ವಿಶಾಖಪಟ್ಟಣ,ಜು.12– ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ಪ್ರಕರಣ ಸಂಬಂಧ ಪ್ರಾಥಮಿಕ ವರದಿ ಕುರಿತು ಆತುರದ ತೀರ್ಮಾನಗಳಿಗೆ ಬರಬೇಡಿ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ವಿಶಾಖಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪೈಲಟ್‌ಗಳ ಕಲ್ಯಾಣ ಮತ್ತು ಯೋಗಕ್ಷೇಮದ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಆದ್ದರಿಂದ ಈ ಹಂತದಲ್ಲಿ ಯಾವುದೇ ತೀರ್ಮಾನಗಳಿಗೆ ಧಾವಿಸಬೇಡಿ ಮತ್ತು ಅಂತಿಮ ವರದಿಗಾಗಿ ಕಾಯೋಣ ಎಂದು ಅವರು ಮನವಿ ಮಾಡಿದರು.
ಕಳೆದ ತಿಂಗಳು ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ನೀಡಿದ ವರದಿಯು ಪ್ರಾಥಮಿಕ ಸಂಶೋಧನೆಗಳನ್ನು ಆಧರಿಸಿದೆ ಮತ್ತು ಅಂತಿಮ ವರದಿ ಬಿಡುಗಡೆಯಾಗುವವರೆಗೆ ಯಾರೂ ತೀರ್ಮಾನಗಳಿಗೆ ಬರಬಾರದು ಎಂದು ಕೋರಿದ್ದಾರೆ.
ಇದರ ಬಗ್ಗೆ ನಾವು ಯಾವುದೇ ತೀರ್ಮಾನಗಳಿಗೆ ಧಾವಿಸಬಾರದು ಎಂದು ನಾನು ಭಾವಿಸುತ್ತೇನೆ. ಇಡೀ ವಿಶ್ವದಲ್ಲೇ ಅತ್ಯಂತ ಅದ್ಭುತವಾದ ಪೈಲಟ್‌ಗಳು ಮತ್ತು ಸಿಬ್ಬಂದಿ ನಮಲ್ಲಿದ್ದಾರೆ ಎಂದು ನಾನು ನಂಬುತ್ತೇನೆ. ದೇಶದ ಪೈಲಟ್‌ಗಳು ಮತ್ತು ಸಿಬ್ಬಂದಿ ಮಾಡುತ್ತಿರುವ ಎಲ್ಲಾ ಪ್ರಯತ್ನಗಳನ್ನು ನಾನು ಪ್ರಶಂಸಿಸಲೇಬೇಕು, ಅವರು ನಾಗರಿಕ ವಿಮಾನಯಾನದ ಬೆನ್ನೆಲುಬು. ಅವರು ನಾಗರಿಕ ವಿಮಾನಯಾನದ ಪ್ರಾಥಮಿಕ ಸಂಪನೂಲ. ನಾವು ಪೈಲಟ್‌ಗಳ ಕಲ್ಯಾಣ ಮತ್ತು ಯೋಗಕ್ಷೇಮದ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಆದ್ದರಿಂದ ಈ ಹಂತದಲ್ಲಿ ಯಾವುದೇ ತೀರ್ಮಾನಗಳಿಗೆ ಧಾವಿಸಬೇಡಿ ಮತ್ತು ಅಂತಿಮ ವರದಿಗಾಗಿ ಕಾಯೋಣ ಎಂದು ಅವರು ತಿಳಿಸಿದರು.
- ಕಾಶೀರದಲ್ಲಿರುವುದು ಬಹುತೇಕ ಉಗ್ರರ ಸಮಾಧಿಗಳಂತೆ..!
- ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳು ನೆಮ್ಮದಿಯಾಗಿ ಹಬ್ಬ ಆಚರಿಸಲಾಗುತ್ತಿಲ್ಲ : ನಿಖಿಲ್
- ವೈಲ್ಡ್ ಆದ ಕೂಲ್ ಕ್ಯಾಪ್ಟನ್ ಧೋನಿ
- ಮೆಸೇಜ್ ಓಪನ್ ಮಾಡಿ 21 ಲಕ್ಷ ರೂ. ಕಳೆದುಕೊಂಡ ವೃದ್ಧ..!
- ಬೆಂಗಳೂರು : ಕ್ಯಾಬ್ ಚಾಲಕನ ಬರ್ಬರ ಹತ್ಯೆ