ಸ್ಯಾನ್ ಫ್ರಾನ್ಸಿಸ್ಕೋ,ಜ.23- ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯತ್ವ ಪಡೆಯದಿರುವುದು ಅಸಂಬದ್ಧ ಎಂದು ಟೆಸ್ಲಾ ಸಿಇಒ ಮತ್ತು ಎಕ್ಸ್ ಮಾಲೀಕ ಎಲೋನ್ ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ. ಮಾತ್ರವಲ್ಲ ಅವರು ವಿಶ್ವಸಂಸ್ಥೆಯ ಸಂಸ್ಥೆಗಳ ಪರಿಷ್ಕರಣೆಗೆ ಒತ್ತಾಯಿಸಿದ್ದಾರೆ.
ಅಮೇರಿಕನ್ ವಾಣಿಜ್ಯೋದ್ಯಮಿ ಮಸ್ಕ್ ಅವರು ವಿಶ್ವಸಂಸ್ಥೆ ಪರಿಷ್ಕರಣೆಯಲ್ಲಿನ ಸಮಸ್ಯೆಯನ್ನು ಎತ್ತಿ ತೋರಿಸಿದರು ಮತ್ತು ಹೆಚ್ಚುವರಿ ಶಕ್ತಿಯನ್ನು ಹೊಂದಿರುವ ದೇಶಗಳು ಅದನ್ನು ಬಿಟ್ಟುಕೊಡಲು ಬಯಸುವುದಿಲ್ಲ ಎಂದು ಅವರು ಎಕ್ಸ್ ಮಾಡಿದ್ದಾರೆ. ಕೆಲವು ಹಂತದಲ್ಲಿ,ವಿಶ್ವಸಂಸ್ಥೆಗಳ ಪರಿಷ್ಕರಣೆ ಅಗತ್ಯವಿದೆ. ಸಮಸ್ಯೆಯೆಂದರೆ ಹೆಚ್ಚಿನ ಅಧಿಕಾರ ಹೊಂದಿರುವವರು ಅದನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಭಾರತವು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನವನ್ನು ಹೊಂದಿಲ್ಲ, ಭೂಮಿಯ ಮೇಲೆ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದ್ದರೂ ಸಹ, ಇದು ಅಸಂಬದ್ಧವಾಗಿದೆ ಇದರ ಜತೆಗೆ ಆಫ್ರಿಕಾವು ಒಟ್ಟಾಗಿ ಶಾಶ್ವತ ಸ್ಥಾನವನ್ನು ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.
ಅಯೋಧ್ಯೆ ನೆನಪು ಇಂದಿಗೂ ಮಾಸುವುದಿಲ್ಲ ; ಮೋದಿ
ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಕೂಡ ಯುಎನ್ ಇಂದಿನ ಜಗತ್ತನ್ನು ಪ್ರತಿಬಿಂಬಿಸಬೇಕೆಂದು ಭಾವೋದ್ರಿಕ್ತ ಮನವಿ ಮಾಡಿದ್ದರು. ಸೆಕ್ಯುರಿಟಿ ಕೌನ್ಸಿಲ್‍ನಲ್ಲಿ ಆಫ್ರಿಕಾಕ್ಕೆ ಇನ್ನೂ ಒಬ್ಬ ಖಾಯಂ ಸದಸ್ಯರ ಕೊರತೆಯಿದೆ ಎಂಬುದನ್ನು ನಾವು ಹೇಗೆ ಒಪ್ಪಿಕೊಳ್ಳಬಹುದು? ಸಂಸ್ಥೆಗಳು ಇಂದಿನ ಜಗತ್ತನ್ನು ಪ್ರತಿಬಿಂಬಿಸಬೇಕು, 80 ವರ್ಷಗಳ ಹಿಂದೆ ಅಲ್ಲ. ಸೆಪ್ಟೆಂಬರ್‍ನ ಭವಿಷ್ಯದ ಶೃಂಗಸಭೆಯು ಜಾಗತಿಕ ಆಡಳಿತ ಸುಧಾರಣೆಗಳನ್ನು ಪರಿಗಣಿಸಲು ಮತ್ತು ನಂಬಿಕೆಯನ್ನು ಮರು ನಿರ್ಮಿಸಲು ಒಂದು ಅವಕಾಶವಾಗಿದೆ ಗುಟೆರಸ್ ಜನವರಿ 21 ರಂದು ಪೋಸ್ಟ್‍ನಲ್ಲಿ ಹೇಳಿದ್ದರು.