ಸಿನಿಮಾ ಅನ್ನೋದು ಕೇವಲ ಮನರಂಜನೆ ಮಾತ್ರವಲ್ಲ ಗಟ್ಟಿ ವಿಚಾರವೂ ಅಡಗಿರುತ್ತೆ. ಅದು ಎಲ್ಲಾ ಸಿನಿಮಾಗಳಲ್ಲೂ ಇರುವುದಿಲ್ಲ. ಕೆಲವೊಂದು ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶವಿದ್ದರೆ, ಇನ್ನು ಕೆಲವು ಸಿನಿಮಾದಲ್ಲಿ ನಕ್ಕು ನಲಿದು ಎದ್ದು ಬರುವ ಕಥೆಯಷ್ಟೇ ಇರುತ್ತದೆ. ಆದರೆ ಕೆಲವೊಂದು ಸಿನಿಮಾದಲ್ಲಿ ಮಾತ್ರ ನಮ್ಮ ನೆಲದ ತುಡಿತ, ಮಿಡಿತವಿರುತ್ತದೆ. ನಮ್ಮ ಅಕ್ಕ ಪಕ್ಕದವರನ್ನೇ ನಾವೂ ಗಮನಿಸಿರಲ್ಲ, ಅಂಥವರ ಬದುಕು ಬವಣೆ ಇರುತ್ತದೆ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ‘ಎಲ್ಟು ಮುತ್ತಾ’ ಸಿನಿಮಾ.
ಈ ಸಿನಿಮಾದ ಕಥೆ ಬಂದು ಕೊಡಗು ಭಾಗದ್ದಾಗಿದೆ. ಹಾಗಂತ ನಮಗಿದು ಟಚ್ ಆಗಲ್ಲಾ ಅಂತಲ್ಲ. ಡೋಲು ಬಡಿಯುವ ಸಮುದಾಯದವರು ಯಾವ ಭಾಗದಲ್ಲಿ ಇರಲ್ಲ ಹೇಳಿ. ಊರು, ಹಳ್ಳಿ, ನಗರ ಎಲ್ಲಾ ಕಡೆಯಲ್ಲೂ ಇರ್ತಾರೆ. ಹಾಗೇ ಅವರ ಅವಶ್ಯಕತೆ ಎಲ್ಲರಿಗೂ ಇರುತ್ತದೆ.
ಅವಶ್ಯಕತೆ ತೀರಿದ ಮೇಲೆ..? ಈ ಪ್ರಶ್ನೆ ನಮ್ಮನ್ನು ಕಾಡುವಂತೆ ಮಾಡಿರುವುದೇ ಈ ಎಲ್ಟು ಮುತ್ತಾ ಸಿನಿಮಾ. ಸದ್ಯ ಟೀಸರ್ ನಲ್ಲಿಯೇ ಮನದಾಳಕ್ಕೆ ಇಳಿದಿರುವ ಟೀಸರ್ ಒಳ್ಳೆ ರೆಸ್ಪಾನ್ಸ ಪಡೆದುಕೊಳ್ಳುತ್ತಿದೆ. ಅದುವೆ 5 ಲಕ್ಷಕ್ಕೂ ಅಧಿಕ ಮಂದಿ ಕಳೆದ ಎರಡು ವಾರದಲ್ಲಿ ವೀಕ್ಷಣೆ ಮಾಡಿದ್ದಾರೆ. ಈ ಟೀಸರ್ ಇನ್ನು ಜನರನ್ನ ಕನೆಕ್ಟ್ ಆಗ್ತಾನೆ ಇರುವುದು ಇಡೀ ತಂಡದದ ಖುಷಿಯನ್ನ ಹೆಚ್ಚಿಸಿದೆ.
ಹೈ5 ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ರಿಲೀಸ್ ಆಗಿದ್ದು, ಕಮೆಂಟ್ ಗಳನ್ನೊಮ್ಮೆ ನೀವೂ ನೋಡಬೇಕು. ಮಾತುಗಳೇ ಬರುತ್ತಿಲ್ಲ ಟೀಸರ್ ನೋಡಿ ಅಂತ ಮನದಾಳದ ಮಾತುಗಳನ್ನ ಹೇಳಿದ್ದಾರೆ. ಈ ಸಿನಿಮಾ ಬೇರೆ ಭಾಷೆಗೂ ಡಬ್ ಮಾಡಿ ಅಂತ ಸಲಹೆ ಕೂಡ ಕೊಟ್ಟಿದ್ದಾರೆ.

ಒಟ್ಟಾರೆ ಟೀಸರ್ ಅನ್ನು ಇಷ್ಟಪಟ್ಟಿರುವ ಜನ ಟ್ರೇಲರ್ ಗೋಸ್ಕರ ಕಾಯ್ತಾ ಇದ್ದಾರೆ. ಈ ಸಿನಿಮಾಗೆ ರಾ ಸೂರ್ಯ ಆಕ್ಷನ್ ಕಟ್ ಹೇಳಿದ್ದು, ಜೊತೆಗೆ ಪ್ರಮುಖ ಪಾತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ. ಹೈಫೈ ಸ್ಟುಡಿಯೋಸ್ ಮೂಲಕ ಸತ್ಯ ಶ್ರೀನಿವಾಸನ್ ನಿರ್ಮಾಣ ಮಾಡಿದ್ದಾರೆ. ಪ್ರಸನ್ನ ಕೇಶವ ಮ್ಯೂಸಿಕ್ ನೀಡಿದ್ದಾರೆ. ಶೌರ್ಯ ಹಾಗೂ ರಾ ಸೂರ್ಯ ಎಲ್ಟು ಮುತ್ತಾ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ನವೀನ್ ಪಡೀಲ್, ಪ್ರಿಯಾಂಕ ಮಳಲಿ, ಯಮುನಾ ಶ್ರೀನಿಧಕ, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಇತ್ತೀಚೆಗೆ ಪವೀಂದ್ರ ಕೂಡ ಸಿನಿಮಾ ತಂಡ ಸೇರಿದ್ದಾರೆ.
- “ಸಿದ್ದರಾಮಯ್ಯನವರೇ, ಗುಲಾಮಿ ಸಂಸ್ಕೃತಿಯ ಕಾಂಗ್ರೆಸ್ ನೆರಳಿನಲ್ಲಿ ನಿಂತು RSS ಕುರಿತು ಮಾತನಾಡುವ ಅರ್ಹತೆ ನಿಮಗಿಲ್ಲ”
- ವಿಶ್ವದ ಅತ್ಯಂತ ದುಬಾರಿ ನಿಸಾರ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಜೋಡಿಸುವಲ್ಲಿ ಇಸ್ರೋ -ನಾಸಾ ಯಶಸ್ವಿ
- ಭಾರತ- ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ : ಮತೊಮ್ಮೆ ಕನವರಿಸಿದ ಟ್ರಂಪ್
- ಶ್ರೀ ಕ್ಷೇತ್ರದ ಕುರಿತು ಅಪಪ್ರಚಾರ ಖಂಡಿಸಿ ಬಿಜೆಪಿಯಿಂದ ‘ಧರ್ಮಸ್ಥಳ ಚಲೋ’ ಅಭಿಯಾನ
- ಧರ್ಮಸ್ಥಳ ಅನಾಮಿಕನ ಪ್ರಕರಣ : ಎಸ್ಐಟಿಯಿಂದ ಮಧ್ಯಂತರ ವರದಿ