ಬೆಂಗಳೂರು,ಆ.12– ಡೇಟಾ ಸೆಂಟರ್‌ಗಳನ್ನು ಬಾಡಿಗೆ ಕೊಡುವ ಮಾಲೀಕರು ಯಾವುದಕ್ಕೆ ಉಪಯೋಗ ಆಗುತ್ತಿದೆ ಎಂಬುವುದು ತಿಳಿದಿರಬೇಕೆಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೇಟಾ ಸೆಂಟರ್ ಬಾಡಿಗೆಗೆ ಪಡೆಯುವವರು ಅದನ್ನು ದುರುಪಯೋಗ ಮಾಡುತ್ತಿರುವುದು ನಮ ಗಮನಕ್ಕೆ ಬಂದಿದೆ. ಡೇಟಾ ಸೆಂಟರ್‌ನಲ್ಲಿ ಬೇರೆಯವರು ಅಕ್ರಮವಾಗಿ ಸಿಮ್ ಬಾಕ್ಸ್ ಅಳವಡಿಸಿ ಅಕ್ರಮವಾಗಿ ವ್ಯವಹರಿಸುತ್ತಿರುವುದು ಕಂಡು ಬಂದಿದೆ ಎಂದರು.
ನಗರದ ಎಲ್ಲಾ ಡೇಟಾ ಸೆಂಟರ್‌ಗಳು ತಮಲ್ಲಿ ಅಳವಡಿಸಲ್ಪಡುವ ಮೂಲ ಸೌಕರ್ಯವನ್ನು ಸೂಕ್ತವಾಗಿ ಪರಿಶೀಲಿಸಿ, ಅಕ್ರಮ ಸಿಮ್ ಬಾಕ್ಸ್ ಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಇತ್ತೀಚೆಗೆ ನಡೆದಿರುವ ಮೂರು ಪ್ರಕರಣಗಳನ್ನು ತನಿಖೆ ಮಾಡಿದಾಗ ಬೇರೆ ಬೇರೆ ಅಕ್ರಮ ಸೈಬರ್ ಕ್ರೈಂಗಳಿಗೆ ಸಿಮ್ ಬಾಕ್‌್ಸ ಬಳಸಿರುವುದು ಗೊತ್ತಾಗಿದೆ. ಅಕ್ರಮ ಸಿಮ್‌ಬಾಕ್‌್ಸ ಮೂಲ ಸೌಕರ್ಯವನ್ನು ಪತ್ತೆ ಹಚ್ಚುವ ಸಲುವಾಗಿ ಸಿಸಿಬಿ ಮತ್ತು ಸಿಸಿಪಿಎಸ್ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ ಎಂದರು.
ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಸಿಮ್ ಬಾಕ್ಸ್ ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಲದ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆ ಅಕ್ರಮ ಟೆಲಿಕಾಂ ವಿನಿಮಯಗಳನ್ನು ತಡೆಹಿಡಿಯಲು, ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಹಾಗೂ ಸರ್ಕಾರ ಮತ್ತು ಟೆಲಿಕಾಂ ಸಂಸ್ಥೆಗಳ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಅಧಿಕಾರಿಗಳ ಬದ್ದತೆಯನ್ನು ಎತ್ತಿಹಿಡಿಯಲು ಸಹಾಯವಾಗಿದೆ ಎಂದರು.
ಆ.2 ರಂದು ದಾಖಲಾದ ದೂರಿನ ಆಧಾರದ ಮೇಲೆ ನಡೆದ ತನಿಖೆಯಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ವೈಟ್‌ಫೀಲ್‌್ಡನಲ್ಲಿರುವ ಡೇಟಾ ಸೆಂಟರ್‌ನಿಂದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಇಬ್ಬರು ಆರೋಪಿಗಳು ವಿದೇಶದಲ್ಲಿದ್ದು ಅವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
ವೊಡಾಫೋನ್ ಲಿಮಿಟೆಡ್‌ನ ನೋಂದಣಿ ಅಧಿಕಾರಿಯೊಬ್ಬರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ಗ್ಲೀಮ್ ಗ್ಲೋಬಲ್ ಸರ್ವೀಸಸ್ ಕಂಪನಿ ಹೆಸರಿನಲ್ಲಿ ಸಿಮ್‌ಗಳನ್ನು ಖರೀದಿಸಿ ಅವುಗಳನ್ನು ವೈಟ್‌ಫೀಲ್‌್ಡನ ಐರನ್ ಮೌಂಟನ್ ಡೇಟಾ ಸೆಂಟರ್‌ನಲ್ಲಿ ಅಕ್ರಮವಾಗಿ ಅಳವಡಿಸಿದ ಸಿಮ್ ಬಾಕ್‌್ಸನಲ್ಲಿ ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಿಸಿಬಿ ಸೈಬರ್‌ಕ್ರೈಂ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಆ. 4 ರಂದು ಇದೇ ರೀತಿಯ ಹಿಂದಿನ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಒಬ್ಬ ಶಂಕಿತನನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ನಕಲಿ ಸಿಮ್ ಬಾಕ್‌್ಸ ಬಗ್ಗೆ ತಿಳಿಸಿದ್ದಾನೆ.
