Friday, November 22, 2024
Homeಕ್ರೀಡಾ ಸುದ್ದಿ | Sportsಕೊಕೇನ್ ಕಳ್ಳಸಾಗಣೆ : ದುಬೈನಲ್ಲಿ ಡಚ್ ಪುಟ್‍ಬಾಲ್ ಆಟಗಾರ ಅರೆಸ್ಟ್

ಕೊಕೇನ್ ಕಳ್ಳಸಾಗಣೆ : ದುಬೈನಲ್ಲಿ ಡಚ್ ಪುಟ್‍ಬಾಲ್ ಆಟಗಾರ ಅರೆಸ್ಟ್

ಹೇಗ್ (ನೆದಲ್ಯಾರ್ಂಡ್ಸ್), ಮಾ. 14: ಕೊಕೇನ್ ಕಳ್ಳಸಾಗಣೆಯಲ್ಲಿ ತೊಡಗಿದ್ದಕ್ಕಾಗಿ ಆಂಸ್ಟರ್ಡ್ಯಾಮ್ ನ್ಯಾಯಾಲಯದಿಂದ ತಪ್ಪಿತಸ್ಥ ಎಂದು ಆರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಡಚ್‍ನ ಪುಟ್‍ಬಾಲ್ ಆಟಗಾರ ಕ್ವಿನ್ಸಿ ಪ್ರೊಮ್ಸ್ ಅವರನ್ನು ದುಬೈನಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.

ಕಾನೂನು ಅಧಿಕಾರಿಗಳು ಪ್ರೊಮ್ಸ್ ಹೆಸರನ್ನು ದೃಢೀಕರಿಸಲಿಲ್ಲ, ಆದರೆ ಮಾಸ್ಕೋದಲ್ಲಿ ವಾಸಿಸುವ 32 ವರ್ಷದ ವ್ಯಕ್ತಿಯನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 32 ವರ್ಷದ ಈತ ರಷ್ಯಾದ ರಾಜಧಾನಿಯಲ್ಲಿ ವಾಸಿಸುತ್ತಾನೆ, ಅಲ್ಲಿ ಅವನು ಸ್ಪಾರ್ಟಕ್ ಮಾಸ್ಕೋಗಾಗಿ ಆಡುತ್ತಿದ್ದ ಎಂದು ತಿಳಿಸಲಾಗಿದ್ದು,ಡಚ್ ಪ್ರಾಸಿಕ್ಯೂಟರ್‍ಗಳು ಅಪರಾಧ ಪ್ರಕರಣಗಳಲ್ಲಿ ಶಂಕಿತರ ಹೆಸರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಪ್ರಸ್ತುತ ಅತನ ಹಸ್ತಾಂತರ ಮಾಡಲು ಡಚ್
ಪ್ರಾಸಿಕ್ಯೂಟರ್‍ಗಳು ವಿನಂತಿಸಿದ್ದಾರೆ.

ಬಂಧಿತ ವ್ಯಕ್ತಿ ವಿವಿಧ ಮಾಧ್ಯಮ ವರದಿಗಳ ಪ್ರಕಾರ ದುಬೈನಲ್ಲಿ ಐಷಾರಾಮಿ ನೆಲೆಸಿದ್ದಾನೆ ಎಂದು ವರದಿಯಾಗಿದೆ. ಆದಾಗ್ಯೂ, ಎರಡೂ ದೇಶಗಳ ಅಧಿಕಾರಿಗಳ ಪ್ರಯತ್ನದಿಮದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಚ್ ಅಧಿಕಾರಿ ಹೇಳಿದ್ದಾರೆ.ಈ ಸಮಯದಲ್ಲಿ, ನಡೆಯುತ್ತಿರುವ ತನಿಖೆಗೆ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ.ಸ್ಪಾರ್ಟಕ್ ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಸೌಹಾರ್ದ ಪಂದ್ಯಗಳನ್ನು ಆಡಿದರು. ನಂತರ ಕಾಣಿಸಿಕೊಂಡಿಲ್ಲ.

ತನ್ನ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ನೆದಲ್ಯಾರ್ಂಡ್ ತಂಡದಲ್ಲಿ 50 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ ಏಳು ಗೋಲುಗಳನ್ನು ಗಳಿಸಿದ್ದಾನೆ .ಕೊಕೇನ್ ಕಳ್ಳಸಾಗಣೆಯಲ್ಲಿನ ಸಿಕ್ಕಿಬಿದ್ದು ಕಳೆದ ತಿಂಗಳು ಆತನ ಅನುಪಸ್ಥಿತಿಯಲ್ಲಿ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದು ಅವನ ಮೊದಲ ಅಪರಾಧವಲ್ಲ. ಕಳೆದ ವರ್ಷ, ಪ್ರೊಮ್ಸ್ ತನ್ನ ಸೋದರ ಸಂಬಂಯಯ ಕಾಲಿಗೆ ಇರಿದಿದ್ದಕ್ಕಾಗಿ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು.

RELATED ARTICLES

Latest News