ದೊಡ್ಡಬಳ್ಳಾಪುರ,ಅ.15– ಚಾಲಕನ ನಿಯಂತ್ರಣ ತಪ್ಪಿ ಕಾರು ದೇವಸ್ಥಾನದ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಅರಳು ಮಲ್ಲಿಗೆ ಬಾಗಿಲು ಬಳಿ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ನಗರದ ಅರ್ಚಕರೊಬ್ಬರಿಗೆ ಸೇರಿದ ಕಾರನ್ನು ರಿಪೇರಿಗಾಗಿ ಬಿಟ್ಟಿದ್ದರೆಂದು ಹೇಳಲಾಗುತ್ತಿದೆ. ಆದರೆ ಮೆಕಾನಿಕ್ ದುರಸ್ತಿಯಾದ ಕಾರಿನಲ್ಲಿ ಗೆಳೆಯರೊಂದಿಗೆ ತೆರಳುವ ವೇಳೆ ರಾತ್ರಿ 11.30ರ ಸುಮಾರಿಗೆ ನಿಯಂತ್ರಣತಪ್ಪಿ ಅರಳು ಮಲ್ಲಿಗೆ ಬಾಗಿಲು ವೃತ್ತದ ಗಣೇಶ ದೇವಸ್ಥಾನದ ಗೋಡೆಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಚಾಲಕನ ಕಾಲಿಗೆ ಗಂಭೀರ ಪೆಟ್ಟು ಬಿದ್ದಿದೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆೆಯಲ್ಲಿ ಪ್ರಕರಣ ದಾಖಲಾಗಿದೆ.