Sunday, February 23, 2025
Homeಬೆಂಗಳೂರುಬೆಂಗಳೂರಲ್ಲಿ ಕಸ ಗುಡಿಸುವ ಹೆಸರಿನಲ್ಲಿ ಕೋಟಿ ಕೋಟಿ ಲೂಟಿಗೆ ಅವಕಾಶ ನೀಡಬೇಡಿ : ಎನ್.ಆರ್.ರಮೇಶ್

ಬೆಂಗಳೂರಲ್ಲಿ ಕಸ ಗುಡಿಸುವ ಹೆಸರಿನಲ್ಲಿ ಕೋಟಿ ಕೋಟಿ ಲೂಟಿಗೆ ಅವಕಾಶ ನೀಡಬೇಡಿ : ಎನ್.ಆರ್.ರಮೇಶ್

Don't allow loot in the name of garbage: N.R. Ramesh

ಬೆಂಗಳೂರು,ಫೆ.17– ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಕಸ ಗುಡಿಸುವಿಕೆ ಹೆಸರಿನಲ್ಲಿ ಸಾರ್ವಜನಿಕರ 764 ಕೋಟಿ ರೂ.ಗಳ ತೆರಿಗೆ ಹಣವನ್ನು ಪೋಲು ಮಾಡಲು ಅವಕಾಶ ನೀಡಬಾರದು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿನ ಕಸ ಗುಡಿಸುವಿಕೆ ಕಾರ್ಯಕ್ಕೆ 20 ಯಾಂತ್ರಿಕ ಕಸ ಗುಡಿಸುವಿಕೆ ಯಂತ್ರಗಳ ಖರೀದಿ ಮತ್ತು 07 ವರ್ಷಗಳ ನಿರ್ವಹಣೆ ಹೆಸರಿನಲ್ಲಿ 9 764 ಕೋಟಿಗಳಷ್ಟು ಬೃಹತ್ ಪ್ರಮಾಣದ ಸಾರ್ವಜನಿಕರ ತೆರಿಗೆ ಹಣದ ದುಂದು ವೆಚ್ಚ ಮಾಡಲು ಹೊರಟಿರುವ ಪಾಲಿಕೆಯ ಜನ ವಿರೋಧಿ ಪ್ರಸ್ತಾವಗೆ ಅನುಮೋದನೆ ನೀಡಬಾರದೆಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ನಗರದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಸಂಗ್ರಹಿಸಿ ಸಾಗಿಸುವ ಕಾರ್ಯಕ್ಕೆಂದು 2017-18 ರ ಸಾಲಿನಲ್ಲಿ 25 ಮೆಕ್ಯಾನಿಕಲ್ ಸ್ವೀಪರ್ ಯಂತ್ರಗಳನ್ನು ಪಾಲಿಕೆಯ ವತಿಯಿಂದಲೇ ಖರೀದಿಸಿ ನಿರ್ವಹಣೆ ಮಾಡಲಾಗುತ್ತಿದೆ.

ಇದೀಗ ಹೆಚ್ಚುವರಿಯಾಗಿ 20 ಮೆಕ್ಯಾನಿಕಲ್ ಸ್ವೀಪರ್ ಯಂತ್ರಗಳನ್ನು ಖರೀದಿಸಿ, ಅದರ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುವ ಹೊಣೆಯನ್ನು ಖಾಸಗಿಯವರಿಗೆ ವಹಿಸುವ ಸಂಬಂಧ ಒಟ್ಟು 9 764 ಕೋಟಿಗಳಷ್ಟು ಬೃಹತ್ ಮೊತ್ತದ ಪ್ರಸ್ತಾವನೆಯನ್ನು ಪಾಲಿಕೆಯ ಮುಖ್ಯ ಆಯುಕ್ತರು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

2017-18 ರಲ್ಲಿ 9 60 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸಿ ಖರೀದಿಸಿರುವ 25 ಯಸ್ವೀಪರ್ ಯಂತ್ರಗಳ ನಿರ್ವಹಣೆ ಕಾರ್ಯಗಳಿಗೆಂದು ಟಿಪಿಎಸ್ ಎಂಬ ಮಹಾ ವಂಚಕ ಸಂಸ್ಥೆಗೆ ಕಳೆದ 07 ವರ್ಷಗಳಿಂದ ಪ್ರತೀ ತಿಂಗಳು ಸರಾಸರಿ 6 1,12,50,000 ರೂ.ಗಳಂತೆ ಇದುವರೆಗೆ ಸುಮಾರು (ತೊಂಬತ್ತೈದು ಕೋಟಿ ರೂಪಾಯಿಗಳಷ್ಟು ಬೃಹತ್ ಪ್ರಮಾಣದ ಹಣವನ್ನು ಹಾಗೂ ಅದೇ ಯಂತ್ರಗಳ ದುರಸ್ತಿ ಕಾರ್ಯ ಹಾಗೂ ಟೈರ್ ಮತ್ತು ಬ್ಯಾಟರಿಗಳ ಬದಲಾವಣೆ ಕಾರ್ಯಗಳಿಗೆಂದು ಸುಮಾರು ಇಪ್ಪತ್ತೊಂದು ಕೋಟಿ ಗಳಿಗೂ ಹೆಚ್ಚು ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.

ವಸ್ತು ಸ್ಥಿತಿ ಏನೆಂದರೆ, ಆರಂಭದಲ್ಲಿ ಕಸ ಗುಡಿಸುವ ಕೆಲಸ ಮಾಡಿದ ಯಂತ್ರಗಳು ಇನ್ನುಳಿದ ಆರೂವರೆ ವರ್ಷಗಳಿಂದ ತನ್ನ ಕಾರ್ಯವನ್ನು ನಿರ್ವಹಿಸುತ್ತಲೇ ಇಲ್ಲ. ಈ 25 ವಾಹನಗಳು ಭೌತಿಕವಾಗಿ ಓಡಾಡುತ್ತಿವೆಯಾದರೂ ಸಹ, ವ್ಯಾವಹಾರಿಕವಾಗಿ ಕಾರ್ಯಾಚರಣೆಯನ್ನೇ ಮಾಡುತ್ತಿಲ್ಲ. ಕೇವಲ ಪ್ರತೀ ತಿಂಗಳು ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಲಾಗುತ್ತಿದೆ.

764 ಕೋಟಿ ರೂಪಾಯಿಗಳಷ್ಟು ಮೊತ್ತದ ಪೈಕಿ 25 ವಾಹನಗಳ ಬೆಲೆಯನ್ನು ಹೊರತುಪಡಿಸಿ, ಸುಮಾರು 9 700 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಯಂತ್ರಗಳ ಕಾರ್ಯಾಚರಣೆ
ಮತ್ತು ನಿರ್ವಹಣೆ ಹೆಸರಿನಲ್ಲಿ ವೆಚ್ಚ ಮಾಡಲು ಹೊರಟಿರುವ ಹಿಂದೆ ಭ್ರಷ್ಟಾಚಾರದ ವಾಸನೆ ಕಂಡುಬರುತ್ತಿದೆ. ಹೀಗಾಗಿ ಇಂತಹ ಕಾನೂನು ಬಾಹೀರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಾರದು ಎಂದು ರಮೇಶ್ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News