Monday, July 21, 2025
Homeರಾಷ್ಟ್ರೀಯ | National76 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

76 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಇಂಫಾಲ, ಜು. 21 (ಪಿಟಿಐ) ಮಣಿಪುರ ಪೊಲೀಸ್‌‍ ಮತ್ತು ಸಿಆರ್‌ಪಿಎಪ್‌ ನಡೆಸಿದ ಜಂಟಿ ಕಾರ್ಯಾಚರಣೆ ಸಂದರ್ಭದಲ್ಲಿ ಬರೊಬ್ಬರಿ 76 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
ಅಸ್ಸಾಂ ರೈಫಲ್ಸ್ ತಂಡ ಜಿರಿಬಮ್‌ ಜಿಲ್ಲೆಯಿಂದ 76 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅರೆಸೈನಿಕ ಪಡೆಹೇಳಿಕೆಯಲ್ಲಿ ತಿಳಿಸಿದೆ. ಖಚಿತ ಸುಳಿವಿನ ಮೇರೆಗೆ ಕಾರ್ಯನಿರ್ವಹಿಸಿದ ಭದ್ರತಾ ಪಡೆಗಳು 616 ಸೋಪ್‌ ಬಾಕ್ಸಿನಲ್ಲಿ ಅಡಗಿಸಿಟ್ಟಿದ್ದ ಹೆರಾಯಿನ್‌ ಮತ್ತು 50,000 ನಿಷೇಧಿತ ಮೆಥಾಂಫೆಟಮೈನ್‌ ಮಾತ್ರೆಗಳನ್ನು ವಶಪಡಿಸಿಕೊಂಡಿವೆ ಎಂದು ಅದು ಹೇಳಿದೆ.

ಜಿರಿಬಮ್‌ ಜಿಲ್ಲೆಯ ಬರಾಕ್‌ ನದಿಯಲ್ಲಿ ದೋಣಿಯ ಮೂಲಕ ಮಾದಕ ವಸ್ತುಗಳನ್ನು ಸಾಗಿಸಲಾಗುತ್ತಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಮಾದಕ ವಸ್ತುಗಳ ವಶಪಡಿಸಿಕೊಳ್ಳುವಿಕೆಗಾಗಿ ಅಸ್ಸಾಂ ರೈಫಲ್ಸ್ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ ಎನ್‌ ಬಿರೇನ್‌ ಸಿಂಗ್‌ ಶ್ಲಾಘಿಸಿದ್ದಾರೆ. ಈ ಪ್ರದೇಶದಲ್ಲಿ ಪ್ರಮುಖ ಮಾದಕವಸ್ತು ಕಳ್ಳಸಾಗಣೆ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಅಸ್ಸಾಂ ರೈಫಲ್ಸ್ ನ ನಿರ್ಣಾಯಕ ಕ್ರಮಕ್ಕಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ ಎಂದು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗಡಿಯಾಚೆಗಿನ ಕಳ್ಳಸಾಗಣೆ ವಿರುದ್ಧದ ಕಠಿಣ ಕ್ರಮವನ್ನು ಮುಂದುವರಿಸಲು ಸಿಂಗ್‌ ಅರೆಸೈನಿಕ ಪಡೆಗೆ ಒತ್ತಾಯಿಸಿದರು.ನಮ್ಮ ಗಡಿ ಪ್ರದೇಶಗಳನ್ನು ಐತಿಹಾಸಿಕವಾಗಿ ಮಾದಕವಸ್ತು ಕಳ್ಳಸಾಗಣೆ ಮಾರ್ಗಗಳಾಗಿ ಬಳಸಲಾಗುತ್ತಿರುವುದರಿಂದ, ಹೊಸ ಕಾರಿಡಾರ್‌ಗಳು ಹೊರಹೊಮ್ಮುವುದನ್ನು ತಡೆಯಲು ನಿರಂತರ ಮತ್ತು ತೀವ್ರವಾದ ಕಣ್ಗಾವಲು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News