ಮುಂಬೈ, ಡಿ.1 (ಪಿಟಿಐ) – ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸತಾರಾ ಜಿಲ್ಲೆಯ ತಮ ಸ್ವಗ್ರಾಮದಲ್ಲಿ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದು, ಇಂದು ಸಂಜೆ ಮುಂಬೈಗೆ ಮರಳಲಿದ್ದಾರೆ ಎಂದು ಸಹವರ್ತಿಯೊಬ್ಬರು ತಿಳಿಸಿದ್ದಾರೆ. ಶನಿವಾರ ಶಿಂಧೆಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ ವೈದ್ಯರ ತಂಡ ತಪಾಸಣೆ ನಡೆಸಿತು.
ಹೊಸ ರಾಜ್ಯ ಸರ್ಕಾರ ರಚನೆಯಾಗುತ್ತಿರುವ ರೀತಿಯಿಂದ ಅವರು ಸಂತೋಷವಾಗಿಲ್ಲ ಎಂಬ ಊಹಾಪೋಹಗಳ ನಡುವೆ ಶಿವಸೇನಾ ನಾಯಕ ಸತಾರಾ ಜಿಲ್ಲೆಯ ತಮ ಗ್ರಾಮವಾದ ಡೇರ್‌ಗೆ ತೆರಳಿದರು.ಶಿಂಧೆ ಅವರಿಗೆ ಜ್ವರ ಮತ್ತು ಗಂಟಲಿನ ಸೋಂಕು ಇತ್ತು ಎಂದು ಅವರ ಕುಟುಂಬ ವೈದ್ಯ ಆರ್ ಎಂ ಪಾರ್ಟೆ ಸುದ್ದಿ ವಾಹಿನಿಗಳಿಗೆ ತಿಳಿಸಿದ್ದಾರೆ.
ಅವರಿಗೆ ಔಷಧಿಗಳನ್ನು ನೀಡಲಾಗಿದೆ ಮತ್ತು ಐ್ಖ (ಔಷಧಿಗಾಗಿ ಇಂಟ್ರಾ-ವೆನಸ್ ಥೆರಪಿ) ಹಾಕಲಾಗಿದೆ. ಅವರು ಎರಡು ದಿನಗಳಲ್ಲಿ ಉತ್ತಮವಾಗುತ್ತಾರೆ. ಅವರು ಇಂದು ಸಂಜೆ ಮುಂಬೈಗೆ ತೆರಳುತ್ತಿದ್ದಾರೆ ಎಂದು ಡಾ ಪಾರ್ಟೆ ಹೇಳಿದರು.ಶಿಂಧೆ ಚೇತರಿಸಿಕೊಳ್ಳುತ್ತಿದ್ದು, ಸಂಜೆ ಮುಂಬೈಗೆ ಮರಳಲಿದ್ದಾರೆ ಎಂದು ಸಹವರ್ತಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಹೊಸ ಮಹಾಯುತಿ ಸರ್ಕಾರದ ಪ್ರಮಾಣ ವಚನವು ಡಿಸೆಂಬರ್ 5 ರಂದು ಸಂಜೆ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬವಾಂಕುಲೆ ಶನಿವಾರ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಮುಖ್ಯಮಂತ್ರಿ ಯಾರೆಂಬುದರ ಬಗ್ಗೆ ಇನ್ನೂ ಯಾವುದೇ ಘೋಷಣೆಯಾಗದಿದ್ದರೂ, ಕಳೆದ ಏಕನಾಥ್ ಶಿಂಧೆ ನೇತತ್ವದ ಸರ್ಕಾರದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಮತ್ತು ಉಪ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಅವರು ಈ ಹ್ದುೆಗೆ ಮುಂಚೂಣಿಯಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಭಾರತೀಯ ಜನತಾ ಪಕ್ಷ (ಬಿಜೆಪಿ), ಶಿವಸೇನೆ ಮತ್ತು ಅಜಿತ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮಹಾಯುತಿ ಮೈತ್ರಿಕೂಟವು ನವೆಂಬರ್ 23 ರಂದು ಪ್ರಕಟವಾದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ವಿಜಯದೊಂದಿಗೆ ಅಧಿಕಾರವನ್ನು ಉಳಿಸಿಕೊಂಡಿದೆ.