ನವದೆಹಲಿ, ಫೆ.25- ಕರ್ನಾಟಕ, ಆಂಧ್ರ, ತೆಲಂಗಾಣ ಮತ್ತಿತರ ಸ್ಥಳಗಳಲ್ಲಿ ಪೋಂಜಿ ಸ್ಟೀಮ್ ಸಂತ್ರಸ್ಥರಿಗೆ ಸುಮಾರು 3339 ಕೋಟಿ ರೂ.ಗಳ ಮುಟ್ಟುಗೋಲು ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಹಿಂತಿರುಗಿಸಿದೆ.
ಈ ಆಸ್ತಿಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯವು 6,000 ಕೋಟಿ ರೂ.ಗಳನ್ನು ಮೀರುತ್ತದೆ ಎಂದು ಅಂದಾಜಿಸಲಾಗಿದೆ. ಈ ಪ್ರಕರಣವು ಅಗ್ರಿಗೋಲ್ಡ್ ಗ್ರೂಪ್ ಆಫ್ ಕಂಪನಿಗಳನ್ನು ಒಳಗೊಂಡಿದೆ. ಇದು ರಿಯಲ್ ಎಸ್ಟೇಟ್ ಹೂಡಿಕೆಯ ನೆಪದಲ್ಲಿ ಸುಮಾರು 19 ಲಕ್ಷ ಗ್ರಾಹಕರಿಂದ ಠೇವಣಿಗಳನ್ನು ಸಂಗ್ರಹಿಸಿತ್ತು.
ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಒಡಿಶಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ದಾಖಲಾದ ಅನೇಕ ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು 2018 ರಲ್ಲಿ ಈ ಪ್ರಕರಣದ ಬಗ್ಗೆ ಮನಿ ಲಾಂಡರಿಂಗ್ ತನಿಖೆಯನ್ನು ಪ್ರಾರಂಭಿಸಿತ್ತು. ಇದೀಗ ಕೆಲ ಸಂಸ್ಥೆಗಳಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಆಸ್ತಿಗಳನ್ನು ಇಡಿ ಹಿಂತಿರುಗಿಸಿದೆ.