Monday, November 24, 2025
Homeಇದೀಗ ಬಂದ ಸುದ್ದಿಪಶ್ಚಿಮ ಬಂಗಾಳದಲ್ಲಿ SIRಗೆ ಚುನಾವಣಾ ಆಯೋಗ ಸಿದ್ಧತೆ

ಪಶ್ಚಿಮ ಬಂಗಾಳದಲ್ಲಿ SIRಗೆ ಚುನಾವಣಾ ಆಯೋಗ ಸಿದ್ಧತೆ

Election Commission prepares for SIR in West Bengal

ಕೋಲ್ಕತ್ತಾ,ನ.16- ಮುಂದಿನ 5 ತಿಂಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳದ ಚುನಾವಣೆಗೆ ಸಿದ್ದತೆ ಆರಂಭಗೊಂಡಿದೆ. ಮುಖ್ಯ ಚುನಾವಣಾ ಅಧಿಕಾರಿ ಮನೋಜ್‌ ಕುಮಾರ್‌ ಅಗರ್ವಾಲ್‌ ಅವರು ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ವಿಶೇಷ ಮತಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಕ್ಕೆ ಸೂಚನೆ ನೀಡಿದ್ದು ಜನರಿಗೆ ನೀಡಿರುವ ಮತದಾನ ಫಾರ್ಮ್‌ಗಳನ್ನು ಈ ತಿಂಗಳೊಳಗೆ ಸಂಗ್ರಹಹಿಸಲು ನಿರ್ದೇಶನ ನೀಡಿದ್ದಾರೆ.

ಜಿಲ್ಲಾ ಅಧಿಕಾರಿಗಳೊಂದಿಗೆ ನಡೆದ ವೀಡಿಯೊ ಸಮೇಳನದಲ್ಲಿ ಈ ಸೂಚನೆಗಳನ್ನು ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನವೆಂಬರ್‌ ಅಂತ್ಯದೊಳಗೆ ಜಿಲ್ಲಾ ಅಧಿಕಾರಿಗಳಿಗೆ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ರಾಜ್ಯದಲ್ಲಿ 7.55 ಕೋಟಿಗೂ ಹೆಚ್ಚು ಎಣಿಕೆ ಫಾರ್ಮ್‌ಗಳನ್ನು (ಶೇಕಡಾ 98.5) ವಿತರಿಸಲಾಗಿದೆ ಎಂದು ಅವರು ಹೇಳಿದರು.ಸಭೆಯಲ್ಲಿ, ಫಾರ್ಮ್‌ಗಳ ವಿತರಣೆ ಏಕೆ ಇನ್ನೂ ಶೇಕಡಾ 100 ರಷ್ಟು ತಲುಪಿಲ್ಲ ಎಂದು ಅಗರ್ವಾಲ್‌ ಪ್ರಶ್ನಿಸಿದರು. ಯಾವುದೇ ಲೋಪ ಸಹಿಸಲಾಗುವುದಿಲ್ಲ ಎಂದು ಜಿಲ್ಲಾ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದಲ್ಲದೆ ಸ್ಥಳೀಯ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಅವರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಚುನಾವಣಾ ಆಯೋಗವು ಫಾರ್ಮ್‌ಗಳ ಸಂಗ್ರಹವನ್ನು ಯಾವುದೇ ದುಷ್ಕೃತ್ಯವಿಲ್ಲದೆ ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಸಬೇಕು ಎಂದು ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆಯಲ್ಲಿ ಮತದಾರರೊಂದಿಗೆ ಅನುಚಿತವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.ಇದರ ನಡುವೆ ಸಿಬ್ಬಂದಿಗಳ ಬಿಎಲ್‌ಒಗಳ ಜಂಟಿ ವೇದಿಕೆಯು ಸಿಇಒಗೆ ಅವರ ಸುರಕ್ಷತೆಯ ಬಗ್ಗೆ ಲಿಖಿತ ದೂರನ್ನು ಸಲ್ಲಿಸಿದೆ.

RELATED ARTICLES
- Advertisment -

Latest News