ಆರೋಪಿಯು ಡೇಟಾ ಸೆಂಟರ್‌ನಲ್ಲಿ ಸಿಮ್ ಬಾಕ್ಸ್ ಮೂಲ ಸೌಕರ್ಯವನ್ನು ಅಳವಡಿಸಿರುವುದಾಗಿ ಹೇಳಿದ್ದು, ವಿದೇಶದಲ್ಲಿರುವ ಮತ್ತಿಬ್ಬರು ಆರೋಪಿಗಳು ಸಂಪರ್ಕದಲ್ಲಿರುವುದಾಗಿ ಹೇಳಿದ್ದಾನೆ. ವಿದೇಶದಲ್ಲಿರುವ ಇಬ್ಬರ ಮಾರ್ಗದರ್ಶನದಂತೆ ವೊಡಾಫೋನ್‌ನಿಂದ ಸಿಮ್‌ಗಳನ್ನು ಖರೀದಿಸಿ ನಕಲಿ ಕಂಪನಿಗಳ ಹೆಸರಿನಲ್ಲಿ ಐಪಿಬಿಎಕ್ಸ್ ಸರ್ವರ್‌ಗಳು ಹಾಗೂ ಸಿಮ್ ಬಾಕ್ಸ್ ಗಳನ್ನು ಅಳವಡಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ.
ಆರೋಪಿಯ ಮಾಹಿತಿ ಆಧಾರದ ಮೇಲೆ ಡೇಟಾ ಸೆಂಟರ್‌ನಲ್ಲಿ ಶೋಧ ನಡೆಸಿ 10 ಲಕ್ಷ ರೂ. ಮೌಲ್ಯದ 6 ಸಿಮ್ ಬಾಕ್‌್ಸಗಳು,133 ಸಿಮ್‌ಕಾರ್ಡ್‌ಗಳು, 12 ಡೇಟಾ ಸ್ಟೋರೇಜ್ ಸರ್ವರ್‌ಗಳು,1 ನೆಟ್‌ವರ್ಕ್ ರೌಟರ್ ಹಾಗೂ ಇತರೆ ಸಂಬಂಧಿತ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಆಯುಕ್ತರು ವಿವರಿಸಿದರು.
ವಶಪಡಿಸಿಕೊಂಡಿರುವ ಸಿಮ್‌ಗಳನ್ನು ಇತರೆ ಸೈಬರ್ ಅಪರಾಧಗಳಲ್ಲಿ ಬಳಸಿರುವ ಸಾಧ್ಯತೆ ಕಂಡುಬಂದಿದ್ದು, ಸಿಮ್ ಬಾಕ್ಸ್ ನ್ನು ಇತರೆ ಯಾವುದೇ ಸೈಬರ್ ಅಪರಾಧಗಳಿಗೆ ಬಳಸಿದ್ದಾರೆಯೇ ಎಂಬುವುದರ ಕುರಿತು ತನಿಖೆ ಮುಂದುವರೆದಿದೆ.
ಈ ಕ್ರಿಯೆಯಲ್ಲಿ ಅಂತರಾಷ್ಟ್ರೀಯ ಕರೆಗಳನ್ನು ಅಕ್ರಮವಾಗಿ ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುವುದರ ಜೊತೆಗೆ ಸರ್ಕಾರ ಹಾಗೂ ಟೆಲಿಕಾಂ ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಹಾಗಾಗಿ ಈ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಡೇಟಾ ಸೆಂಟರ್‌ನವರಿಗೆ ಮನವಿ ಮಾಡಿದ್ದಾರೆ.