Saturday, November 23, 2024
Homeರಾಷ್ಟ್ರೀಯ | Nationalಟೀಮ್ ಇಂಡಿಯಾ ಮಾಜಿ ನಾಯಕ ಅಜರುದ್ದೀನ್​​ಗೆ ಇ.ಡಿ. ಸಮನ್ಸ್

ಟೀಮ್ ಇಂಡಿಯಾ ಮಾಜಿ ನಾಯಕ ಅಜರುದ್ದೀನ್​​ಗೆ ಇ.ಡಿ. ಸಮನ್ಸ್

ED Summons former India cricket captain Mohammad Azharuddin in money laundering case

ಹೈದರಾಬಾದ್,ಅ.3- ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಕುರಿತಂತೆ ವಿಚಾರಣೆಗೆ ಹಾಜರಾಗಲು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮದ್ ಅಜರುದ್ದೀನ್ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಎಚ್ಸಿಎ ಮಾಜಿ ಅಧ್ಯಕ್ಷ ಮೊಹಮದ್ ಅಜರುದ್ದೀನ್ ಅವರ ಅಧಿಕಾರಾವಧಿಯಲ್ಲಿ ಹಣ ದುರುಪಯೋಗದ ಆರೋಪವಿದ್ದು, ಪ್ರಸ್ತುತ ಕಾಂಗ್ರೆಸ್ನಲ್ಲಿ ಅಜರುದ್ದೀನ್ ಗುರುತಿಸಿಕೊಂಡಿದ್ದಾರೆ.

ಹೈದರಾಬಾದ್ನ ಉಪ್ಪಲ್ನಲ್ಲಿರುವ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂಗಾಗಿ ಡೀಸೆಲ್ ಜನರೇಟರ್, ಅಗ್ನಿಶಾಮಕ ವ್ಯವಸ್ಥೆಗಳು ಮತ್ತು ಕ್ಯಾನೋಪಿಗಳ ಖರೀದಿಗೆ ಮಂಜೂರು ಮಾಡಿದ 20 ಕೋಟಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದೆ.

ತನಿಖೆಗೊಳಪಟ್ಟಿರುವ ಹಣಕಾಸು ವಹಿವಾಟಿನಲ್ಲಿ ಅವರ ಪಾತ್ರವನ್ನು ಸ್ಪಷ್ಟಪಡಿಸಲು ಇಡಿ ಮುಂದೆ ಹಾಜರಾಗಲು ಕಾಂಗ್ರೆಸ್ ನಾಯಕನಿಗೆ ಇದೇ ಮೊದಲ ಬಾರಿಗೆ ಸಮನ್‌್ಸ ನೀಡಲಾಗಿದೆ.

ನವೆಂಬರ್ 2023ರಲ್ಲಿ ಇಡಿ ತೆಲಂಗಾಣದ ಒಂಬತ್ತು ಸ್ಥಳಗಳಲ್ಲಿ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್ಎ), 2002 ರ ನಿಬಂಧನೆಗಳಡಿ ಹುಡುಕಾಟ ನಡೆಸಿತ್ತು. ಈ ಹಿಂದೆ ಕ್ರಮವಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಗದ್ದಂ ವಿನೋದ್, ಶಿವಲಾಲ್ ಯಾದವ್ ಮತ್ತು ಅರ್ಷದ್ ಅಯೂಬ್ ಅವರ ನಿವಾಸಗಳಲ್ಲಿ ಶೋಧ ನಡೆಸಲಾಗಿತ್ತು.

ಎಸ್ಎಸ್ ಕನ್ಸಲ್ಟೆಂಟ್‌್ಸ ಪ್ರೈವೇಟ್ ಲಿಮಿಟೆಡ್ ಕಚೇರಿ ಆವರಣ, ಹಾಗೂ ಲಿಮಿಟೆಡ್ನ ವ್ಯವಸ್ಥಾಪಕ ಸತ್ಯನಾರಾಯಣ ಅವರ ವಸತಿ ಆವರಣದಲ್ಲೂ ಶೋಧ ನಡೆಸಲಾಗಿದೆ. ಈ ವೇಳೆ ಡಿಜಿಟಲ್ ಸಾಧನಗಳು, ದೋಷಾರೋಪಣೆ ಮಾಡುವ ದಾಖಲೆಗಳು ಮತ್ತು ಲೆಕ್ಕಕ್ಕೆ ಸಿಗದ 10.39 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಗಡ್ಡಂ ವಿನೋದ್ ಅವರ ನಿವಾಸದ ಆವರಣವೊಂದರಲ್ಲಿ ಹುಡುಕಾಟ ನಡೆಸಿದಾಗ, ಅದು ಅವರ ಸಹೋದರ ಮಾಜಿ ಸಂಸದ ಗದ್ದಂ ವಿವೇಕಾನಂದರ ಒಡೆತನದ/ನಿಯಂತ್ರಿತ ಹಲವಾರು ಕಂಪನಿಗಳಿಗೆ ಕಚೇರಿಯಾಗಿ ಬಳಕೆಯಾಗುತ್ತಿದೆ ಎಂದು ತಿಳಿದುಬಂದಿದೆ.

ಹೈದರಾಬಾದ್ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಮೂರು ಎಫ್ಐಆರ್ಗಳು ಮತ್ತು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ನಿಧಿಯನ್ನು ಕ್ರಿಮಿನಲ್ ದುರುಪಯೋಗಕ್ಕೆ ಸಂಬಂಧಿಸಿದಂತೆ ಎಸಿಬಿ ಸಲ್ಲಿಸಿದ ಚಾರ್ಜ್ಶೀಟ್ಗಳ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿದೆ.

RELATED ARTICLES

Latest News