ಚೆನ್ನೈ,ಮಾ.21- ತಮಿಳುನಾಡಿನ ಎಐಎಡಿಎಂಕೆ ನಾಯಕ ಹಾಗೂ ಮಾಜಿ ಸಚಿವ ಸಿ.ವಿಜಯಭಾಸ್ಕರ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶಾನಾಲಯ ದಾಳಿ ನಡೆಸಿದೆ.ಪ್ರತ್ಯೇಕ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಗುಂಪಿನ ಹೊರತಾಗಿ ಎಐಎಡಿಎಂಕೆ ನಾಯಕ ಮತ್ತು ತಮಿಳುನಾಡಿನ ಮಾಜಿ ಸಚಿವ ಸಿ ವಿಜಯಭಾಸ್ಕರ್ ವಿರುದ್ಧ ಜಾರಿ ನಿರ್ದೇಶನಾಲಯ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಮಿಳುನಾಡಿನ ಪುದುಕೊಟೈನ ಪ್ರಬಲ ನಾಯಕರಾಗಿರುವ ವಿಜಯಭಾಸ್ಕರ್ ಅವರು ಮಾಜಿ ಆರೋಗ್ಯ ಸಚಿವರಾಗಿದ್ದವರು. ಅವರ ವಿರುದ್ಧ ರಾಜ್ಯ ವಿಜಿಲೆನ್ಸ್ (ಡಿವಿಎಸಿ) ತನಿಖೆಯ ಆಧಾರದ ಮೇಲೆ ಅಕ್ರಮ ಆಸ್ತಿಗಳನ್ನು ಹೊಂದಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
ರಿಯಲ್ ಎಸ್ಟೇಟ್ ಗ್ರೂಪ್ ಜಿಸ್ಕ್ವೇರ್ಗೆ ಸೇರಿದ ಆವರಣಗಳು ಮತ್ತು ಚೆನ್ನೈ ನಗರ ಮತ್ತು ಸುತ್ತಮುತ್ತಲಿನ ಸಂಬಂಧಿತ ಘಟಕಗಳನ್ನು ಕೂಡ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ಅಡಿಯಲ್ಲಿ ತನಿಖೆಯ ಭಾಗವಾಗಿ ಶೋಧಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.