ಬೆಂಗಳೂರು,ಸೆ.15- ಅಪಘಾತದಿಂದ ರಸ್ತೆ ಬದಿ ನರಳುತ್ತಿದ್ದ ಶ್ವಾನ ಗಮನಿಸಿ ಆರೈಕೆ ಮಾಡುತ್ತಿದ್ದ ಫ್ಯಾಷನ್ ಡಿಸೈನರ್‌ಗೆ ಲೈಂಗಿಕ ಕಿರುಕುಳ ವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಗಲೂರಿನ ಮಂಜನಾಥ್ (27) ಬಂಧಿತ ಆರೋಪಿ.ಈತ ಡಿಪ್ಲೋಮೋ ಎಂಜಿನಿಯರ್ ವ್ಯಾಸಂಗ ಮಾಡಿದ್ದಾನೆ.
ಕಳೆದ ಭಾನುವಾರ ರಾತ್ರಿ 11.50 ರ ಸುಮಾರಿನಲ್ಲಿ ಫ್ಯಾಷನ್ ಡಿಸೈನರ್‌ರೊಬ್ಬರು ಕಾರಿನಲ್ಲಿ ಜಕ್ಕೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಪೆಟ್ರೋಲ್ ಬಂಕ್ ಮುಂದಿನ ರಸ್ತೆಯಲ್ಲಿ ಶ್ವಾನ ನರಳಾಡುತ್ತಿದ್ದುದನ್ನು ಗಮನಿಸಿದ್ದಾರೆ.ತಕ್ಷಣ ತಮ ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿ ಶ್ವಾನದ ರಕ್ಷಣೆಗೆ ಹೋಗಿದ್ದಾರೆ. ಆ ವೇಳೆ ಕೈಗೆ ರಕ್ತ ಆಗಿದ್ದರಿಂದ ಕೈ ತೊಳೆದುಕೊಳ್ಳುತ್ತಿದ್ದರು.
ಅದೇ ಸಮಯಕ್ಕೆ ಇದೇ ಮಾರ್ಗದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಆರೋಪಿ ಮಂಜುನಾಥ್ ಆ ಯುವತಿ ಸಮೀಪ ಹೋಗಿ ಅಸಭ್ಯವಾಗಿ ವರ್ತಿಸಿ ಅಲ್ಲಿಂದ ತೆರಳಿದ್ದಾನೆ.ಕೆಲ ನಿಮಿಷದ ಬಳಿಕ ಮತ್ತೆ ಈ ಸ್ಥಳಕ್ಕೆ ವಾಪಸ್ ಬಂದು ಮತ್ತೆ ಖಾಸಗಿ ಅಂಗ ಮುಟ್ಟಿ ಪರಾರಿಯಾಗಿದ್ದನು.
ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಗರದಲ್ಲಿ ಆಗಾಗ್ಗೆ ಅಲ್ಲಲ್ಲಿ ಬ್ಯಾಡ್ ಟಚ್ ಪ್ರಕರಣಗಳು ನಡೆದಿವೆ. ಅಂತಹ ಬ್ಯಾಡ್ ಟಚ್ ಮಾಡಿ ಪರಾರಿಯಾಗಿ ಎಲ್ಲೇ ಅಡಗಿದ್ದರೂ ಸಹ ಪೊಲೀಸರು ಬಿಡದೆ ಅವರ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.