Monday, July 28, 2025
Homeರಾಷ್ಟ್ರೀಯ | Nationalಡ್ರೋನ್‌ ಮೂಲಕ ಉಡಾಯಿಸಬಲ್ಲ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಡಿಆರ್‌ಡಿಒ

ಡ್ರೋನ್‌ ಮೂಲಕ ಉಡಾಯಿಸಬಲ್ಲ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಡಿಆರ್‌ಡಿಒ

DRDO Test-Fires UAV-Launched Precision Missile ULPGM-V3 in Andhra Pradesh

ನವದೆಹಲಿ, ಜು. 25 (ಪಿಟಿಐ) ಡ್ರೋನ್‌ ಮೂಲಕ ಉಡಾವಣೆ ಮಾಡುವ ಕ್ಷಿಪಣಿಯನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದೆ. ಆಂಧ್ರಪ್ರದೇಶದ ಪರೀಕ್ಷಾ ವ್ಯಾಪ್ತಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಡ್ರೋನ್‌ ಮೂಲಕ ಉಡಾವಣೆ ಮಾಡುವ ನಿಖರ ಮಾರ್ಗದರ್ಶಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಕರ್ನೂಲ್‌ನಲ್ಲಿ ಹಾರಾಟದ ಪ್ರಯೋಗಗಳನ್ನು ನಡೆಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಇಂದಿಲ್ಲಿ ಮಾಹಿತಿ ನೀಡಿದ್ದಾರೆ. ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನವಾಗಿ, ಆಂಧ್ರಪ್ರದೇಶದ ಕರ್ನೂಲ್‌ನಲ್ಲಿರುವ ರಾಷ್ಟ್ರೀಯ ಮುಕ್ತ ಪ್ರದೇಶ ಶ್ರೇಣಿ ಪರೀಕ್ಷಾ ವ್ಯಾಪ್ತಿಯಲ್ಲಿ ಉಡಾವಣೆಯ ನಿಖರ ಮಾರ್ಗದರ್ಶಿ ಕ್ಷಿಪಣಿ (ಯುಎಲ್‌ಪಿಜಿಎಂ) ವಿ-3 ನ ಹಾರಾಟದ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಸಿಂಗ್‌ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

RELATED ARTICLES

Latest News