ನವದೆಹಲಿ,ಸೆ.24- ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕುವ ಭಾರತೀಯ ಚುನಾವಣಾ ಆಯೋಗ ಹೊಸ ತಾಂತ್ರಿಕ ವ್ಯವಸ್ಥೆಯನ್ನು ಪರಿಚಯಿಸಿದೆ.
ಹೆಚ್ಚುತ್ತಿರುವ ದುರುಪಯೋಗವನ್ನು ತಡೆಗಟ್ಟಿ ಮತದಾರರಲ್ಲಿ ಅನುಮಾನವನ್ನು ನಿವಾರಿಸಿ ಹೆಚ್ಚು ಪಾರದರ್ಶಕತೆ ಉಂಟು ಮಾಡುವ ಸದುದ್ದೇಶದಿಂದ ಚುನಾವಣಾ ಆಯೋಗ ದುರುಪಯೋಗ ತಡೆಗಟ್ಟಲು ಇಸಿಐಎನ್ಇಟಿ ಪೋರ್ಟಲ್ ಮತ್ತು ಅರ್ಜಿಗಳಲ್ಲಿ ಇ-ಸೈನ್ ಎಂಬ ವಿನೂತನ ತಂತ್ರಜ್ಞಾನವನ್ನು ಪರಿಚಯಿಸಿದೆ.
ಇದರಿಂದಾಗಿ ಬರುವ ದಿನಗಳಲ್ಲಿ ಮತದಾರರ ಪಟ್ಟಿಯಿಂದ ಯಾರೊಬ್ಬರು ಅಷ್ಟು ಸುಲಭವಾಗಿ ತಮ ಹೆಸರುಗಳನ್ನು ತೆಗೆದು ಹಾಕುವುದಾಗಲಿ ಇಲ್ಲವೇ ಸೇರ್ಪಡೆ ಮಾಡಲು ಅವಕಾಶ ಇರುವುದಿಲ್ಲ.
ಹೊಸದಾಗಿ ಮತದಾರರಪಟ್ಟಿಗೆ ಸೇರ್ಪಡೆಯಾಗುವವರು ತಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸುವವರು ತಮ ಆಧಾರ್ಲಿಂಕ್ ಮಾಡಲಾದ ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ತಮ ಗುರುತನ್ನು ಬಳಸಬೇಕಾಗುತ್ತದೆ.
ಈ ಹಿಂದೆ ಅರ್ಜಿದಾರರು ಯಾವುದೇ ಪರಿಶೀಲನೆ ಇಲ್ಲದೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿತ್ತು. ಇದು ಮತದಾರರ ಗುರುತಿನಚೀಟಿಯ ದುರುಪಯೋಗವಾಗುವ ಸಾಧ್ಯತೆ ಇತ್ತು. ಇದನ್ನು ಮನಗಂಡೇ ಚುನಾವಣಾ ಆಯೋಗ ಇ-ಸೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಸಾಮಾನ್ಯವಾಗಿ ಅರ್ಜಿದಾರರು ಚುನಾವಣಾ ಆಯೋಗದ ಅಪ್ಲಿಕೇಷನ್ಗಳು ಮತ್ತು ಪೋರ್ಟಲ್ನಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಫೋಟೋ ಗುರುತಿನ ಚೀಟಿ(ಎಪಿಕ್) ಸಂಖ್ಯೆಯೊಂದಿಗೆ ಫೋನ್ ಸಂಖ್ಯೆಯನ್ನು ಲಿಂಕ್ ಮಾಡಿ ಅರ್ಜಿ ಹಾಕಿದ್ದರೆ ಸಾಕಿತ್ತು.
ಇದನ್ನು ತಡೆಗಟ್ಟುವ ಉದ್ದೇಶದಿಂದಲೇ ಚುನಾವಣಾ ಆಯೋಗ ವಿನೂತನವಾದ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ದುರುಪಯೋಗವನ್ನು ತಡೆಗಟ್ಟಲು ಸಾಧ್ಯತೆ ಇದೆ ಎಂದು ಆಯೋಗ ಹೇಳಿಕೊಂಡಿದೆ.
