ಸೌತ್ ಐಲ್ಯಾಂಡ್, ಜ.1-ಹೊಸ ವರ್ಷದ ದಿನದಂದು ಮುಂಜಾನೆ ಕಾಲ್ನಡಿಗೆಯಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ನ್ಯೂಜಿಲೆಂಡ್ ಪೊಲೀಸ್ ಅಧಿಕಾರಿಗಳಿಗೆ ಕಾರು ಡಿಕ್ಕಿ ಹೊಡೆದು ಒಬ್ಬರು ಸಾವನ್ನಪ್ಪಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳ ಹತ್ಯೆ ರೂಪವಾಗಿದ್ದು ದೇಶವನ್ನು ಬೆಚ್ಚಿಬೀಳಿಸಿದೆ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ವಾಹನ ನಿಲುಗಡೆ ಸ್ಥಳದಲ್ಲಿ ನಿಯಮಿತ ಗಸ್ತು ನಡೆಸುತ್ತಿದ್ದಾಗ ವೇಗವಾಗಿ ಬಂದ ಕಾರು ಅಧಿಕಾರಿಗಳ ಮೇಲೆ ಹರಿದಿದೆ ಎಂದು ಚೇಂಬರ್ಸ್ ಸೌತ್ ಐಲ್ಯಾಂಡ್‌ನ ನೆಲ್ಸನ್‌ನ ಪೊಲೀಸ್ ಕಮಿಷನರ್ ರಿಚರ್ಡ್ ಸುದ್ದಿಗಾರರಿಗೆ ತಿಳಿಸಿದರು.
ಸ್ಥಳೀಯ ಕಾಲಮಾನ ನಸುಕಿನ 2 ಗಂಟೆಗೆ ನಡೆದ ಘಟನೆಯ ನಂತರ 32 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಮೃತ ಮಹಿಳಾ ಪೊಲೀಸ್ ಅಧಿಕಾರಿ ತೀವ್ರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇನ್ನೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಆದರೆ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಪೊಲೀಸ್ ಕಾರಿನಲ್ಲಿದ್ದ ಮೂರನೇ ಅಧಿಕಾರಿಯೊಬ್ಬರು ಘಟನೆ ನೋಡಿ ಆಘಾತಕ್ಕೊಳಗಾದರು ಮತ್ತು ಇಬ್ಬರು ಸಾರ್ವಜನಿಕರು ಗಾಯಗೊಂಡರು, ಗಾಯಗೊಂಡ ಅಧಿಕಾರಿಗಳಿಗೆ ಸಹಾಯ ಮಾಡಲು ಬಂದ ನಂತರ ಅವರಲ್ಲಿ ಒಬ್ಬರು ಗಾಯಗೊಂಡರು.