ಢಾಕಾ,ಡಿ.28- ಇಂಖಿಲಾಬ್ ಮಂಚ ನಾಯಕ ಷರೀಫ್ ಉಸ್ಮಾನ್ ಹಾದಿಯ ಸಾವಿನ ಬಳಿಕ ದೇಶದಲ್ಲಿ ಭುಗಿಲೆದ್ದಿರುವ ಇತ್ತೀಇನ ಗಲಭೆಗಳಿಗೆ ಸರ್ಕಾರದಲ್ಲಿರುವ ಕೆಲವು ವರ್ಗಗಳು ಅವಕಾಶ ಮಾಡಿಕೊಡುತ್ತಿವೆ ಎಂದು ಬಾಂಗ್ಲಾದೇಶದ ಪತ್ರಿಕಾ ಸಂಪಾದಕರ ಮಂಡಳಿ ಆರೋಪಿಸಿದೆ.
ಢಾಕಾದಲ್ಲಿ ಡಿಸೆಬರ್ 12ರಂದು ಚುನಾವಣಾ ಪ್ರಚಾರದ ವೇಳೆ ಹಾದಿ ಅವರ ತಲೆಗೆ ಗುಂಡು ಹಾರಿಸಲಾಗಿತ್ತು. ಅವರನ್ನು ಸಿಂಗಾಪುರಕ್ಕೆ ಏರ್‌ಲಿಫ್‌್ಟ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಹಾದಿ ಡಿಸೆಂಬರ್ 18ರಂದು ಕೊನೆಯುಸಿರೆಳೆದರು.
ಅದೇ ದಿನ ಸಾಯಂಕಾಲ ಉದ್ರಿಕ್ತ ಜನರ ಗುಂಪೊಂದು ದೇಶದ ಅಧಿಕ ಪ್ರಸಾರದ ವಾರ್ತಾ ಪತ್ರಿಕೆಗಳಾದ ಡೈಲಿ ಸ್ಟಾರ್ ಮತ್ತು ಫ್ರೊಥೊಮ್ ಆಲೋ ಪತ್ರಿಕಾ ಕಚೇರಿಗಳಿಗೆ ಬೆಂಕಿ ಹಚ್ಚಿತ್ತು ಅರ್ಧ ಶತಮಾನದಷ್ಟು ಹಳೆಯ ಸಾಂಸ್ಕೃತಿಕ ಸಂಘಟನೆಗಳಾದ ಛಾಯಾನಟ್ ಮತ್ತು ಉಡಿಚಿ ಶಿಲ್ಪಿ ಗೋಷ್ಠಿ ಕಚೇರಿಗಳನ್ನು ಧ್ವಂಸಗೊಳಿಸಲಾಯಿತು. ಈ ಗುಂಪು ಕಾರ್ಖಾನೆಯ ಓರ್ವ ಹಿಂದೂ ಕಾರ್ಮಿಕನನ್ನೂ ಕೊಲೆಗೈದಿತು.
