Wednesday, April 9, 2025
Homeರಾಜ್ಯ2026ರೊಳಗೆ ಎಡಪಂಥಿಯ ಉಗ್ರವಾದ ಕೊನೆಗಾಣಿಸಲು ಅಮಿತ್ ಶಾ ಕರೆ

2026ರೊಳಗೆ ಎಡಪಂಥಿಯ ಉಗ್ರವಾದ ಕೊನೆಗಾಣಿಸಲು ಅಮಿತ್ ಶಾ ಕರೆ

Eliminate Left Wing Extremism by March 2026: Shah

ರಾಯ್‌ಪುರ, ಡಿ 17 (ಪಿಟಿಐ) ಮಾರ್ಚ್‌ 2026 ರೊಳಗೆ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ತೊಡೆದುಹಾಕಲು ಎಲ್ಲಾ ಭದ್ರತಾ ಪಡೆಗಳು ಮತ್ತು ಏಜೆನ್ಸಿಗಳು ಜಂಟಿ ಪ್ರಯತ್ನಗಳನ್ನು ಮಾಡಬೇಕು ಎಂದು ಕೇಂದ್ರ ಗಹ ಸಚಿವ ಅಮಿತ್‌ ಶಾ ಕರೆ ನೀಡಿದ್ದಾರೆ.

ಈ ಪ್ರಯತ್ನದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಮುಖ ಪಾತ್ರ ವಹಿಸಲಿದೆ ಎಂದು ಛತ್ತೀಸ್‌‍ಗಢದಲ್ಲಿ ಎಡಪಂಥೀಯ ಉಗ್ರವಾದದ (ಎಲ್‌ಡಬ್ಲ್ಯುಇ) ಪರಿಸ್ಥಿತಿಯನ್ನು ನಿರ್ಣಯಿಸಲು ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶಾ ಮಾತನಾಡಿದರು.

ಮುಖ್ಯಮಂತ್ರಿ ವಿಷ್ಣು ದೇವ್‌ ಸಾಯಿ, ಉಪ ಮುಖ್ಯಮಂತ್ರಿ ವಿಜಯ್‌ ಶರ್ಮಾ, ಕೇಂದ್ರ ಗಹ ಕಾರ್ಯದರ್ಶಿ ಗೋವಿಂದ್‌ ಮೋಹನ್‌, ಛತ್ತೀಸ್‌‍ಗಢದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್‌‍ ಮಹಾನಿರ್ದೇಶಕರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್‌‍ ಪಡೆಗಳ (ಸಿಎಪಿಎಫ್‌‍) ಮಹಾನಿರ್ದೇಶಕರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಅಧಿಕತ ಪ್ರಕಟಣೆ ತಿಳಿಸಿದೆ.

ಸಭೆಯಲ್ಲಿ, ಮಾರ್ಚ್‌ 2026 ರೊಳಗೆ ಎಲ್‌ಡಬ್ಲ್ಯೂಡಿ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಸಾಧಿಸಲು ಜಂಟಿ ಪ್ರಯತ್ನಗಳನ್ನು ಮಾಡುವಂತೆ ಷಾ ಎಲ್ಲಾ ಪಡೆಗಳು ಮತ್ತು ಏಜೆನ್ಸಿಗಳನ್ನು ಕೇಳಿದರು ಎಂದು ಅದು ಹೇಳಿದೆ.

ಛತ್ತೀಸ್‌‍ಗಢ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಸಂಘಟಿತ ರೀತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿವೆ ಮತ್ತು ಕಳೆದ ಒಂದು ವರ್ಷದಲ್ಲಿ ಉಗ್ರರ ಮೇಲೆ ಗರಿಷ್ಠ ಹಾನಿಯನ್ನುಂಟುಮಾಡಿದೆ, ಇದು ದೊಡ್ಡ ಯಶಸ್ಸನ್ನು ಹೊಂದಿದೆ ಎಂದು ಷಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES

Latest News