Saturday, October 19, 2024
Homeಇದೀಗ ಬಂದ ಸುದ್ದಿಅರ್ಚಕರ ಬೇಡಿಕೆ ಈಡೇರಿಸಲು ಪ್ರಮಾಣಿಕ ಪ್ರಯತ್ನ : ಸಚಿವ ರಾಮಲಿಂಗರೆಡ್ಡಿ

ಅರ್ಚಕರ ಬೇಡಿಕೆ ಈಡೇರಿಸಲು ಪ್ರಮಾಣಿಕ ಪ್ರಯತ್ನ : ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು : ಕಳೆದ ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಅರ್ಚಕರುಗಳ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಿ ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದೆಂದು ಧಾರ್ಮಿಕ ದತ್ತಿ ಹಾಗೂ ಮುಜರಾತಿ ಸಚಿವ ರಾಮಲಿಂಗರೆಡ್ಡಿ ಅವರು ಭರವಸೆ ನೀಡಿದ್ದಾರೆ.

ಅರ್ಚಕರ ಮಕ್ಕಳಿಗೆ ವಿಧ್ಯಾರ್ಥಿ ವೇತನ, ಮೃತ , ಮರಣ , ಹೊಂದಿರುವ , ಅರ್ಚಕರ ಕುಟುಂಬಕ್ಕೆ 2 ಲಕ್ಷ , ಮರಣ ಉಪದಾನ,ಕಾಶಿ ಯಾತ್ರೆ, ಚಾರ್ ಧಾಮ್ ಯಾತ್ರಿಕರಿಗೆ, ಸಹಾಯ ಧನ, ನೇರ ಜಮಾ , ತಸ್ತಿಕ ಮತ್ತು ವರ್ಷಸಾನ , ಅರ್ಚಕರ ಖಾತೆಗೆ ನೇರವಾಗಿ ಜಮಾ , ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿ ವರ್ಗದ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ದಿಗಾಗಿ ಇನ್ನು ಹೆಚ್ಚಿನ ಅನುದಾನವನ್ನು ವೆಚ್ಚ ಮಾಡುವ ಉದ್ದೇಶದಿಂದ ಸಾಮಾನ್ಯ ಸಂಗ್ರಹಣಾ ನಿದಿ ಮೊತ್ತವನ್ನು ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ಮಾನ್ಯ ರಾಜ್ಯಪಾಲರ ಅನುಮೋದನೆ ಆಗಬೇಕಿದ್ದು ಅನುಮೋದನೆ ನಂತರ ಹೆಚ್ಚಾಗಿ ಸಂಗ್ರಹವಾಗುವ ಸಾಮಾನ್ಯ ಸಂಗ್ರಹಣಾ ನಿದಿಯಲ್ಲಿ ಪ್ರತಿ ವರ್ಷ 100 ದೇವಾಲಯಗಳಂತೆ ಸಿ ವರ್ಗದ ದೇವಾಲಯಗಳ ಜೀರ್ಣೋದ್ಧಾರಕ್ಕೆ, ವಿದ್ಯಾರ್ಥಿ ವೇತನಕ್ಕೆ ಮರಣ ಉಪದಾನಕ್ಕೆ ಹಾಗೂ ಅರ್ಚಕರುಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ವಿನಿಯೋಗಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ದೇವಾಲಯದ ನೌಕರರ ವೇತನ ನಿತ್ಯ ಕಟ್ಲೆ ಜಾತ್ರೆ ಹಾಗೂ ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಉಪಯೋಗಿಸಿ ಉಳಿತಾಯವಾಗುವ ಹಣವನ್ನು ಆಯಾಯ ದೇವಾಲಯದ ಹೆಸರಿನಲ್ಲಿ ಠೇವಣಿ ಇರಿಸಲಾಗುವುದು ಈ ಹಣವನ್ನು ಇತರೆ ದೇವಾಲಯಗಳಿಗೆ ಹಾಗೂ ಸರ್ಕಾರದ ಇತರೆ ಯೋಜನೆಗಳಿಗೆ ಅಥವಾ ಇತರೆ ಧರ್ಮಗಳಿಗೆ ಉಪಯೋಗಿಸಲು ಕಾನೂನಿನಲ್ಲಿ ಹಿಂದೆಯೂ ಅವಕಾಶವಿರಲಿಲ್ಲ ಈಗಲೂ ಅವಕಾಶವಿರುವುದಿಲ್ಲ ಎಂದು ಸೊಷ್ಟಪಡಿಸಿದರು.

ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಸಿ ವರ್ಗದ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ದಿಗೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಪ್ರಾಯೋಗಿಕವಾಗಿ ವಿದ್ಯಾರ್ಥಿ ವೇತನ ಹಾಗೂ ಮರಣ ಉಪದಾನವನ್ನು ಪಾವತಿಸಲಾಗಿದೆ. ಈ ಬಗ್ಗೆ ಹೆಚ್ಚು ಪ್ರಚಾರ ನೀಡಿ ಅರ್ಹ ಇರುವ ರಾಜ್ಯದ ಎಲ್ಲಾ ಅರ್ಚಕರು ಈ ಸೌಲಭ್ಯವನ್ನು ಪ್ರತಿ ವರ್ಷ ಉಪಯೋಗಿಸಿಕೊಳ್ಳುವಂತೆ ಮನವಿ ಮಾಡಿದರು.

ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಡಾ|| ಎಂ.ವಿ.ವೆಂಕಟೇಶ್ ಮಾತಾನಾಡಿ, ರಾಜ್ಯದಲ್ಲಿ 34564 ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳಿದ್ದು ಇದರಲ್ಲಿ 34166 ಸಿ ವರ್ಗದ ದೇವಾಲಯಗಳಿದ್ದು, ಸಾಮಾನ್ಯ ಸಂಗ್ರಹಣಾ ನಿದಿಯನ್ನು ಈ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ದಿಗೆ ವಿನಿಯೋಗಿಸಲು ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ತೀರ್ಮಾನಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಸಲಹೆ ಮಾಡಿದರು.

ರಾಜ್ಯದ ಭಕ್ತಾಧಿಗಳ ಅನುಕೂಲಕ್ಕಾಗಿ ಭಾರತ್ ಗೌರವ್ ಯೋಜನೆಯಡಿ ಕಾಶಿ ಯಾತ್ರೆ, ದಕ್ಷಿಣ ಭಾರತ್ ಯಾತ್ರೆ ಮತ್ತು ದ್ವಾರಕಾ ಯಾತ್ರೆಗಳನ್ನು ಯಶಸ್ಸಿಯಾಗಿ ಕೈಗೊಳ್ಳಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿರುತ್ತದೆ.

ಹಾಗೂ ಭಕ್ತಾಧಿಗಳ ಬೇಡಿಕೆ ಅನುಸರಿಸಿ ಮತ್ತಷ್ಟು ಕ್ಷೇತ್ರಗಳಿಗೆ ಯಾತ್ರೆಗಳನ್ನು ಯೋಜಿಸಲು ಉದ್ದೇಶಿಸಲಾಗಿದೆ. ಕಾಶಿ ಯಾತ್ರೆ, ಮಾನಸ ಸರೋವರ ಯಾತ್ರೆ ಮತ್ತು ಚಾರ್ ಧಾಮಾ ಯಾತ್ರೆಗಳಿಗೆ ಸರ್ಕಾರ ವತಿಯಿಂದ ಸಹಾಯ ಧನವನ್ನು ವಿತರಿಸಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಅರ್ಹರು ಅರ್ಜಿಗಳನ್ನು ಸಲ್ಲಿಸಲು ಕೋರಿದರು ಹಾಗೂ ತಸ್ತೀಕ್ /ವರ್ಷಾಸನ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ (ಆಃಖಿ) ಪಾವತಿಸಲು ಸೇವಾ ಸಿಂದು ಇಲಾಖೆ ಸಹಕಾರದೊಂದಿಗೆ ಆನ್ ಲೈನ್ ಪೋರ್ಟಲ್ ಅಭಿವೃದ್ದಿ ಪಡಿಸಲಾಗಿದ್ದು ಮುಂದಿನ ದಿನಗಳಲ್ಲಿ ತಸ್ತೀಕ್ /ವರ್ಷಾಸನ ಹಣವನ್ನು ಅರ್ಚಕರ ಖಾತೆಗೆ ನೇರವಾಗಿ ಪಾವತಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ , ಕೆ.ಎಂ.ನಾಗರಾಜು, ಮಲ್ಲಿಕಾ ಪ್ರಶಾಂತ ಪಕ್ಕಳ ಹಾಗೂ ವಿನಾಯಕ್ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು, ಶ್ರೀವತ್ಸ, ವೆಂಕಟಚಲಯ್ಯ ಮತ್ತು ಕೆ.ಎಸ್. ಎನ್ ದೀಕ್ಷಿತ್ ರವರು ಉಪಸ್ಥಿತರಿದ್ದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ಸೇರಿದ 33 ವಿದ್ಯಾರ್ಥಿಗಳಿಗೆ ರೂ.4,88,000/-ಗಳ ವಿದ್ಯಾರ್ಥಿ ವೇತನವನ್ನು ಹಾಗೂ ಇಬ್ಬರು ಅರ್ಚಕರ ಕುಟುಂಬದವರಿಗೆ ತಲಾ ರೂ.2.00ಲಕ್ಷಗಳಂತೆ ಒಟ್ಟು ರೂ.4.00ಲಕ್ಷ ರೂಗಳ ಮರಣ ಉಪದಾನವನ್ನು ಮಾನ್ಯ ಸಚಿವರು ವಿತರಿಸಿದರು ಹಾಗೂ ಇದಲ್ಲದೆ ರಾಜ್ಯದ ಒಟ್ಟು 7 ಜಿಲ್ಲೆಗಳ 158 ವಿದ್ಯಾರ್ಥಿಗಳಿಗೆ ರೂ.20,09,000/-ಗಳ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದ್ದು, ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ವಿತರಿಸಲು ಆದೇಶಿಸಲಾಯಿತು.

RELATED ARTICLES

Latest News