Friday, April 4, 2025
Homeಅಂತಾರಾಷ್ಟ್ರೀಯ | Internationalಎಲಾನ್ ಮಸ್ಕ್ ವಿಶ್ವದ ಶ್ರೀಮಂತ ಉದ್ಯಮಿ

ಎಲಾನ್ ಮಸ್ಕ್ ವಿಶ್ವದ ಶ್ರೀಮಂತ ಉದ್ಯಮಿ

Elon Musk is the world's richest businessman

ನ್ಯೂಯಾರ್ಕ್,ಏ.3- ವಿಶ್ವದ ಶ್ರೀಮಂತರ ಪಟ್ಟಿ ಅಮೆರಿಕದ ಎಲಾನ್ ಮಸ್ಕ್ ಮೊದಲ ಸ್ಥಾನ ಪಡೆದಿದ್ದಾರೆ. ಫೋರ್ಟ್ಸ್ ಮ್ಯಾಗಜಿನ್ ಬಡುಗಡೆ ಮಾಡಿರುವ ಪಟ್ಟಿಯಲ್ಲಿ ಉದ್ಯಮಿ ಹಾಗು ಅಮೆರಿದ ಟ್ರಂಪ್ ಸರ್ಕಾರದ ಸಚಿವ ಎಲಾನ್ ಮಸ್ಕ್ 29 ಲಕ್ಷ ಕೋಟಿ ರು.ಆಸ್ತಿ ಓಡೆಯನಾಗಿದ್ದು ವಿಶ್ವದ ಶ್ರೀಮಂತ ವ್ಯಕ್ತಿ ಎಂದು ಹೆಸರಿಸಿದೆ.

ಫೇಸ್‌ಬುಕ್ ಮಾರ್ಕ್ ಜುಗರಬರ್ಗ್ 19 ಲಕ್ಷ ಕೋಟಿ ರು.ನೊಂದಿಗೆ 2ನೇ ಸ್ಥಾನದಲ್ಲಿದ್ದರೆ .ಜೆಬ್ ಬೆಜೋಸ್ 18 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ. ಇನ್ನು ಭಾರತದ ಮುಕೇಶ್ ಅಂಬಾನಿ ಟಾಪ್ 10ರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಪ್ರಸ್ತುತ 7.85 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 18ನೇ ಸ್ಥಾನ ಪಡೆದಿದ್ದಾರೆ.

ಉಳಿದಂತೆ 4.8 ಲಕ್ಷ ಕೋಟಿ ರು. ಆಸ್ತಿ ಹೊಂದಿರುವ ಗೌತಮ್ ಅದಾನಿ 28ನೇ ಸ್ಥಾನ, 4.7 ಲಕ್ಷ ಕೋಟಿ ರು. ಆಸ್ತಿ ಹೊಂದಿರುವ ಸಾವಿತ್ರಿ ಜಿಂದಾಲ್ 56ನೇ ಸ್ಥಾನ ಪಡೆದಿದ್ದಾರೆ. ವರದಿ ಅನ್ವಯ ವಿಶ್ವದಲ್ಲಿ 3028 ಶತಕೋಟ್ಯಧಿಪತಿಗಳಿದ್ದಾರೆ.

ಇವರ ಒಟ್ಟು ಸಂಪತ್ತು 1,368 ಲಕ್ಷ ಕೋಟಿ ರು. ಆಗಿದೆ. ಪಟ್ಟಿಯಲ್ಲಿ ಅಮೆರಿಕ (902 ಶ್ರೀಮಂತರು) ಅಗ್ರಸ್ಥಾನದಲ್ಲಿದೆ, ಚೀನಾ (516) ಮತ್ತು ಭಾರತ (205) 2 ಮತ್ತು 3ನೇ ಸ್ಥಾನದಲ್ಲಿವೆ.

RELATED ARTICLES

Latest News