ಕರಾಚಿ, ಜೂನ್.3-ಸ್ಥಳಾಂತರಿಸುವ ಸಮಯದಲ್ಲಿ ಉಂಟಾದ ಅವ್ಯವಸ್ಥೆಯಲ್ಲಿ ಸುಮಾರು 216 ಕೈದಿಗಳು ಪಾಕಿಸ್ತಾನದ ಕರಾಚಿ ಜೈಲಿನಿಂದ ಪರಾರಿಯಾಗಿದ್ದಾರೆ. ಕರಾಚಿಯ ಮಾಲಿರ್ ಜೈಲಿನಲ್ಲಿ ಕಳೆದ ರಾತ್ರಿ ನಡೆದ ಈ ಘಟನೆಯಲ್ಲಿ ಒಬ್ಬ ಕೈದಿ ಸಾವನ್ನಪ್ಪಿದರು ಮತ್ತು ಮೂವರು ರಕ್ಷಣಾ ಸಿಬ್ಬಂದಿ ಮತ್ತು ಒಬ್ಬ ಜೈಲು ಸಿಬ್ಬಂದಿ ಗಾಯಗೊಂಡಿದ್ದಾರೆ.
ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಜೈಲು ಅಧಿಕಾರಿಗಳ ಪ್ರಕಾರ, 80 ಕ್ಕೂ ಹೆಚ್ಚು ಕೈದಿಗಳನ್ನು ಮರಳಿ ವಶಪಡಿಸಿಕೊಳ್ಳಲಾಗಿದೆ. ಕಳೆದ 24 ಗಂಟೆಗಳಲ್ಲಿ ಕರಾಚಿಯಲ್ಲಿ ಸರಣಿ ಭೂಕಂಪಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನ ಸಂಭವಿಸಿದ ಸಮಯದಲ್ಲಿ 600 ಕ್ಕೂ ಹೆಚ್ಚು ಕೈದಿಗಳನ್ನು ಅವರ ಬ್ಯಾರಕ್‌ಗಳಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಜೈಲು ಸೂಪರಿಂಟೆಂಡೆಂಟ್ ಅರ್ಷದ್ ಶಾ ಹೇಳಿದ್ದಾರೆ.
ಇದರ ಅವಕಾಶ ಪಡೆದು,ಅವ್ಯವಸ್ಥೆಯ ನಡುವೆ, 216 ಮಂದಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶಾ ಹೇಳಿದ್ದಾರೆ.
135 ಕ್ಕೂ ಹೆಚ್ಚು ಕೈದಿಗಳು ತಲೆಮರೆಸಿಕೊಂಡಿದ್ದು ಶೋಧ ಕಾರ್ಯಗಳು ಮುಂದುವರೆದಿವೆ ಎಂದು ಅವರು ಹೇಳಿದರು. ಉಳಿದ ಪರಾರಿಯಾದವರನ್ನು ಪತ್ತೆಹಚ್ಚಲು ಕಾನೂನು ಜಾರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಸಿಂದ್‌ನ ಗೃಹ ಸಚಿವ ಜಿಯಾ-ಉಲ್-ಹಸನ್ ಲಾಂಜಾರ್ ಈ ಘಟನೆಯನ್ನು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಗಂಭೀರ ಜೈಲ್ ಬ್ರೇಕ್ ಎಂದು ಕರೆದಿದ್ದಾರೆ.