ಹಾಸನ,ಜ.1- ನದಿಗೆ ಹಾರಿ ಎಂಜಿನಿಯರ್ ಆತಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗೊರೂರುಶೆಟ್ಟಿಹಳ್ಳಿ ಬಳಿಯ ಹೇಮಾವತಿ ನಾಲೆಯಲ್ಲಿ ನಡೆದಿದೆ.ಪ್ರಮೋದ್ (35) ಆತಹತ್ಯೆ ಮಾಡಿಕೊಂಡ ಎಂಜಿನಿಯರ್.
ಮೂಲತಃ ನಗರದ ಇಂದಿರಾನಗರದ ನಿವಾಸಿಯಾಗಿದ್ದು, ಕಳೆದ ಡಿ.29 ರ ಸಂಜೆ ಮನೆಯಲ್ಲಿಯೇ ಫೋನ್ ಬಿಟ್ಟು ಹೊರಗಡೆ ತೆರಳಿದ್ದು, ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಅದರಿಂದ ಆತಂಕಗೊಂಡ ಪೋಷಕರು ಸ್ನೇಹಿತರ ಹಾಗೂ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಕೂಡ ಆತ ಪತ್ತೆಯಾಗದ ಕಾರಣ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೇಮಾವತಿ ನದಿಯ ಸೇತುವೆಯ ಬಳಿ ಟಿವಿಎಸ್ ಜ್ಯುಪಿಟರ್ ನಿಂತಿದ್ದು, ಅದರಲ್ಲಿ ಬ್ಯಾಂಕಿನ ಪಾಸ್ಬುಕ್ಗಳು ಪತ್ತೆಯಾಗಿವೆ. ಸ್ಥಳೀಯರು ಪಾಸ್ಬುಕ್ನಲ್ಲಿ ವಿಳಾಸ ಮತ್ತು ಫೋನ್ ನಂಬರನ್ನು ಪರಿಶೀಲಿಸಿ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿಯಲ್ಲಿ ಹುಡುಕಾಟ ನಡೆಸಿದ್ದು, ಇಂದು ಬೆಳಿಗ್ಗೆ ಶವ ಪತ್ತೆಯಾಗಿದೆ.ಈ ಸಂಬಂಧ ಗೊರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಆತಹತ್ಯೆಗೆ ಕಾರಣವೇನೆಂಬುದು ತಿಳಿದುಬಂದಿಲ್ಲ. ತನಿಖೆಯ ನಂತರ ಸತ್ಯಾಸತ್ಯತೆ ತಿಳಿದುಬರಲಿದೆ.