ಬೆಂಗಳೂರು,ಡಿ.16- ಕೃಷಿ ಹೊಂಡದಲ್ಲಿ ಸ್ಟೋಡಿಯಂ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ 9ರ ರನ್ನರ್ ಅಪ್ ಡ್ರೋಣ್ ಪ್ರತಾಪ್ ರಿಗೆ ಮಧುಗಿರಿ ನ್ಯಾಯಾಲಯ 10 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಮಧುಗಿರಿಯ ಜೆಎಂಎಫ್ ಸಿ ನ್ಯಾಯಾಲಯ ಇಂದು ವಿಚಾರಣೆ ನಡೆಸಿ ಡಿಸೆಂಬರ್ 26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೃಷಿ ಹೊಂಡದಲ್ಲಿ ಸ್ಟೋಡಿಯಂ ಬ್ಲಾಸ್ಟ್ ಮಾಡಿದ ನಂತರ ಈ ವೀಡಿಯೋವನ್ನು ತಮ ಸಾಮಾಜಿಕ ಜಾಲತಾಣದಲ್ಲಿ ಡ್ರೋಣ್ ಪ್ರತಾಪ್ ಅಪ್ ಲೋಡ್ ಮಾಡಿದ್ದು ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನಿನ ಮಾಲೀಕ ಜಿತೇಂದ್ರ ಜೈನ್ ಹಾಗೂ ಡ್ರೋಣ್ ಪ್ರತಾಪ್ ಅವರ ಇಬ್ಬರು ಸ್ನೇಹಿತರ ವಿರುದ್ಧವೂ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.