ದಾಳಿಗೆ ಎರಡು ದಿನಗಳ ಮುನ್ನ ಪ್ರೊಥೊಮ್ ಆಲೋ, ಡೈಲಿಸ್ಟಾರ್ ಮತ್ತು ಛಾಯಾನಟ್ ಅನ್ನು ಧ್ವಂಸಗೊಳಿಸುವುದಾಗಿ ಪ್ರಕಟಣೆ ಹೊರಡಿಸಲಾಗಿತ್ತು. ದೇಶದ ಜನತೆ ಮತ್ತು ಸರ್ಕಾರಕ್ಕೆ ಈ ಪ್ರಕಟಣೆ ನೀಡಿದವರು ಯಾರೆಂದು ಸ್ಪಷ್ಟವಾಗಿ ಗೊತ್ತಿದೆ ಎಂದು ಸಂಪಾದಕರ ಮಂಡಳಿ ಅಧ್ಯಕ್ಷ ನೂರುಲ್ ಕಬೀರ್ ಅವರು ಬ್ರಾಡ್‌ಕಾಸ್ಟ್ ಜರ್ನಲಿಸ್ಟ್ಸ್ ಸೆಂಟರ್(ಬಿಜೆಸಿ)ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ದೇಶದ ಕಾನೂನಿನಡಿ ಈ ತರಹ ಪ್ರಕಟಣೆಗಳನ್ನು ನೀಡುವುದು ಕ್ರಿಮಿನಲ್ ಅಪರಾಧ ಎಂದು ದಿ ನ್ಯೂ ಏಜ್ ವಾತಾ ಪತ್ರಿಕೆಯ ಸಂಪಾಕದರಾಗಿರುವ ಕಬೀರ್ ಪ್ರತಿಪಾದಿಸಿದರು. ಗಲಭೆ ತಡೆಗಟ್ಟಲು ಸರ್ಕಾರ ಅವರನ್ನು ಬಂಧಿಸಲಿಲ್ಲ. ಏಕೆಂದರೆ ಸರ್ಕಾರದಲ್ಲಿರುವ ಒಂದು ವರ್ಗವೇ ದೊಂಬಿ ನಡೆಯಲು ಅವಕಾಶ ನೀಡಿವೆ ಎಂದು ಅವರು ಆರೋಪಿಸಿದರು. ಸಂಘಟಿತ ಶಕ್ತಿಗಳು ಈ ದಾಳಿಗಳನ್ನು ನಡೆಸಿವೆ. ಘಟನೆಗಳ ಸಂಬಂಧ ಬಂಧಿತರಾಗಿರುವವರ ರಾಜಕೀಯ ಗುರುತು ಪತ್ತೆಯಾಗಿದೆ ಎಂದು ಕಬೀರ್ ನುಡಿದರು.
ಹೀಗಿದ್ದರೂ ಘಟನಾ ಸ್ಥಳದಲ್ಲಿ ಹಾಜರಿದ್ದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಪ್ರಸಾರ ಸಲಹೆಗಾರರಾದ ಸಯ್ಯದಾ ಹಸನ್ ಈ ದೊಂಬಿ ದಾಳಿ ನಡೆಸಿದವರು ನಮ ಸಾಮಾನ್ಯ ವಿರೋಧಿಗಳಾಗಿದ್ದು, ಅವರು ನನ್ನ ಮನೆಯ ಮುಂಭಾಗ ಬಾಂಬ್‌ಗಳನ್ನು ಎಸೆಯುವ ಮೂಲ ನನ್ನನ್ನೂ ದಿಗಿಲುಗೊಳಿಸಲು ಯತ್ನಿಸಿದ್ದರು ಎಂದು ಹೇಳಿದ್ದಾರೆ.
ಈ ಸಾಮಾನ್ಯ ವಿರೋಧಿಗಳ ಮಾಧುಮ ಮತ್ತು ಸರ್ಕಾರ ಮರು ಹೋರಾಟ ನಡೆಸಬೇಕಾಗಿದೆ. ಮತ್ತೊಬ್ಬರನ್ನು ಪ್ರತಿಸ್ಪರ್ಧಿ ಎಂದು ಭಾವಿಸಿರುವುದರಿಂದ ಯಾವುದೇ ಫಲವಿಲ್ಲ ಎಂದು ಹಸನ್ ತಿಳಿಸಿದರು.
ಫೆಬ್ರವರಿ 12ರಂದು ನಿಗದಿಯಾಗಿರುವ ಸಾರ್ವತ್ರಿಕ ಚುಣಾವಣೆಗಳನ್ನು ಹಳಿತಪ್ಪಿಸಲು ಸರ್ಕಾರದಲ್ಲಿರುವ ಒಂದು ವರ್ಗವೇ ಈ ಹತ್ಯೆಯ ಸಂಚು ರೂಪಿಸಿದೆ ಎಂದು ಹಾದಿ ಅವರ ಸಹೋದರ ಓವಾರ್ ಹಾದಿ ಆರೋಪಿಸಿದ ಮೂರು ದಿನಗಳ ಬಳಿಕ ಕಬೀರ್ ಅವರು ಈ ಹೇಳಿಕೆ ನೀಡಿದ್ದಾರೆ.
