ಬೆಂಗಳೂರು, ಜ.15– ಯುರಾಲಜಿ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿ ಡಾ. ಆರ್.ಕೇಶವಮೂರ್ತಿ ಅವರು ಆಯ್ಕೆಯಾಗಿದ್ದಾರೆ.ಈ ಹಿಂದೆ ಅವರು ಭಾರತೀಯ ಯುರಾಲಜಿ ಸಂಸ್ಥೆಯ ಗೌರವ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ.
40 ವರ್ಷಗಳಿಗೂ ಹೆಚ್ಚು ಕಾಲದ ಸುದೀರ್ಘ ಸೇವೆ ನಂತರ ಈಗ ಮಹತ್ವದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.ಈ ಹುದ್ದೆಗೆ ಆಯ್ಕೆಯಾದ ಕರ್ನಾಟಕದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಡಾ. ಆರ್.ಕೇಶವಮೂರ್ತಿ ಅವರು ಪಾತ್ರರಾಗಿದ್ದಾರೆ.