Wednesday, December 3, 2025
Homeಅಂತಾರಾಷ್ಟ್ರೀಯಆಸ್ಟ್ರೇಲಿಯಾದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್..!

ಆಸ್ಟ್ರೇಲಿಯಾದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್..!

Social media ban: Australia won't be intimidated by tech firms

ಪರ್ತ್‌,ಡಿ.2- ಆಸ್ಟ್ರೇಲಿಯಾದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲು ಸರ್ಕಾರ ಮುಂದಾಗಿದ್ದು , ಜಾಗತಿಕವಾಗಿ ಸಂಚಲನ ಸೃಷ್ಠಿಸಿದೆ. ಇದಕ್ಕೆ ಒಪ್ಪದ ತಂತ್ರಜ್ಞಾನ ಕಂಪನಿಗಳನ್ನು ನಾವು ಬೆದರುವುದಿಲ್ಲ ಆದರೆ ಅಮೆರಿಕ ತೆಗೆದುಕೊಳ್ಳುವ
ನಿರ್ಧಾರ ಎದುರಿಸಲು ಸಿದ್ಧ ಎಂದು ಆಸ್ಟ್ರೇಲಿಯಾದ ಸಂವಹನ ಸಚಿವೆ ಅನಿಕಾ ವೆಲ್ಸ್ ಹೇಳಿದ್ದಾರೆ.

ಡಿಸೆಂಬರ್‌ 10 ರಿಂದ, ಸ್ನ್ಯಾಪ್‌ಚಾಟ್‌‍, ಮೆಟಾ, ಟಿಕ್‌ಟಾಕ್‌‍ ಮತ್ತು ಯೂಟ್ಯೂಬ್‌ ಸೇರಿದಂತೆ ಹತ್ತು ಸಾಮಾಜಿಕ ಮಾಧ್ಯಮಗಳನ್ನು 16 ವರ್ಷದೊಳಗಿನ ಮಕ್ಕಳು ಬಳಸುವುದನ್ನು ತಡೆಯಲು ಸರ್ಕಾರ ನಿರ್ಧಾರದಂತೆ ಸಮಂಜಸ ಕ್ರಮಗಳು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ನಾವು ಪೋಷಕರ ಪರವಾಗಿ ದೃಢವಾಗಿ ನಿಲ್ಲುತ್ತೇವೆ ಮತ್ತು ವೇದಿಕೆಗಳಲ್ಲಿ ಅಲ್ಲ ಎಂದು ವೆಲ್ಸ್ ಹೇಳಿದರು.

ಯುವಜನರನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿಡಲು ದಿಟ್ಟ ಕ್ರಮ ಅಗತ್ಯವಿದೆ ಎಂದು ಮೆಟಾ ಸೇರಿದಂತೆ ಕಂಪನಿಗಳು ಒಪ್ಪಿಕೊಂಡಿವೆ, ಆದರೆ ನಿಷೇಧವು ಉತ್ತರ ಎಂದು ಭಾವಿಸುವುದಿಲ್ಲ ಎಂದಿದೆ.

ಮಕ್ಕಳು ತಮ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಲು15 ರಿಂದ 20 ವರ್ಷ ನಡುವಿನ ಸಮಯ ಅತಿ ಮಖ್ಯ, ಸಂಶೋಧನೆಯು ಸಾಮಾಜಿಕ ಮಾಧ್ಯಮ ವೇದಿಕೆಗಳು ಹಾನಿಯನ್ನುಂಟು ಮಾಡುತ್ತವೆ ಎಂದು ಸೂಚಿಸುತ್ತಿರುವುದರಿಂದ.ನಾವು ಮಾಡುತ್ತಿರುವ ಕೆಲಸದ ಪ್ರಸ್ತುತ ಅವಶ್ಯಕ ಎಂದು ನಾನು ಅರ್ಥಮಾಡಿಕೊಂಡಿರುವುದರಿಂದ ನಾನು ದೊಡ್ಡ ತಂತ್ರಜ್ಞಾನದಿಂದ ಬೆದರುವುದಿಲ್ಲ ಎಂದು ಅವರು ಹೇಳಿದರು,

ಆನ್‌ಲೈನ್‌ನಲ್ಲಿ ಬಳಲುತ್ತಿರುವ ಮಕ್ಕಳ ಪೋಷಕರೊಂದಿಗೆ ಮಾತುಗಳು ನನ್ನನ್ನು ಬಾದಿಸಿದೆ ಮತ್ತು ಕಳವಳ ಮುಡಿಸಿದೆ.ಅನೇಕ ದೇಶಗಳು ನಮ ನಿರ್ಧಾವನ್ನು ಬೆಂಬಲಿಸಿದ್ದಾರೆ. ನಾವು ಮೊದಲಿಗರಾಗಲು ಸಂತೋಷಪಡುತ್ತೇವೆ, ಹೆಮ್ಮೆಪಡುತ್ತೇವೆ ಮತ್ತು ಈ ಕೆಲಸಗಳನ್ನು ಮಾಡಲು ಬಯಸುವ ಯಾವುದೇ ಇತರ ನ್ಯಾಯವ್ಯಪ್ತಿಗೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದು ಸಚಿವೆ ತಿಳಿಸಿದ್ದಾರೆ.

ಆದಾಗ್ಯೂ, ಯುಎಸ್‌‍ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌,ಯುಎಸ್‌‍ ಟೆಕ್‌ ಕಂಪನಿಗಳ ಮೇಲೆ ದಾಳಿ ಮಾಡುವ ಯಾವುದೇ ದೇಶವನ್ನು ಎದುರಿಸುವುದಾಗಿ ಹೇಳಿದ್ದಾರೆ.

RELATED ARTICLES

Latest News