Monday, March 31, 2025
Homeಜಿಲ್ಲಾ ಸುದ್ದಿಗಳು | District Newsಅಣ್ಣಾವ್ರ ಕುಟುಂಬದ ಮೇಲಿನ ಅಭಿಮಾನ ತುಂಬಿದ ಮದುವೆಯ ಕರೆಯೋಲೆ

ಅಣ್ಣಾವ್ರ ಕುಟುಂಬದ ಮೇಲಿನ ಅಭಿಮಾನ ತುಂಬಿದ ಮದುವೆಯ ಕರೆಯೋಲೆ

ಮೈಸೂರು,ಜೂ19- ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಅಗಲಿ ಸಾಕಷ್ಟು ವರ್ಷಗಳೇ ಕಳೆದಿವೆ. ಆದರೆ ಅಭಿಮಾನಿಗಳ ಮನದಲ್ಲಿ ಡಾ.ರಾಜ್‌ ಅಚ್ಚಳಿಯದೆ ಉಳಿದಿದ್ದಾರೆ ಎನ್ನುವುದಕ್ಕೆ ಕಟ್ಟಾ ಅಭಿಮಾನಿಯೊಬ್ಬರು ತಮ್ಮ ಮಗಳ ಮದುವೆಯ ಕರಯೋಲೆ ಸಾಕ್ಷಿಯಾಗಿದೆ.
ನಗರದ ನಂಜುಮಳಿಗೆ ನಿವಾಸಿಯಾಗಿರುವ ಮಹದೇವಸ್ವಾಮಿ ರವರು ರಸಿಕರರಾಜ ಡಾ.ರಾಜ್‌ಕುಮಾರ್‌ರವರ ಕಟ್ಟಾ ಅಭಿಮಾನಿ.

ಡಾ.ರಾಜ್‌ರವರ ಹುಟ್ಟುಹಬ್ಬವಿರಲಿ, ಪುಣ್ಯತಿಥಿಯಾಗಲಿ ಯಾವುದೇ ಕಾರ್ಯಕ್ರಮವಿದ್ದರೂ ಮುಂದೆ ನಿಲ್ಲುವ ಫ್ಯಾನ್ .ಜೂ. 23ರಂದು ಮಹದೇವಸ್ವಾಮಿರವರ ಮಗಳು ಕಾವ್ಯರವರ ವಿವಾಹ ಮಹೋತ್ಸವ ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಕನಕ ಸಮುದಾಯ ಭವನದಲ್ಲಿ ನೆರವೇರಲಿದೆ.ನಂಜನಗೂಡಿನ ಸುಪ್ರೀತ್‌ ಹೆಚ್‌.ಸುರೇಶ್‌ರವರನ್ನು ಕಾವ್ಯ ವರಿಸಲಿದ್ದಾರೆ.

ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಮಹದೇವಸ್ವಾಮಿ ರವರು ನೆಚ್ಚಿನ ನಟನ ಭಾವಚಿತ್ರದೊಂದಿಗೆ ಹಾಗೂ ಇಡೀ ಕುಟುಂಬದ ಆಶೀರ್ವಾದ ಕೋರಿ ಮುದ್ರಿಸಿದ್ದಾರೆ.ಡಾ.ರಾಜ್‌ ದಂಪತಿ, ಪುತ್ರರಾದ ಡಾ. ಶಿವರಾಜ್‌ಕುಮಾರ್‌ ದಂಪತಿ, ರಾಘವೇಂದ್ರ ರಾಜ್‌ಕುಮಾರ್‌ ದಂಪತಿ ಹಾಗೂ ಪುನೀತ್‌ ರಾಜ್‌ಕುಮಾರ್‌ ದಂಪತಿಯ ಭಾವಚಿತ್ರಗಳನ್ನು ಮದುವೆ ಕರೆಯೋಲೆಯಲ್ಲಿ ಮುದ್ರಿಸಿ ತಮ ಅಭಿಮಾನವನ್ನು ಮೆರೆದಿದ್ದಾರೆ.

ಜೊತೆಗೆ ಡಾ.ರಾಜ್‌ಕುಮಾರ್‌ ಸಂಘದ ರಾಜ್ಯಾಧ್ಯಕ್ಷರಾದ ಸಾ.ರಾ.ಗೋವಿಂದ್‌ರವರ ಭಾವಚಿತ್ರವನ್ನೂ ಸಹ ಮುದ್ರಿಸಿದ್ದಾರೆ.ಮಹದೇವ್‌ ರವರ ಕಟ್ಟಾ ಅಭಿಮಾನಕ್ಕೆ ಸಾರ್ವಜನಿಕರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News