Friday, November 22, 2024
Homeರಾಜ್ಯಇನ್ನೊಂದು ವಾರದಲ್ಲಿ ಬರ ಅಧ್ಯಯನ ವರದಿ ಕೇಂದ್ರಕ್ಕೆ ಸಲ್ಲಿಕೆ

ಇನ್ನೊಂದು ವಾರದಲ್ಲಿ ಬರ ಅಧ್ಯಯನ ವರದಿ ಕೇಂದ್ರಕ್ಕೆ ಸಲ್ಲಿಕೆ

ಬೆಂಗಳೂರು, ಅ.9- ರಾಜ್ಯದ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಅಧ್ಯಯನ ತಂಡವು ಕೇಂದ್ರ ಸರ್ಕಾರಕ್ಕೆ ಇನ್ನೊಂದು ವಾರದಲ್ಲಿ ಬರ ಅಧ್ಯಯನ ಕುರಿತ ವರದಿ ಸಲ್ಲಿಸುವುದಾಗಿ ಹೇಳಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಬರ ಅಧ್ಯಯನ ತಂಡಗಳೊಂದಿಗೆ ಸಂಪುಟ ಉಪ ಸಮಿತಿ ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಷ್ಟು ಪರಿಹಾರ ಕೊಡುತ್ತಾರೆ ಎಂಬುದನ್ನು ನೋಡಬೇಕು ಎಂದರು.

ಕೇಂದ್ರದ ಮೂರು ತಂಡಗಳು ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಕುಡಿಯುವ ನೀರು, ಮೇವು, ಬೆಳೆ ಪರಿಸ್ಥಿತಿ ಅವಲೋಕನ ಮಾಡಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ 4800 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿಗೆ ಅಧ್ಯಯನ ತಂಡ ವರದಿ ಸಲ್ಲಿಸಿದರೆ, ನಂತರ ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬಹುದು. ಕೇಂದ್ರ ಗೃಹ ಮತ್ತು ಕೃಷಿ ಸಚಿವರ ಭೇಟಿಗೆ ಸಮಯ ಕೇಳಿ ಪತ್ರ ಬರೆಯುತ್ತೇವೆ. ಸಮಯ ನೀಡಿದರೆ ಸಂಪುಟ ಉಪ ಸಮಿತಿಯ ಸದಸ್ಯರು ಭೇಟಿ ರಾಜ್ಯದ ಎದುರಿಸುತ್ತಿರುವ ಬರದ ಸಮಸ್ಯೆ ಮನವರಿಕೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಮನವಿಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾವು.ಬಳಿಕ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿದ್ದೆವು, ಸಿಕ್ಕಿಲ್ಲ ಎಂದರು. ಮನವಿ ಸಲ್ಲಿಕೆ ನಂತರ ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಿ ಪರಿಶೀಲಿಸಿದೆ. ಮನವಿ ವಸ್ತು ಸ್ಥಿತಿಯಿಂದ ಕೂಡಿದ್ದು, ಸಾಕಷ್ಟು ರೈತರಿಗೆ ಬೆಳೆ ಹಾನಿಯಿಂದ ತೊಂದರೆ ಆಗಿದೆ.

ಹಿಂಗಾರು ಮಳೆ ತೊಂದರೆ ಆಗಬಹುದು, ಕುಡಿಯುವ ನೀರಿಗೂ ತೊಂದರೆ ಆಗಬಹುದು ಎಂದು ಹೇಳಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರ ಅಂಕಿ- ಅಂಶ ಕೇಳಿದ್ದು, ಅದನ್ನು ಒದಗಿಸಿಕೊಡುತ್ತೇವೆ. ವಾರದ ಒಳಗಡೆ ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ ಎಂದರು.

ಈಗ ವಿಚಿತ್ರ ಹವಾಮಾನ ಪರಿಸ್ಥಿತಿ ಇದೆ. ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಳೆ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟತೆ ಇಲ್ಲದ ವಾತಾವರಣ ಇದೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಲು ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತ್ರಿಯಲ್ಲಿ ಕೂಲಿ ಪಾವತಿ ಆಗಿಲ್ಲ 475 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಬೇಕು.ಕೂಲಿ ಹಣ ಬಾಕಿಯಿಂದ ಬಡವರು ಮತ್ತಷ್ಟು ಸಂಕಷ್ಟದಲ್ಲಿದ್ದಾರೆ ಎಂದರು.

ಇಸ್ರೇಲ್‍ನಲ್ಲಿ 18,000 ಭಾರತೀಯರು ಸುರಕ್ಷಿತ

ಫಸಲು ಭೀಮಾ ಯೋಜನೆ ರೈತರಿಗೆ ಪರಿಣಾಮಕಾರಿ ಅನುಕೂಲ ಆಗುತ್ತಿಲ್ಲ. ಇದನ್ನು ಕೇಂದ್ರದ ಅಧಿಕಾರಿಗಳ ಗಮನಕ್ಕೆ ತರುವಂತೆ ಹೇಳಿದ್ದೇವೆ. ಪರಿಹಾರದ ಬಗ್ಗೆ ನಾವು ಒತ್ತಡ ಹಾಕಬಹುದು, ಆದರೆ ಅಂತಿಮ ನಿರ್ಧಾರ ಅವರದ್ದೇ ಎಂದು ಸಚಿವರು ತಿಳಿಸಿದರು.

RELATED ARTICLES

Latest News