ಹಾಂಗ್ ಕಾಂಗ್, ಅ.20-ಸರಕು ವಿಮಾನವೊಂದು ಹಾಂಗ್ ಕಾಂಗ್‌ನ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಇಳಿಯುವಾಗ ರನ್‌ವೇಯಿಂದ ಜಾರಿ ಸಮುದ್ರಕ್ಕೆ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್‌್ಸನ ದುಬೈನಿಂದ ಆಗಮಿಸುತ್ತಿದ್ದ ವಿಮಾನವು ಬೆಳಗಿನ ಜಾವ 3.50 ರ ಸುಮಾರಿಗೆ ಹಾಂಗ್ ಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹಾಂಗ್ ಕಾಂಗ್ ವಿಮಾನ ನಿಲ್ದಾಣ ಪ್ರಾಧಿಕಾರಸ ಅಧಿಕಾರಿ ತಿಳಿಸಿದ್ದಾರೆ.
ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವಿಮಾನ ನಿಲ್ದಾಣದಲ್ಲಿ ವಾಹನದಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ಆರಂಭಿಕ ವರದಿಗಳು ತಿಳಿಸಿವೆ.
ಏಷ್ಯಾದ ಅತ್ಯಂತ ಜನನಿಬಿಡಿಯಲ್ಲಿ ಒಂದಾದ ಹಾಂಗ್ ಕಾಂಗ್ ವಿಮಾನ ನಿಲ್ದಾಣದ ಉತ್ತರ ರನ್‌ವೇಯನ್ನು ಪ್ರಸ್ತುತ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಇತರ ಎರಡು ರನ್‌ವೇಗಳು ಕಾರ್ಯನಿರ್ವಹಿಸುತ್ತಲೇ ಇವೆ.
ಬೋಯಿಂಗ್ 747 ಸರಕು ವಿಮಾನವು ಟರ್ಕಿಶ್ ಏರ್ ಕಾರ್ಗೋ ವಾಹಕ ಏರ್‌ಎಸಿಟಿ ವಿಮಾನವಾಗಿದ್ದು, ಎಮಿರೇಟ್‌್ಸಸ್ಕೈಕಾರ್ಗೋಗೆ ಹಾರಾಟ ನಡೆಸುತ್ತಿದ್ದು, ವಿಮಾನ ಸಂಖ್ಯೆ 9788. ಇದು ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿತ್ತು ಎಂದು ಗೊತ್ತಾಗಿದೆ.
ಹಾಂಗ್ ಕಾಂಗ್‌ನ ನಾಗರಿಕ ವಿಮಾನಯಾನ ಇಲಾಖೆಯು ವಿಮಾನಯಾನ ಸಂಸ್ಥೆ ಮತ್ತು ಅಪಘಾತದಲ್ಲಿ ಭಾಗಿಯಾಗಿರುವ ಇತರರ ವಿರುದ್ದ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