Friday, November 22, 2024
Homeರಾಷ್ಟ್ರೀಯ | Nationalಮಕ್ಕಳ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ವೃದ್ಧ ದಂಪತಿ

ಮಕ್ಕಳ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ವೃದ್ಧ ದಂಪತಿ

Elderly couple in Rajasthan die by suicide over 'children's harassment'

ಜೈಪುರ, ಅ.11- ತಾವು ಜನ್ಮ ನೀಡಿದ ಮಕ್ಕಳೇ ನೀಡಿದ ಕಿರುಕುಳ ಸಹಿಸಲಾರದೆ ವೃದ್ಧ ದಂಪತಿ ನೀರಿನ ಟ್ಯಾಂಕ್‌ಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು ಹಜಾರಿರಾಮ್ ಬಿಷ್ಣೋಯ್ ಮತ್ತು ಪತ್ನಿ ಚವಾಲಿ ದೇವಿ ಎಂದು ಗುರುತಿಸಲಾಗಿದೆ. ರಾಜಸ್ಥಾನದ ನಾಗೌರ್‌ನ ಕರ್ನಿ ಕಾಲೋನಿಯಲ್ಲಿ ಇಂತಹ ಘಟನೆ ನಡೆದಿದ್ದು ಸ್ಥಳೀಯರು ಜನ್ಮ ನೀಡಿದವರಿಗೆ ಹಿಂಸೆ ನೀಡಿದ ಮಕ್ಕಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಕರ್ನಿ ಕಾಲೋನಿಯಲ್ಲಿರುವ ತಮ್ಮ ಮನೆಯೊಳಗಿನ ನೀರಿನ ಟ್ಯಾಂಕ್‌ನಲ್ಲಿ ವೃದ್ಧ ದಂಪತಿ ಶವವಾಗಿ ಪತ್ತೆಯಾಗಿದ್ದರೆ ಎಂದು ಪೊಲೀಸರು ತಿಳಿಸಿದ್ದಾರೆ.ಎರಡು ದಿನಗಳಿಂದ ದಂಪತಿ ಕಾಣದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ದಂಪತಿಯ ಮಗನಿಗೆ ಮಾಹಿತಿ ನೀಡಿದ್ದಾರೆ.

ನಂತರ ಮಗ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟ್ಯಾಂಕ್‌ನ ಮುಚ್ಚಳ ತೆರೆದಿದ್ದು, ದಂಪತಿಯ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಪುತ್ರರು ಮತ್ತು ಸೊಸೆಯರಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ದಂಪತಿ ಆತ್ಮಹತ್ಯೆ ಪತ್ರವನ್ನು ಮನೆಯ ಗೋಡೆಗಳ ಮೇಲೆ ಅಂಟಿಸಿದ್ದರು. ಮಕ್ಕಳು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ, ಪೊಲೀಸರ ಬಳಿ ಹೋದರೆ ರಾತ್ರಿ ಮಲಗಿದ್ದಾಗ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಬರೆದಿದ್ದಾರೆ.

ಮಕ್ಕಳು, ಸೊಸೆಯಂದಿರು ಮತ್ತು ಸಂಬಂಧಿಕರು ಅವರ ಆಸ್ತಿ ಮತ್ತು ಕಾರನ್ನು ಸಹ ಸ್ವಾಧೀನಪಡಿಸಿಕೊಂಡಿದ್ದರು. ತಮ್ಮ ಪೋಷಕರಿಂದ ಎಲ್ಲವನ್ನೂ ತೆಗೆದುಕೊಂಡ ನಂತರ, ಮಕ್ಕಳು ಅವರಿಗೆ ಆಹಾರವನ್ನು ನಿರಾಕರಿಸಿದರು ಮತ್ತು ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ವರದಿಯಾಗಿದೆ.

ಶವಗಳನ್ನು ತೊಟ್ಟಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನೀಶ್ ದೇವ್ ತಿಳಿಸಿದ್ದಾರೆ . ಪುರುಷನ ಶವದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಇಂದು ಬೆಳಗ್ಗೆ ದಂಪತಿ ಶವ ಪರೀಕ್ಷೆ ನಡೆಯಲಿದೆ ಎಂದು ಮನೀಶ್ ದೇವ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

RELATED ARTICLES

Latest News