ಇ-ಸೈನ್ ಹೇಗೆ ಕೆಲಸ ಮಾಡುತ್ತದೆ?:
ಅರ್ಜಿದಾರರು ಫಾರ್ಮ್ 6 (ಹೊಸ ಮತದಾರರ ನೋಂದಣಿಗಾಗಿ), ಅಥವಾ ಫಾರ್ಮ್ 7 (ಅಸ್ತಿತ್ವದಲ್ಲಿರುವ ಪಟ್ಟಿಗಳಲ್ಲಿ ಹೆಸರನ್ನು ಸೇರಿಸಲು/ಅಳಿಸುವುದಕ್ಕೆ ಆಕ್ಷೇಪಣೆ ಸಲ್ಲಿಸಲು) ಅಥವಾ ಫಾರ್ಮ್ 8 (ನಮೂದುಗಳ ತಿದ್ದುಪಡಿಗಾಗಿ) ಅನ್ನು ಭರ್ತಿ ಮಾಡುವ ಮೂಲಕ ಈಗ ಇ-ಸೈನ್ ಅಗತ್ಯವನ್ನು ತೆರವುಗೊಳಿಸಬೇಕಾಗುತ್ತದೆ.
ಇದರರ್ಥ ಅರ್ಜಿದಾರರು ತಮ ಅರ್ಜಿಗಾಗಿ ಬಳಸುತ್ತಿರುವ ಮತದಾರರ ಕಾರ್ಡ್ನಲ್ಲಿರುವ ಹೆಸರು ಅವರ ಆಧಾರ್ನಲ್ಲಿರುವ ಹೆಸರಿಗೆ ಸಮನಾಗಿದೆ ಮತ್ತು ಅವರು ಬಳಸುತ್ತಿರುವ ಮೊಬೈಲ್ ಸಂಖ್ಯೆಯು ಆಧಾರ್ಗೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ಪೋರ್ಟಲ್ ಎಚ್ಚರಿಸುತ್ತದೆ.
ಇದು ಯಾರ ಹೆಸರನ್ನು ಅಳಿಸಲು ಅಥವಾ ಆಕ್ಷೇಪಿಸಲು ಬಯಸುತ್ತದೋ ಅವರ ಎಲ್ಲಾ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವಿದೆ (ಕಾರಣಗಳು ಸಾವು, ಸ್ಥಳಾಂತರ, ಭಾರತೀಯ ನಾಗರಿಕನಲ್ಲದ ಕಾರಣ ಅನರ್ಹತೆ ಅಥವಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬಹುದು).
ಅರ್ಜಿದಾರರು ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಅವರನ್ನು ಕೇಂದ್ರ ಎಲೆಕ್ಟ್ರಾನಿಕ್್ಸ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೆಂಟರ್ ಫಾರ್ ಡೆವಲಪೆಂಟ್ ಆಫ್ ಅಡ್ವಾನ್್ಸ್ಡ ಕಂಪ್ಯೂಟಿಂಗ್(ಸಿಎಡಿಸಿ) ಆಯೋಜಿಸಿರುವ ಬಾಹ್ಯ ಇ-ಸೈನ್ ಪೋರ್ಟಲ್ಗೆ ಕರೆದೊಯ್ಯಲಾಗುತ್ತದೆ. ಅಆಂಅ ಪೋರ್ಟಲ್ನಲ್ಲಿ, ಅರ್ಜಿದಾರರು ತಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ನಂತರ ಆಧಾರ್ ಔಖಿ ಅನ್ನು ರಚಿಸಬೇಕು, ಅಲ್ಲಿ ಆ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗೆ ಔಖಿ ಕಳುಹಿಸಲಾಗುತ್ತದೆ.
ನಂತರ ಅರ್ಜಿದಾರರು ಆಧಾರ್ ಆಧಾರಿತ ದೃಢೀಕರಣಕ್ಕೆ ಒಪ್ಪಿಗೆ ನೀಡಬೇಕು ಮತ್ತು ಪರಿಶೀಲನೆಯನ್ನು ಪೂರ್ಣಗೊಳಿಸಬೇಕು. ಅದು ಪೂರ್ಣಗೊಂಡ ನಂತರವೇ ಅರ್ಜಿದಾರರನ್ನು ಫಾರ್ಮ್ ಅನ್ನು ಸಲ್ಲಿಸಲು ಇಸಿಐಎನ್ಇಟಿ ಪೋರ್ಟಲ್ಗೆ ಮರುನಿರ್ದೇಶಿಸಲಾಗುತ್ತದೆ.