವ್ಯವಸ್ಥೆಯನ್ನು ನಿಲ್ಲಿಸುತ್ತೇನೆ ಮತ್ತು ಮೂರನೇ ಮಹಾಯುದ್ಧ ನಡೆಯದಂತೆ ತಡೆಯುತ್ತೇನೆೞ ಎಂದು ಹೇಳಿದ್ದಾರೆ. ಗಡಿಗಳ ಮೇಲೆ ನಾವು ಶೀಘ್ರವಾಗಿ ನಿಯಂತ್ರಣವನ್ನು ಮರು ಸ್ಥಾಪಿಸುತ್ತೇವೆ ಎಂದು ಟ್ರಂಪ್‌ ಹೇಳಿದರು..

ಎಲಾನ್‌ ಮಸ್ಕ್‌ ಅವರ ಅಧ್ಯಕ್ಷತೆಯಲ್ಲಿ ನಾವು ಸರ್ಕಾರದ ದಕ್ಷತೆಯ ಹೊಸ ವಿಭಾಗವನ್ನು ರಚಿಸುತ್ತೇವೆ ಎಂದು ಟ್ರಂಪ್‌ ಹೇಳಿದರು. ನಾವು ಬಹಳಷ್ಟು ಬದಲಾವಣೆಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಎಲಾನ್‌ ಹೇಳಿದ್ದಾರೆ. ಮುಂದಿನ ಪ್ರಮುಖವಾದವು ಗಮನಾರ್ಹ ಬದಲಾವಣೆಗಳನ್ನು ಮಾಡುವ ಗುರಿಯನ್ನು ಹೊಂದಿದ್ದೇವೆ ಮತ್ತು ಮುಂಬರುವ ಶತಮಾನಗಳವರೆಗೆ ಅಮೆರಿಕ ಬಲಿಷ್ಠಗೊಳಿಸಲು ಅಡಿಪಾಯವನ್ನು ಹಾಕುತ್ತೇವೆ ಮೇಕಿಂಗ್‌ ಅಮೆರಿಕ ಮತ್ತೆ ಗ್ರೇಟ್‌ ಎಂದಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಗಾಗಿ ನಾವು ಮೊದಲ ಹೆಜ್ಜೆಯಾಗಿ ಐತಿಹಾಸಿಕ ಕದನ ವಿರಾಮ ಒಪ್ಪಂದವನ್ನು ಸಾಧಿಸಿದ್ದೇವೆ ಎಂದು ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ. ನವೆಂಬರ್ನಲ್ಲಿ ನಮ ಐತಿಹಾಸಿಕ ವಿಜಯದ ಪರಿಣಾಮವಾಗಿ ಈ ಒಪ್ಪಂದವನ್ನು ಸಾಧಿಸಲು ಸಾಧ್ಯವಾಯಿತು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ನಾನು ಅಧ್ಯಕ್ಷನಾಗಿದ್ದರೆ ಇದು (ಇಸ್ರೇಲ್‌-ಹಮಾಸ್‌‍ ಸಂಘರ್ಷ) ಎಂದಿಗೂ ಸಂಭವಿಸುತ್ತಿರಲಿಲ್ಲ.

ಹೊಸದಾಗಿ ಚುನಾಯಿತರಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಮೇಕ್‌ ಅಮೆರಿಕ ಗ್ರೇಟ್‌ ಎಗೇನ್‌ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ನಾವು ನಮ ದೇಶವನ್ನು ಹಿಂದೆಂದಿಗಿಂತಲೂ ಶ್ರೇಷ್ಠವಾಗಿಸಲು ಹೊರಟಿದ್ದೇವೆ. ಅಮೆರಿಕಕ್ಕೆ ಹೊಸ ದಿನ ಆರಂಭಿಸುತ್ತಿದ್ದೇವೆ. ಶಕ್ತಿ ಮತ್ತು ಸಮೃದ್ಧಿ, ಘನತೆ ಮತ್ತು ವೈಭವ ಇವೆಲ್ಲಾ ಇರುತ್ತೆ ನಾವು ವಿಫಲವಾದ, ಭ್ರಷ್ಟ ರಾಜಕೀಯ ಸ್ಥಾಪನೆಯ ಆಡಳಿತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ರಿಪಬ್ಲಿಕನ್ನರು ಎಂದಿಗೂ ಯುವ ಮತವನ್ನು ಗೆದ್ದಿಲ್ಲ, ನಾನು ಅದನ್ನು 36 ಅಂಕಗಳಿಂದ ಗೆದ್ದಿದ್ದೇನೆ. ಅದಕ್ಕಾಗಿಯೇ ನಾನು ಟಿಕ್‌ಟಾಕ್‌ ಅನ್ನು ಪ್ರೀತಿಸುತ್ತೇನೆ. ನಾವು ಟಿಕ್‌ಟಾಕ್‌ ಅನ್ನು ಉಳಿಸಬೇಕಾಗಿದೆ ನಾವು ಬಹಳಷ್ಟು ಉದ್ಯೋಗಗಳನ್ನು ಉಳಿಸಬೇಕಾಗಿದೆ. ನಮ ವ್ಯವಹಾರವನ್ನು ಚೀನಾಕ್ಕೆ ನೀಡಲು ನಾವು ಬಯಸುವುದಿಲ್ಲ. ನಾನು ಟಿಕ್‌ಟಾಕ್‌ ಅನ್ನು ಅನುಮೋದಿಸಲು ಒಪ್ಪಿಕೊಂಡಿದ್ದೇನೆ ಆದರೆ ಷರತ್ತಿದೆ ಎಂದು ಹಳೀದ್ದಾರೆ.

RELATED ARTICLES

Latest News