ಪಾಲ್ಘರ್,ಜ.6-ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಂದು ಮುಂಜಾನೆ 3.7 ತೀವ್ರತೆಯ ಕಂಪನ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ದಹಾನು ತಾಲೂಕಿನಲ್ಲಿ ಮುಂಜಾನೆ 4.35ಕ್ಕೆ ಕಂಪನ ದಾಖಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ವಿವೇಕಾನಂದ ಕದಂ ಅಧಿಕೃತ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ತಾಲೂಕಿನ ಬೋರ್ಡಿ, ದಪ್ಪಚಾರಿ, ತಲಸರಿ ಭಾಗದ ಜನರು ಮುಂಜಾನೆ ಕಂಪಿಸಿದ ಅನುಭವವಾಗಿದೆ ಎಂದರು. ಜಿಲ್ಲೆಯಲ್ಲಿ ಈ ಹಿಂದೆಯೂ ಆಗಾಗ ಕಂಪನದ ಅನುಭವವಾಗಿದೆ ಮತ್ತು ಜನರು ಆತಂಕಗೊಂಡಿದ್ದಾರೆ.