Tuesday, February 25, 2025
Homeರಾಜ್ಯಅನ್ಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಆನೆಗಳ ಸಾವು ಕಡಿಮೆ

ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಆನೆಗಳ ಸಾವು ಕಡಿಮೆ

Elephant Deaths in Karnataka are less compared to other states

ಬೆಂಗಳೂರು, ಫೆ.14: ಆನೆಗಳ ಸಂಖ್ಯೆ ಮತ್ತು ಆನೆಗಳಿಂದ ಸಂಭವಿಸುವ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ, ಅಸ್ಸಾಂ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ಅತ್ಯಲ್ಪ ಎಂದು ಅರಣ್ಯ ಸಚಿವರಿಗಿಂದು ತಿಳಿಸಲಾಯಿತು.

ಫೆ.13ರಂದು ಒಂದೆ ದಿನ ಆನೆಗಳಿಂದ ರಾಜ್ಯದಲ್ಲಿ 3 ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವರ ನೀಡಿದ ಅಧಿಕಾರಿಗಳು, 2019-23ರ ನಡುವಿನ 5 ವರ್ಷಗಳ ಅವಧಿಯಲ್ಲಿ 6395 ಆನೆಗಳಿರುವ ಕರ್ನಾಟಕದಲ್ಲಿ 160 ಸಾವು ಸಂಭವಿಸಿದೆ, ಆದರೆ ಛತ್ತೀಸಗಢದಲ್ಲಿ ಇರುವುದೇ 247 ಆನೆ ಆದರೆ, ಅಲ್ಲಿ ಆನೆಗಳಿಂದ ಇದೇ 5 ವರ್ಷದ ಅವಧಿಯಲ್ಲಿ 313 ಸಾವು ಸಂಭವಿಸಿದೆ ಎಂದು ತಿಳಿಸಿದರು.

ಒಡಿಶಾದಲ್ಲಿ 1976 ಆನೆಗಳಿದ್ದು ಅಲ್ಲಿ 2019-23ರ ಅವಧಿಯಲ್ಲಿ 624 ಜನರು ಮೃತಪಟ್ಟಿದ್ದರೆ, 700 ಆನೆ ಇರುವ ಪಶ್ಚಿಮ ಬಂಗಾಳದಲ್ಲಿ 436 ಸಾವು ಸಂಭವಿಸಿದೆ. 2761 ಆನೆಗಳಿರುವ ತಮಿಳುನಾಡಿನಲ್ಲಿ ಇದೆ ಅವಧಿಯಲ್ಲಿ 256 ಮಂದಿ ಸಾವಿಗೀಡಾಗಿದ್ದರೆ, 1793 ಆನೆಗಳಿರುವ ಕೇರಳದಲ್ಲಿ 124 ಜನರು ಮೃತಪಟ್ಟಿದ್ದಾರೆ ಎಂಬ ಅಂಕಿ ಅಂಶ ನೀಡಿದರು.

RELATED ARTICLES

Latest News